ಆ ಪಕ್ಷದಲ್ಲಿ CM ಆಗಬೇಕಿದ್ದ ರಾಜ್ ಕುಮಾರ್; ಸಿದ್ದರಾಮಯ್ಯ ಪರ ನಿಂತಿದ್ರು ಅಣ್ಣವ್ರು

 | 
Jui

ಕರ್ನಾಟಕ ವಿಧಾನಸಭಾ ಚುನಾವಣೆ ಕೆಲವೇ ದಿನಗಳು ಬಾಕಿ ಉಳಿದಿರುವ ಹಿನ್ನೆಲೆ, ಪ್ರಚಾರದ ಅಬ್ಬರ ಜೋರಾಗಿ ನಡೆಯುತ್ತಿದೆ. ಮೂರು ಪಕ್ಷಗಳೂ ಉರಿಬಿಸಿಲಲ್ಲಿ ಪೈಪೋಟಿಗೆ ಬಿದ್ದು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ರೋಡ್ ಶೋ ನಡೆಸುತ್ತಿದ್ದಾರೆ. 

ಇಷ್ಟು ಸಾಲದ್ದಕ್ಕೆ ಮತದಾರರನ್ನು ಸೆಳೆಯಲು, ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಲು ಚಿತ್ರರಂಗದ ಸ್ಟಾರ್ ನಟರನ್ನು ಕರೆಸಿದ್ದಾರೆ. ನಟ ಯಶ್ ದರ್ಶನ್ ಇನ್ನೂ ಹಲವರು ಒಂದೊಂದು ಪಕ್ಷದ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿರುವುದು ಅಕ್ಷರಶಃ ಚುನಾವಣಾ ಕಣ ರಣರಂಗವಾಗಿ ಬದಲಾಗಿದೆ. 

ರಾಜಕೀಯ ಮತ್ತು ಸಿನಿಮಾಕ್ಕೆ ಎಲ್ಲಿಲ್ಲದ ನಂಟು. ಚಿತ್ರರಂಗದಲ್ಲಿ ಜನಪ್ರಿಯರಾದ ನಟರು ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದವರು ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ; ಇಲ್ಲವೇ ರಾಜಕೀಯ ಪಕ್ಷಗಳು ಇಂಥ ನಟರನ್ನು ಹಣ, ಅಧಿಕಾರದ ಆಮಿಷೆ ತೋರಿಸಿ ತಮ್ಮ ಪಕ್ಷಕ್ಕೆ ಸೇರಿಸುವ ಪ್ರಯತ್ನ ಮಾಡುತ್ತಾರೆ.

ಇದಕ್ಕೆ ಮುಖ್ಯಕಾರಣ ಸ್ಟಾರ್ ನಟರ ಹಿಂದೆ ಇರುವ ಕೋಟ್ಯಂತರ ಅಭಿಮಾನಿಗಳು. ಇಷ್ಟೊಂದು ಪ್ರಮಾಣದ ಅಭಿಮಾನಿಗಳು ರಾಜಕೀಯ ಪಕ್ಷಗಳಿಗೆ ಮತಗಳಾಗಿ ಕಣ್ಣು ಕುಕ್ಕುತ್ತದೆ. ಕೆಲವರು ತಮಗಿರುವ ಜನಪ್ರಿಯತೆ, ಅಪಾರ ಸಂಖ್ಯೆಯ ಅಭಿಮಾನಿಗಳನ್ನೇ ಬಂಡವಾಳ ಮಾಡಿಕೊಂಡು ಚುನಾವಣೆಗಿಳಿದು ಯಶಸ್ಸು ಕಂಡವರೂ ಇದ್ದಾರೆ, ಸೋತವರೂ ಇದ್ದಾರೆ. 

ಒಂದು ವೇಳೆ ಎಂಜಿಆರ್, ಎನ್‌ಟಿಆರ್ ರಂತೆ ಕರ್ನಾಟಕದಲ್ಲಿ ಡಾ.ರಾಜ್ ತಮಗಿರುವ ಜನಪ್ರಿಯತೆ, ಕೋಟ್ಯಂತರ ಅಭಿಮಾನಿಬಳಗ ಬಳಸಿಕೊಂಡು ರಾಜಕೀಯ ಪ್ರವೇಶ ಮಾಡಿದ್ದರೆ ಚುನಾವಣೆಯಲ್ಲಿ ಗೆದ್ದು ಈ ರಾಜ್ಯದ ಮುಖ್ಯಮಂತ್ರಿ ಆಗಿಬಿಡಬಹುದಿತ್ತು. ಅವರಿಗೆ ಎಲ್ಲ ಪಕ್ಷಗಳಿಂದಲೂ ರಾಜಕೀಯ ಸೇರುವಂತೆ ಒತ್ತಡ ಬಂದಾಗ ಡಾ ರಾಜ್ ಹೇಳ್ತಿದ್ದು ಒಂದೇ ಮಾತು, ಅಭಿಮಾನಿ ದೇವರು ನನ್ನನ್ನು ನಟನಾಗಿ ಆಯ್ಕೆ ಮಾಡಿದ್ದಾರೆ.

ಆ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತಿದ್ದೇನೆ. ನೀವು ಕೂಡ ನನ್ನನ್ನು ಪೂರ್ಣ ಹೃದಯದಿಂದ ನಟನಾಗಿ ಸ್ವೀಕರಿಸಿದ್ದೀರಿ ಮತ್ತು ನನ್ನ ಮೇಲೆ ತುಂಬಾ ಪ್ರೀತಿಯನ್ನು ಧಾರೆ ಎರೆದಿದ್ದೀರಿ. ರಾಜಕೀಯ ನನ್ನ ಕ್ಷೇತ್ರ ಅಲ್ಲ ದಯವಿಟ್ಟು ನನ್ನನ್ನು ಬಲವಂತ ಮಾಡಬೇಡಿ.ಎಂದು ನಯವಾಗಿ ತಿರಸ್ಕರಿಸುತ್ತಿದ್ದ ಧೀಮಂತ ನಾಯಕ ಅವರು.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.