ವೀಕ್ಷಕರೆ ಮುಂದೆ ಕೈಮುಗಿದ ಭವ್ಯಾ, ಫಿನಾಲೆಗೆ ಎಂಟ್ರಿ ಕೊಟ್ಟ ರಜತ್ ಹಾಗೂ ಭವ್ಯಾ ಗೌಡ
Jan 25, 2025, 08:54 IST
|

ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಿಗ್ಬಾಸ್ 11ರ ಮನೆಯ ವಿನ್ನರ್ ಯಾರಾಗ್ತಾರೆ ಅನ್ನೊದು ವೈರಲ್ ಆಗಲಿದೆ.ಪ್ರಸ್ತುತ ಕೇವಲ ಆರು ಜನ ಮಾತ್ರ ಬಿಗ್‌ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಇದೀಗ ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ನೋಡಲು ಜನಸಾಗರವೇ ಬಿಗ್‌ಬಾಸ್ ಮನೆಗೆ ಬಂದಿದೆ . ಇಂದು ಬಿಡುಗಡೆ ಮಾಡಿದ ವಿಡಿಯೋದಲ್ಲಿ ಅಭಿಮಾನಿಗಳು ಬಿಗ್‌ಬಾಸ್ ಮನೆಗೆ ಪ್ರವೇಶ ಮಾಡಿ ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ಕಂಡು ಜೈಕಾರ ಹಾಕಿದ್ದಾರೆ. ಇದು ನಿನ್ನೆಯ ಮುಂದುವರೆದ ಭಾಗವಾಗಿದ್ದು ಈ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಸ್ನೇಹಿತರೇ...ಹೌದು... ಬಿಗ್‌ಬಾಸ್ ಮನೆಗೆ ಅಭಿಮಾನಿಗಳ ದಂಡು ಆಗಮಿಸಿದೆ. ಸ್ಪರ್ಧಿಗಳು ತಮ್ಮ ಅಭಿಮಾನಿ ಬಳಗ ಕಂಡು ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ. ಜೊತೆಗೆ ಪ್ರತಿಯೊಬ್ಬ ಸ್ಪರ್ಧಿಯೂ ಕೂಡ ಡೈಲಾಗ್ ಹೊಡೆಯುವ ಮೂಲಕ ತಮ್ಮ ಫ್ಯಾನ್ಸ್‌ಗಳನ್ನು ಮತ್ತಷ್ಟು ಖುಷಿ ಪಡಿಸಿದ್ದಾರೆ. ಹಾಗಾದರೆ ವೈರಲ್ ಆದ ಪ್ರೋಮೋದಲ್ಲಿ ಏನಿದೆ? ಯಾರು ಯಾವ ಡೈಲಾಗ್ ಹೊಡೆದರು? ನೋಡ್ಕೊಂಡ್ ಬರೋಣ ಬನ್ನಿ.
ಸ್ನೇಹಿತರೇ... ಈ ಹಿಂದೆಯೇ ಮೋಕ್ಷಿತಾ, ಹನುಮಂತ, ತ್ರಿವಿಕ್ರಮ್ ಮಾತನಾಡಿರುವ ವಿಡಿಯೋ ನೋಡಿದ್ದೇವೆ. ಇಂದು ಉಗ್ರಮ್ ಖ್ಯಾತಿಯ ಮಂಜು. ಭವ್ಯಾ ಗೌಡ. ಹಾಗೂ ರಜತ್ ಅವರ ಮಾತುಗಳ ಕೇಳಿನೋಡೋಣ. ಅಭಿಮಾನಿಗಳ ಕಂಡ ಮಂಜು ಅವರು ಕುಟುಂಬದಲ್ಲಿ ಇದ್ರೆ ನನ್ನಂತ ಮಗ ಇರ್ಬೇಕು. ಅಕ್ಕಂದಿರಿಗೆ ಇಂತ ತಮ್ಮ ಇರ್ಬೇಕು. ತಂಗಿಗೆ ಇಂತ ಅಣ್ಣಾ ಇರ್ಬೇಕು ಅನ್ನೊ ರೀತಿಯಲ್ಲಿ ಬದುಕಿದ್ದೇನೆ. ಮುಂದೇನು ಹಾಗೆ ಬದಕ್ತೀನಿ. ನಮ್ಮಮ್ಮ ಯಾವಾಗಲೂ ಹೇಳೋರು ಮಗ್ನೇ ಹಿಂಗಿರಬೇಡ ಯಾರೂ ಇಷ್ಟ ಪಡಲ್ಲ ನಿನ್ನಾ ಅಂತ ಅಂದಿದ್ದಾರೆ.
ಸ್ನೇಹಿತರೇ... ಇನ್ನು ಭವ್ಯಾ ಗೌಡ ಅವರು ಕ್ಷಮೆ ಕೇಳ್ತೀನಿ. ನಾನಾಡೋ ಆಟದಲ್ಲಿ ಆಗಲಿ , ಮಾತಲ್ಲಿ ಆಗಲಿ ಯಾರಿಗಾದ್ರೂ ನೋವ್ ಆಗಿದ್ರೆ ಎಂದು ಕೈ ಮುಗಿದು ಅಭಿಮಾನಿಗಳ ಮುಂದೆ ಕೇಳಿಕೊಂಡ್ರೆ ಕೊನೆಯಲ್ಲಿ ರಜತ್ ಮಾತ್ರ ತಪ್ಪು ಮಾಡೋದು ಸಹಜ ಕಾಣೋ ತಿದ್ದಿ ನಡೆಯೋನು ರಜತ್ ಕಾಣೋ ಎಂದು ಹಾಡು ಹೇಳೋದ್ರ ಜೊತೆಗೆ ನಾನು ಬದಲಾಗಬೇಕಾ ಎಂದು ಅಭಿಮಾನಿಗಳ ಕೇಳಿದ್ದಾರೆ ಆಗ ಅಭಿಮಾನಿಗಳು ಇಲ್ಲ ಎಂದು ಕೂಗಿದ್ದಾರೆ.
ಆದರೆ ಕಳೆದ ದಿನ ರಾತ್ರಿ ಬಿಗ್‌ಬಾಸ್ ಮನೆಯಲ್ಲಿ ತಮ್ಮ ಅಭಿಮಾನಿಗಳ ಬಳಗವನ್ನು ಕಂಡು ಸ್ಪರ್ಧಿಗಳು ಮಾತ್ರ ಸಖತ್ ಖುಷಿಯಾಗಿದ್ದಾರೆ. ತಮಗೆ ಓಟ್ ಮಾಡಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಜೊತೆಗೆ ಫಿನಾಲೆವರೆಗೂ ಓಟ್ ಮಾಡಿ ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ ಬಿಗ್‌ಬಾಸ್ ಮನೆಯಲ್ಲಿ ಅಭಿಮಾನಿಗಳ ಘೋಷಣೆ ಮುಗಿಲೆತ್ತರಕ್ಕೆ ಕೇಳಿಸಿದೆ. ಸ್ಪರ್ಧಿಗಳಿಗೂ ಗೆಲ್ಲುವ ವಿಶ್ವಾಸ ಹೆಚ್ಚಾಗಿದೆ. ಯಾರಾಗ್ತಾರೆ ಬಿಗ್ಬಾಸ್ ವಿನ್ನರ್ ಕಾದು ನೋಡಬೇಕಿದೆ.