ಗಿಚ್ಚಿಗಿಲಿಗಿಲಿ ರಾಘವೇಂದ್ರ ಆತ್ಮಹ ತ್ಯೆಗೆ ನಿರ್ಧಾರ; ಕಷ್ಟದ ದಿನಗಳ‌ ಬಗ್ಗೆ ಬಾಯುಬಿಟ್ಟ ರಾಘು

 | 
Hh

ಹಾಸ್ಯ ನಟ ರಾಘವೇಂದ್ರ ಯಾರಿಗೆ ಗೊತ್ತಪ್ಪ ಅಂತ ಕೇಳುವ ಬದಲು ಗಿಚ್ಚಿ ಗಿಲಿ ಗಿಲಿ ರಾಗಿಣಿ ಯಾರಿಗೆ ಗೊತ್ತು ಎಂದು ಕೇಳಿದರೆ ಕಿರುತೆರೆ ವೀಕ್ಷಕರು ಬೇಗ ಗುರುತಿಸಬಹುದು. ಮಜಾ ಭಾರತ ಎಂಬ ರಿಯಾಲಿಟಿ ಶೋ ಮೂಲಕ ತಮ್ಮ ನಟನ ಸಾಮರ್ಥ್ಯವನ್ನು ಕರುನಾಡಿಗೆ ನಟ ರಾಘವೇಂದ್ರ ಪರಿಚಯಸಿದರು. ನಂತರ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಜನಪ್ರಿಯತೆ ಗಿಟ್ಟಿಸಿಕೊಂಡರು.

 ಹಾಸ್ಯ ನಟನಾಗಿ ಪ್ರತಿ ವೇದಿಕೆಯಲ್ಲಿ ಜನರನ್ನು ನಗಿಸುವ ಇವರು, ತಮ್ಮ ಸ್ತ್ರೀ ಪಾತ್ರಕ್ಕೆ ಸಖತ್ ಫೇಮಸ್.ಅದರಲ್ಲೂ ಗಿಚ್ಚಿ ಗಿಲಿಗಿಲಿ ಸೀಸನ್ ಒಂದು ಹಾಗೂ ಎರಡರಲ್ಲಿ ಬಹಳಷ್ಟು ಪಾಪ್ಯುಲಾರಿಟಿ ಪಡೆದಿರುವ ರಾಘವೇಂದ್ರ ನಾನಾ ರೀತಿಯ ಸ್ತ್ರೀ ಪಾತ್ರಗಳನ್ನು ತೊಟ್ಟು ಜನರ ಮನ ಗೆದ್ದರು. ಅಷ್ಟೇ ಅಲ್ಲದೆ ತಮ್ಮ ಇನ್‌ಸ್ಟಾಗ್ರಾಂನಲ್ಲಿಯೂ ಹಲವಾರು ರೀತಿಯ ಹಾಸ್ಯಾಸ್ಪದ ವಿಡಿಯೋಗಳನ್ನು ಮಾಡುವ ಮೂಲಕ ತಮ್ಮ ಫಾಲೋವರ್ಸ್ ಹಾಗೂ ಅಭಿಮಾನಿಗಳನ್ನು ಸದಾ ರಂಜಿಸುತ್ತಿರುತ್ತಾರೆ ನಟ ರಾಘವೇಂದ್ರ. 

ಮಜಾಭಾರತದಲ್ಲಿ ಇವರ ರಾಗಿಣಿ ಪಾತ್ರ ಅದೆಷ್ಟು ಫೇಮಸ್ ಆಯಿತು ಎಂದರೆ ಇವರಿಗೆ ರಾಗಿಣಿ ಎಂದೇ ಹೆಚ್ಚಿನ ಜನ ಗುರುತಿಸುವಂತಾಗಿದೆ. ಇತ್ತೀಚೆಗಷ್ಟೇ ಒಂದು ಕುಕಿಂಗ್ ಶೋನಲ್ಲಿ ಕಾಣಿಸಿಕೊಂಡ ಇವರು ಇನ್‌ಸ್ಟಾಗ್ರಾಂ ಕ್ವೀನ್ ರೇಷ್ಮಾ ಆಂಟಿ ಅವರೊಂದಿಗೆ ಫುಲ್ ಕಾಮಿಡಿ ಮಾಡಿ ವೈರಲ್ ಆದರು. ಇಷ್ಟೆಲ್ಲ ಆದರೂ 'ಗಿಚ್ಚಿ ಗಿಲಿ ಗಿಲಿ' ಸೀಸನ್ ಮೂರರಲ್ಲಿ ನಟ ರಾಘವೇಂದ್ರ ಅವರು ಕಾಣಿಸಿಕೊಳ್ಳಲಿಲ್ಲ. ಈ ಬಗ್ಗೆ ಅವರ ಅಭಿಮಾನಿಗಳಂತೂ ಬಹಳ ಬೇಸರ ವ್ಯಕ್ತಪಡಿಸಿದ್ದರು.

ಈ ಮೊದಲು ಅವಕಾಶಗಳಿಲ್ಲದೆ ಸಾಯಬೇಕು ಎಂದು ರಾಘವೇಂದ್ರ ತಪ್ಪು ನಿರ್ಧಾರ ಕೈಗೊಂಡಿದ್ದರಂತೆ ಆದರೆ ಇನ್ಮುಂದೆ ಆ ರೀತಿ ಮಾಡುವುದಿಲ್ಲ ಬದಲಾಗಿ ಏನಾದರೂ ಕೆಲಸ ಮಾಡಿಕೊಂಡು ಬದುಕುತ್ತೇನೆ ಹೊರತು ಸಾಯುವ ನಿರ್ಣಯ ಕೈಗೊಳ್ಳುವುದಿಲ್ಲ ಎಂದಿದ್ದಾರೆ. ಈ ಬಗ್ಗೆ ಕೇಳಿ  ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ ಒಂದಿಷ್ಟು ಧೈರ್ಯ ಹೇಳಿರುವ ಇವರ ಅಭಿಮಾನಿಗಳು ಹಾಗೂ ಫಾಲೋವರ್ಸ್, ಗಿಚ್ಚಿ ಗಿಲಿ ಗಿಲಿ ಸೀಸನ್ ಮೂರರಲ್ಲಿ ನಟ ರಾಘವೇಂದ್ರ ಅವರ ಆಗಮನವನ್ನು ಖುಷಿಯಿಂದ ಸಂಭ್ರಮಿಸಿದ್ದಾರೆ‌‌. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.