ಸಾ#ವಿನ ಮುನ್ನ ಎದೆಯನ್ನು ಕಟ್ಟಿಯಾಗಿ ಹಿಡಿದುಕೊಂಡಿದ್ದ ರಾಕೇಶ್ ‌ಪೂಜಾರಿ

 | 
Ggg
ಕಾಮಿಡಿ ಕಿಲಾಡಿಗಳು ಸೀಸನ್‌ 3’ ಕಾರ್ಯಕ್ರಮದಲ್ಲಿ ವಿನ್ನರ್‌ ಆಗಿದ್ದವರು ರಾಕೇಶ್‌ ಪೂಜಾರಿ ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ. 35 ವರ್ಷ ವಯಸ್ಸಿನ ಪ್ರತಿಭಾವಂತ ಕಲಾವಿದ ರಾಕೇಶ್ ಪೂಜಾರಿ ಮೇ 12 ರಂದು ಮಧ್ಯರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನಿನ್ನೆಯಷ್ಟೇ ಸ್ನೇಹಿತರೊಬ್ಬರ ಮದುವೆಯಲ್ಲಿ ನಟ ರಾಕೇಶ್ ಪೂಜಾರಿ ಭಾಗವಹಿಸಿದ್ದರು. ಅದಾದ್ಮೇಲೆ ದಿಢೀರನೆ ಹೃದಯಾಘಾತ ಸಂಭವಿಸಿದ್ದು ರಾಕೇಶ್ ಪೂಜಾರಿ ಕೊನೆಯುಸಿರೆಳೆದಿದ್ದಾರೆ.
 ಮೇ 11 ರಂದು ಏನೆಲ್ಲಾ ಆಯ್ತು.. ರಾಕೇಶ್ ಪೂಜಾರಿ ಸಾವನ್ನಪ್ಪಿದ್ದು ಹೇಗೆ ಅಂತ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇ ಗೌಡ ವಿವರಿಸಿದ್ದಾರೆ. ಗೋವಿಂದೇ ಗೌಡ ಅವರ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ನನಗೆ ರಾಕೇಶ್ ಪೂಜಾರಿ ತುಂಬಾ ಆಪ್ತರು. ಒಳ್ಳೆಯ ಕಲಾವಿದ ಹಾಗೂ ಒಳ್ಳೆಯ ಮನುಷ್ಯ. ಎಲ್ಲರಿಗೂ ಇಷ್ಟವಾಗುತ್ತಿದ್ದವರು ರಾಕೇಶ್ ಪೂಜಾರಿ. ಸಾವಿನ ಸುದ್ದಿ ಕೇಳಿ ಬಹಳ ಬೇಜಾರಾಗಿದೆ. ನನಗೆ ಬಂದ ಮಾಹಿತಿ ಪ್ರಕಾರ, ರಾಕೇಶ್ ಪೂಜಾರಿಗೆ ಪ್ಲೇಟ್‌ಲೆಟ್ಸ್ ಕಡಿಮೆ ಆಗಿತ್ತಂತೆ. ಹೃದಯಾಘಾತ ಸಂಭವಿಸಿದೆ. 
ಕೊಂಚ ತೂಕ ಹೊಂದಿದ್ದರು ಅನ್ನೋದು ಬಿಟ್ಟರೆ ರಾಕೇಶ್ ಪೂಜಾರಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಇರಲಿಲ್ಲ. ಇತ್ತೀಚೆಗಷ್ಟೇ ಒಂದು ಆಕ್ಸಿಡೆಂಟ್ ಆಗಿತ್ತು. ಕಣ್ವದಲ್ಲಿ ಅಡ್ಮಿಟ್‌ ಆಗಿದ್ದರು. ರೋಡ್‌ನಲ್ಲಿ ಸ್ಕಿಡ್ ಆಗಿ ಬಿದ್ದಿದ್ದ. ಬೇಗ ರಿಕವರಿ ಆದ. ತುಂಬಾ ಆಕ್ಟೀವ್ ಪರ್ಸನ್‌. ಸಡನ್‌ ಆಗಿ ಈಗ ಆಗಿದೆ ಅಂತ ಹೇಳಿ ನೊಂದುಕೊಂಡಿದ್ದಾರೆ ಗೋವಿಂದೇ ಗೌಡ.
ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನಿಂದ ರಾಕೇಶ್ ಪೂಜಾರಿ ಕನ್ನಡಿಗರ ಮನೆ ಮಾತಾದರು. ‘ಕಾಮಿಡಿ ಕಿಲಾಡಿಗಳು ಸೀಸನ್ 3’ ಕಾರ್ಯಕ್ರಮದಲ್ಲಿ ಸ್ಪರ್ಧಿಸಿ, ವಿವಿಧ ಅವತಾರಗಳನ್ನ ತಾಳಿ ಕನ್ನಡ ವೀಕ್ಷಕರನ್ನ ನಗೆಗಡಲಲ್ಲಿ ತೇಲಿಸಿದವರು ರಾಕೇಶ್ ಪೂಜಾರಿ. ಕನ್ನಡಿಗರು ಹಾಗೂ ತೀರ್ಪುಗಾರರ ಮನಗೆದ್ದ ರಾಕೇಶ್ ಪೂಜಾರಿ 2020ರಲ್ಲಿ ‘ಕಾಮಿಡಿ ಕಿಲಾಡಿಗಳು ಸೀಸನ್‌ 3’ ಕಾರ್ಯಕ್ರಮದಲ್ಲಿ ವಿನ್ನರ್ ಆದರು. ಅಂದು ರಾಕೇಶ್ ಪೂಜಾರಿಗೆ ವಿನ್ನರ್‌ ಟ್ರೋಫಿ ಹಾಗೂ 8 ಲಕ್ಷ ರೂಪಾಯಿ ಬಹುಮಾನ ಹಣ ಲಭಿಸಿತ್ತು. ಎಂದು ರಾಕೇಶ್ ಮತ್ತೊಬ್ಬ ಗೆಳೆಯ ಗೌರಿ ಶಂಕರ ಕಣ್ಣೀರು ಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.