ತಂಗಿ ಮದುವೆಯ ಜವಾಬ್ದಾರಿ ಹೊತ್ತಿದ್ದ ರಾಕೇಶ್ ಪೂಜಾರಿ, ಅಣ್ಣ ಇಲ್ಲದೆ ತಂಗಿ ಮದುವೆ ಅಸಾಧ್ಯ

 | 
Ne
ಕಾಮಿಡಿ ಕಿಲಾಡಿಗಳು ಸೀಸನ್ -3ರ ವಿನ್ನರ್​ ರಾಕೇಶ್ ಪೂಜಾರಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿನ್ನೆ ಸ್ನೇಹಿತನ ಮದುವೆಯ ಮೆಹಂದಿ ಕಾರ್ಯಕ್ರಮದಲ್ಲಿ ದಿಢೀರ್ ಬಿಪಿ ಲೋ ಆಗಿ ಕುಸಿದು ಬಿದ್ದಿದ್ದಾರೆ. ಆ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ರಾಕೇಶ್ ಚಿಕಿತ್ಸೆಗೆ ಸ್ಪಂದಿಸದೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ರಾಕೇಶ್ ಪೂಜಾರಿ ಅವರು ತಮ್ಮ ತಂಗಿಯ ಮದುವೆ ಬಗ್ಗೆ ದೊಡ್ಡ ಕನಸು ಇಟ್ಟುಕೊಂಡಿದ್ದರಂತೆ. ಅಲ್ಲದೇ ಅದ್ಧೂರಿಯಾಗಿ ಮದುವೆ ಮಾಡುವ ತಯಾರಿ ನಡೆಸಿದ್ದರಂತೆ. ತಂಗಿ ಮದುವೆಯ ನಂತರ ತಾನು ಮದುವೆಯಾಗುವುದಾಗಿ ಸ್ನೇಹಿತರ ಬಳಿ ಹೇಳಿಕೊಂಡಿದ್ದರಂತೆ. ಆದ್ರೆ ಮನೆಗೆ ಆಧಾರವಾಗಿದ್ದ ರಾಕೇಶ್ ಪೂಜಾರಿ ತಾಯಿ ಮತ್ತು ತಂಗಿಯನ್ನ ಅಗಲಿದ್ದಾರೆ.
ರಾಕೇಶ್ ಪೂಜಾರಿ ಅವರ ಹುಟ್ಟೂರು ಉಡುಪಿ. ಇವರ ತಂದೆ ದಿನಕರ್ ಪೂಜಾರಿ ಹಾಗೂ ತಾಯಿ ಶಾಂಭವಿ. ರಾಕೇಶ್​ ಪೂಜಾರಿ ಅವರಿಗೆ ಒಬ್ಬ ತಂಗಿ ಕೂಡ ಇದ್ದಾರೆ. ಜೀವನದಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸಿದ್ದ ರಾಕೇಶ್ ಪೂಜಾರಿಯವರಿಗೆ ಮೊದಲ ಯಶಸ್ಸು ಸಿಕ್ಕಿದ್ದು ಕಾಮಿಡಿ ಕಿಲಾಡಿಗಳು ಸೀಸನ್ 3 ವಿನ್ನರ್ ಆಗುವ ಮೂಲಕ ಜನರ ಮನ ಗೆದ್ದಿದ್ದರು.
ತಂದೆ ದುಡಿಮೆಗಾಗಿ ದುಬೈನ ಸ್ಟಾರ್ ಹೊಟೇಲ್‌ನಲ್ಲಿ ಶೆಪ್‌ ಆಗಿ ಕೆಲಸ ಮಾಡುತ್ತಿದ್ದರು. ಬಳಿಕ ಅವರು ದುಬೈನಿಂದ ಹಿಂತಿರುಗಿದ್ದರು. ಆದರೆ, ಅವರಿಗೆ ಮಗನದ್ದೇ ಚಿಂತೆಯಾಗಿತ್ತು. ಯಾಕಂದ್ರೆ ಭವಿಷ್ಯವನ್ನು ಹೇಗೆ ರೂಪಸಿಕೊಳ್ಳುತ್ತಾನೆ ಅನ್ನೋದೇ ಅವರ ಚಿಂತೆಗೆ ಕಾರಣವಾಗಿತ್ತು. ಕೊನೆಗೂ ಮಗ ಸಾಧನೆ ಮಾಡಿದ್ದನ್ನು ಕಣ್ತುಂಬಿಕೊಂಡು ಅಗಲಿದ್ದರು.
ನಾನು ವಿನ್ನರ್ ಆಗುತ್ತೇನೆ ಎನ್ನುವ ಸಮಯದಲ್ಲಿ ತಂದೆ ತೀರಿಕೊಂಡರು. ಎಲ್ಲರಿಗಿಂತ ದೊಡ್ಡ ಟೆನ್ಷನ್ ಇದ್ದಿದ್ದು ನಮ್ಮ ತಂದೆಗೆ. ಇವನು ಮುಂದೆ ಏನು ಮಾಡುತ್ತಾನೋ ಅಂತಿತ್ತು. ಪಪ್ಪ ನಾನು ಈ ಕೆಲಸ ಮಾಡುತ್ತೇನೆ ಅಂದಾಗ ಸರಿ ಮಾಡು ಅನ್ನೋರು. ಅದು ಫೇಲ್ ಆಗಿ ಬಂದಾಗ ಸರಿ ಏನು ಮಾಡುತ್ತೀಯಾ ಅನ್ನೋರು. ಬೈತಿದ್ರು ಆಮೇಲೆ ಏನು ಮಾಡುತ್ತೀಯ ಅಂತ ಕೇಳುತ್ತಿದ್ದರು. ಎಲ್ಲಾ ಕೇಳಿದ ಮೇಲೆ ಸರಿ ಹೋಗಿ ಮಾಡು ಅಂತಾರೆ. 
ಅಷ್ಟೆಲ್ಲ ಫ್ರೀಡಂ ಕೊಟ್ಟಿದ್ದರಿಂದ ನಾನು ಇಲ್ಲಿ ಇದ್ದೇನೆ. ಅದಕ್ಕೆ ಪ್ರಮುಖ ಕಾರಣನೇ ನನ್ನ ತಂದೆ ಎಂದು ರಾಕೇಶ್ ಪೂಜಾರಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಆದರೀಗ ಎಲ್ಲರನ್ನೂ ಬಿಟ್ಟು ತಂದೆಯ ಹಿಂದೆ ಹೊರಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.