ರಾಧಿಕಾ ಪಂಡಿತ್ ಕೈಯಲ್ಲಿ ಬಿಳಿ ಬಣ್ಣದ ಉಂಗುರ; ಗಂಡನನ್ನು ಹಿಡಿತದಲ್ಲಿಡಲು ಹೊಸ ಪ್ಲಾನ್

 | 
ಗದ

ಸ್ಯಾಂಡಲ್ ವುಡ್ ಪ್ರಿನ್ಸೆಸ್ ಎಂದೆ ಖ್ಯಾತಿ ಪಡೆದ ನಟಿ ರಾಧಿಕಾ ಪಂಡಿತ್, ಸದ್ಯ ಕೆಲ ವರ್ಷಗಳಿಂದ ಸಿನಿಮಾರಂಗದಿಂದ ನಟನೆಯಿಂದ ಸಂಪೂರ್ಣವಾಗಿ ಬ್ರೇಕ್ ಪಡೆದು, ತಮ್ಮ ಸಂಸಾರ, ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಸ್ಯಾಂಡಲ್ವುಡ್ ನ ಬಹುಬೇಡಿಕೆಯ ನಟಿ ರಾಧಿಕಾ ಪಂಡಿತ್, ಕನ್ನಡ ಚಿತ್ರರಂಗಕ್ಕೆ ಹಿಟ್ ಚಿತ್ರಗಳನ್ನು ನೀಡಿರುವ ರಾಧಿಕಾ ಮದುವೆಯಾಗಿ, ಪ್ರೆಗ್ನೆಂಟ್ ಆದ ಬಳಿಕ ನಟನೆಗೆ ಬ್ರೇಕ್ ಕೊಡಲು ನಿರ್ಧರಿಸಿದ್ದರು.

ಸದ್ಯ ತಮ್ಮ ಮಕ್ಕಳೊಡನೆ ಆಟವಾಡುತ್ತಾ, ಜೀವನವನ್ನು ಎಂಜಾಯ್ ಮಾಡ್ತಿದ್ದಾರೆ ಈ ಚೆಲುವೆ ರಾಧಿಕಾ ಪಂಡಿತ್ ಅವರನ್ನು ಮತ್ತೆ ತೆರೆ ಮೇಲೆ ನೋಡೋದಕ್ಕೆ ಅಭಿಮಾನಿಗಳು ಕಾಯ್ತ ಇರೋದು ಸುಳ್ಳಲ್ಲ. ನಿನ್ನೆ ರಾಧಿಕಾ ಪಂಡಿತ್ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಆಸ್ಕ್ ಮಿ ಎನಿಥಿಂಗ್ ಎನ್ನುವ ಸೆಷನ್ ನಲ್ಲಿ ಅಭಿಮಾನಿಗಳಿಂದ ಪ್ರಶ್ನೆಗಳನ್ನು ಆಹ್ವಾನಿಸಿದ್ದು, ಅವರು ಕೇಳಿದ ಪ್ರಶ್ನೆಗಳಿಗೆ ರಾಧಿಕಾ ಓಪನ್ ಆಗಿ ಉತ್ತರ ನೀಡಿದ್ದಾರೆ. 

ಇನ್ನು ರಾಧಿಕಾ ಪಂಡಿತ್ ಕೈಯಲ್ಲಿರುವ ವೈಟ್ ಗೋಲ್ಡ್ ಬಗ್ಗೆ ಒಬ್ಬರು ಪ್ರಶ್ನಿಸಿದ್ದು, ಅದಕ್ಕೂ ಕೂಡ ನಟಿ ಮಾಹಿತಿ ನೀಡಿದ್ದು ಈ ಉಂಗುರ ನನಗೆ ತುಂಬಾನೆ ವಿಶೇಷವಾದುದು, ನಾನು ನನ್ನ ಮೊದಲನೇ ವೇತನದಲ್ಲಿ  ತೆಗೆದುಕೊಂಡಂತಹ ಉಂಗುರ ಇದಾಗಿದೆ ಎಂದು ಹೇಳಿದ್ದಾರೆ. ಇನ್ನು ನಿಮಗೆ ನಿಮ್ಮ ಅಮ್ಮ ಮಾಡಿದ, ಯಾವ ಆಹಾರ ಇಷ್ಟ, ಅದೇ ರೀತಿ ನಿಮ್ಮ ಮಕ್ಕಳಿಗೆ ನಿಮ್ಮ ಕೈರುಚಿಯ ಯಾವ ಆಹಾರ ಇಷ್ಟ ಎನ್ನುವ ಪ್ರಶ್ನೆಗೆ ಉತ್ತರಿಸಿದ ರಾಧಿಕಾ ಅಮ್ಮ ಮಾಡುವ ಸಾರಸ್ವತ್, ಗೋವಾ ಶೈಲಿಯ ಆಹಾರಗಳು ನನಗೆ ಇಷ್ಟ.

ಇನ್ನು ಐರಾಗೆ ನಾನು ಬೇಕ್ ಮಾಡೊದೆಲ್ಲ ಇಷ್ಟ, ನಾನು ಅಡುಗೆ ಮಾಡೊದನ್ನೆಲ್ಲಾ ಐರಾ ಒಪ್ಪಿಕೊಂಡಿದ್ದಾಳೆ ಎಂದಿದ್ದಾರೆ. ಇನ್ನು ಅಭಿಮಾನಿಯೊಬ್ಬರು ಮೇಡಂ ನೀವು ಮತ್ತೆ ಯಾವಾಗ ಸಿಮಿಮಾಗೆ ಎಂಟ್ರಿ ಕೊಡುತ್ತೀರಿ. ನಿಮ್ಮ ಎಲ್ಲಾ ಅಭಿಮಾನಿಗಳು ನಿಮ್ಮನ್ನು ಮತ್ತೆ ಬಿಗ್ ಸ್ಕ್ರೀನ್ ನಲ್ಲಿ ನೋಡಲು ಕಾಯ್ತಾ ಇದ್ದೇವೆ ಅಂದಿದ್ದಾರೆ. ಅದಕ್ಕೆ ಉತ್ತರಿಸಿದ ರಾಧಿಕಾ ಸರಿಯಾದ ಸಮಯ ಬಂದಾಗ ಎಂದು ಹೇಳಿ ನಸು ನಗು ಬೀರಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.