83 ವರ್ಷದ ಅಜ್ಜನನ್ನು ತಂದೆಯಾಗಿ ದತ್ತು ಪಡೆದ ರಜನಿಕಾಂತ್; ಕನ್ನಡಿಗರು ಫಿದಾ

 | 
F ii

ಕನ್ನಡದಲ್ಲಿ ರಾಜ್ ಕುಮಾರ್ ಹೇಗೋ ತಮಿಳಿನಲ್ಲಿ ತಲೈವ ಹಾಗೆಯೇ. ರೀಲ್ ಮಾತ್ರವಲ್ಲ ರಿಯಲ್ ಲೈಫ್‌ನಲ್ಲಿ ರಜನಿಕಾಂತ್ ಹೀರೊ. ತಮ್ಮ ಸರಳ ಸಜ್ಜನ ವ್ಯಕ್ತಿತ್ವ ಹಾಗೂ ಸೇವಾಗುಣದಿಂದ ತಲೈವಾ ಎಲ್ಲರಿಗೂ ಮಾದರಿ ಆಗಿದ್ದಾರೆ. ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಬಸ್ ಕಂಡೆಕ್ಟರ್ ಆಗಿದ್ದ ಶಿವಾಜಿರಾವ್ ಗಾಯಕ್‌ವಾಡ್ ಮುಂದೆ ರಜನಿಕಾಂತ್ ಆಗಿ ಕೀರ್ತಿಯ ಶಿಖರವೇರಿದರು.

ಎಷ್ಟೇ ಎತ್ತರಕ್ಕೆ ಏರಿದರೂ ರಜನಿಕಾಂತ್ ಹಳೆಯದನ್ನು ಮರೆತವರಲ್ಲ. ಬಡ ಕುಟುಂಬದಿಂದ ಬಂದ ತಲೈವಾ ಅಸಹಾಯಕರನ್ನು ಕಂಡರೆ ಮರಗುತ್ತಾರೆ. ಕೈಲಾದಷ್ಟು ಸಹಾಯ ಮಾಡುತ್ತಾರೆ. ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡ ಶಿವಾಜಿರಾವ್ ಬಳಿಕ ಸಹೋದರನ ಆರೈಕೆಯಲ್ಲಿ ಬೆಳೆದವರು. ಹಾಗಾಗಿ ತಂದೆ-ತಾಯಿ ಆಪ್ತರು, ಸ್ನೇಹಿತರ ಬಗ್ಗೆ ರಜನಿಗೆ ಬಹಳ ಕಾಳಜಿ, ಪ್ರೀತಿ.

ಹಿರಿಯ ವ್ಯಕ್ತಿಯೊಬ್ಬರನ್ನು ರಜನಿಕಾಂತ್ ದತ್ತು ಪಡೆದುಕೊಂಡಿದ್ದಾರೆ ಎಂದರೆ ನೀವು ನಂಬುತ್ತೀರಾ? ಅಚ್ಚರಿ ಎನಿಸಿದರು ಇದು ನಿಜ. ಸಾಮಾನ್ಯವಾಗಿ ಮಕ್ಕಳನ್ನು ದತ್ತು ಪಡೆಯುತ್ತಾರೆ. ಆದರೆ ರಜನಿಕಾಂತ್ ಮಾತ್ರ ಪಿ. ಕಲ್ಯಾಣಸುಂದರಂ ಎಂಬ ಮಹಾನ್ ವ್ಯಕ್ತಿಯನ್ನು ತಂದೆ ಎಂದು ಸ್ವೀಕರಿಸಿದ್ದರು. 12 ವರ್ಷಗಳ ಹಿಂದೆ ಪಿ. ಕಲ್ಯಾಣಸುಂದರಂ ಅವರನ್ನು ನಮ್ಮ ಮನೆಗೆ ಬಂದು ನಮಗೆಲ್ಲಾ ಹಿರಿಯರಾಗಿ ಇರಿ ಎಂದು ಕೇಳಿಕೊಂಡಿದ್ದರು.

ಅಷ್ಟಕ್ಕೂ ಪಿ. ಕಲ್ಯಾಣಸುಂದರಂ ಯಾರು ಎನ್ನುವ ಪ್ರಶ್ನೆ ಮೂಡುವುದು ಸಹಜ. ನಿಜ ಹೇಳಬೇಕು ಅಂದ್ರೆ ತಲೈವಾಗಿಂತ ದೊಡ್ಡ ದಾನಿ ಈತ. ತಾನು ಜೀವನದಲ್ಲಿ ದುಡಿದ ಅಷ್ಟು ಹಣವನ್ನು ಬಡವರಿಗಾಗಿ ದಾನ ಮಾಡಿದ ಮಹಾನ್ ವ್ಯಕ್ತಿ. ಗ್ರಂಥಪಾಲಕರಾಗಿ ಹಲವು ವರ್ಷ ಸೇವೆ ಸಲ್ಲಿಸಿದ ಕಲ್ಯಾಣಸುಂದರಂ ತಮ್ಮ 30 ವರ್ಷಗಳ ದುಡಿದ ಹಣವನ್ನು ನಿರ್ಗತಿಕರಿಗೆ ನೀಡಿದ್ದರು.

10 ವರ್ಷಗಳ ಕಾಲ ಹೋಟೆಲ್‌ನಲ್ಲಿ ಸರ್ವರ್ ಆಗಿ ಕೆಲಸ ಮಾಡಿದ್ದ ಪಿ. ಕಲ್ಯಾಣಸುಂದರಂ 10 ವರ್ಷಗಳ ತಮ್ಮ ಪಿಂಚಣಿ ಹಣವನ್ನು ಕೂಡ ಚಾರಿಟಿವೊಂದಕ್ಕೆ ನೀಡಿದ್ದರು. ಮದುವೆ, ಮಕ್ಕಳು ಯಾರು ಇಲ್ಲದ ಅವರು ಒಬ್ಬೊಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಅಮೆರಿಕದ ಸಂಸ್ಥೆಯೊಂದು ಇವರಿಗೆ 'ಮ್ಯಾನ್ ಆಫ್ ದಿ ಮಿಲೇನಿಯಂ' ಪ್ರಶಸ್ತಿ ನೀಡಿ ಗೌರವಿಸಿದೆ. ಈ ಪ್ರಶಸ್ತಿಯ ಭಾಗವಾಗಿ 30 ಕೋಟಿ ರೂ. ಪಡೆದಿದ್ದರು. ಅದನ್ನು ಕೂಡ ಬಡವರಿಗೆ ಕೊಟ್ಟಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.