ಮಗಳನ್ನ ಟೆನ್ನಿಸ್ ಪ್ಲೇಯರ್ ಮಾಡೋದು ಅವರ ಅಪ್ಪನ ಆಸೆ, ರಾಧಿಕಾ ಕುಮಾರಸ್ವಾಮಿ ಓಪನ್ ಟಾಕ್

 | 
Vh

ಕನ್ನಡ ಚಿತ್ರರಂಗ ಕಂಡ ಅದ್ಭುತ ನಟಿ ಹಾಗೂ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ತಮ್ಮ ಮುಂದಿನ ಸಿನಿಮಾ ಬೈರಾದೇವಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. 2002ರಲ್ಲಿ ನಿನಗಾಗಿ ಚಿತ್ರದ ಮೂಲಕ ನಾಯಕಿಯಾಗಿ ಮಿಂಚುತ್ತಿರುವ ರಾಧಿಕಾ, 2012ರಲ್ಲಿ ಲಕ್ಕಿ ಚಿತ್ರದ ಮೂಲಕ ನಿರ್ಮಾಪಕಿಯಾದರು. ರಾಕಿಂಗ್ ಸ್ಟಾರ್ ಯಶ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ ಎನ್ನುವ ಹೆಗ್ಗಳಿಕೆ ಇವರದ್ದು.ಗೌರಿ ಹಬ್ಬದ ದಿನ ಮೊದಲ ಸಲ ತಮ್ಮ ಫ್ಯಾಮಿಲಿ ಬಗ್ಗೆ ರಾಧಿಕಾ ಹಂಚಿಕೊಂಡಿದ್ದಾರೆ. 

ರೀಲ್ ಆಂಡ್ ರಿಯಲ್‌ ಲೈಫ್‌ನಲ್ಲಿ ಬಹಳ ಕಡಿಮೆ ಸ್ನೇಹಿತರನ್ನು ಹೊಂದಿರುವ ರಾಧಿಕಾ ಕುಮಾರಸ್ವಾಮಿ ತಮ್ಮ ಫ್ರೀ ಟೈಂನ ಕುಟುಂಬಸ್ಥರ ಜೊತೆ ಕಳೆಯುತ್ತಾರಂತೆ. ಸಿನಿಮಾ ಹೊರತು ಪಡಿಸಿ ನಾನು ತುಂಬಾ ಟ್ರ್ಯಾವಲ್ ಮಾಡುತ್ತೀನಿ ಸಮಯಕ್ಕೆ ಸಿಕ್ಕಾಗ ಫ್ಯಾಮಿಲಿ ಜೊತೆ ಇರುತ್ತೀನಿ. ನನ್ನ ಮಗಳು, ತಾಯಿ, ಅಣ್ಣನ ಇಬ್ಬರು ಮಕ್ಕಳು ನನ್ನ ಅತ್ತಿಗೆ....ಹೀಗೆ ನನ್ನದೊಂದು ಸಣ್ಣ ಕುಟುಂಬದ ಜೊತೆ ಸಮಯ ಕಳೆಯಲು ಇಷ್ಟ ಪಡುತ್ತೀನಿ.

ಜಾಸ್ತಿ ದಿನ ಫ್ರೀ ಇದ್ದಾಗ ದುಬೈ ಹೋಗೋಣ, ಮಾಲ್ಡೀವ್ಸ್ ಹೋಗೋಣ, ಡೆಲ್ಲಿ ಹೋಗೋಣ ಅಂತ ಹೊರಡು ಬಿಡುತ್ತೀನಿ, ಒಂದೆರಡು ದಿನ ರಜೆ ಅಂದ್ರೆ ಲೋಕಲ್ ಟ್ರಿಪ್ ಮಾಡುತ್ತೀನಿ ಕೂರ್ಗ್‌ ಅಲ್ಲಿ ಇಲ್ಲಿ ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ರಾಧಿಕಾ ಮಾತನಾಡಿದ್ದಾರೆ.ಮಗಳನ್ನು ಟೆನ್ನಿಸ್ ಪ್ಲೇಯರ್ ಮಾಡಬೇಕು ಎಂದು ಅವರ ತಂದೆ ಮತ್ತು ನನ್ನ ಆಸೆ ಆಗಿತ್ತು, ಈಗ ನಮ್ಮ ಆಸೆಯನ್ನು ಆಕೆ ಪೂರೈಸುತ್ತಿದ್ದಾಳೆ.

ಇದುವರೆಗೂ ಅಕೆ ಮೇಲೆ ನಾವು ಯಾವುದೇ ಪ್ರೆಶರ್ ಹಾಕಿಲ್ಲ ಏಕೆಂದರೆ ನನ್ನ ತಂದೆ ತಾಯಿ ಯಾವುದೇ ರೀತಿಯಲ್ಲಿ ಪ್ರೆಶರ್ ಹಾಕಿಲ್ಲ...ಇದೇ ಮಾಡು ಹೀಗೆ ಮಾಡು ಎಂದು ಹೇಳಿಲ್ಲ. ತುಂಬಾ ಒತ್ತಡ ಹಾಕಿದರೆ ಮಕ್ಕಳು ತಪ್ಪು ದಾರಿ ಹಿಡಿಯುವ ಸಾಧ್ಯತೆಗಳು ಜಾಸ್ತಿ ಇರುತ್ತದೆ ಹೀಗಾಗಿ ಮಗಳಿಗೆ ನಾನು ಪ್ರೆಶರ್ ಹಾಕುತ್ತಿಲ್ಲ. ಅವರ ಅಪ್ಪನಿಗೆ ಒಂದು ಕನಸು ಇತ್ತು...ಮಗಳು ಟೆನ್ನಿಸ್ ಪ್ಲೇಯರ್ ಆಗಬೇಕು ಎಂದು..ಅದೇ ಹಾದಿಯಲ್ಲಿ ಆಕೆ ಅದನ್ನು ಪೂರೈಸುತ್ತಿದ್ದಾಳೆ ಎಂದು ರಾಧಿಕಾ ಹೇಳಿದ್ದಾರೆ. 

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.