ರಾಕೇಶ್ ಪೂಜಾರಿಯ ಕೊನೆಯ ದಿನದ ಲೈವ್, ಮೊದಲೇ ಸಾವಿನ ಸುಳಿವು ಕೊಟ್ಟಿದ್ದ ಕಲಾವಿದ

ಕಾಮಿಡಿ ಕಿಲಾಡಿ ಸೀಸನ್ 3ರ ವಿಜೇತರಾಗಿ ಹೊರಹೊಮ್ಮಿದ್ದ ಉಡುಪಿ ಮೂಲದ ರಾಕೇಶ್ ಪೂಜಾರಿ ನಿಧನ ಅವರ ಅಭಿಮಾನಿಗಳು ಮಾತ್ರವಲ್ಲದೇ ರಾಜ್ಯದ ಜನತೆ ಬೆಚ್ಚಿ ಬೀಳುವಂತೆ ಮಾಡಿದೆ. ನಿನ್ನೆಯತನಕವೂ ಆರೋಗ್ಯವಾಗಿ ಗಟ್ಟಿಮುಟ್ಟಾಗಿದ್ದ ಯುವ ನಟ ರಾಕೇಶ್ ಪೂಜಾರಿ ನಿಧನ ಯುವಜನರಲ್ಲಿ ಆತಂಕ ಮೂಡಿಸಿದ್ದು, ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿಧನದ ಬಳಿಕ ಮತ್ತೋರ್ವ ಪ್ರತಿಭಾನ್ವಿತನನ್ನು ಕನ್ನಡ ಚಿತ್ರರಂಗ ಕಳೆದುಕೊಂಡಿದೆ.
ರಾಕೇಶ್ ಪೂಜಾರಿ ಅವರ ಆಪ್ತರು ಹೇಳುವ ಪ್ರಕಾರ, ಕಾಂತಾರ-2 ಸಿನಿಮಾದಲ್ಲಿ ಬ್ಯುಸಿ ಆಗಿರುವ ರಾಕೇಶ್ ನಿನ್ನೆಯಷ್ಟೇ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಬಳಿಕ ರಾತ್ರಿ ಸ್ನೇಹಿತರೊಬ್ಬರ ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಎಂಜಾಯ್ ಮಾಡಿದ್ದರು. ಬಹುಶಃ ರಾಕೇಶ್ ಈ ಮೆಹಂದಿ ಕಾರ್ಯಕ್ರಮದಲ್ಲಿ ಸಿಕ್ಕಾಪಟ್ಟೆ ಡ್ಯಾನ್ಸ್ ಮಾಡಿ ಅವರಿಗೆ ಲೋಪಿ ಬಿಪಿ ಉಂಟಾಗಿದೆ. ಬಳಿಕ ಹೃದಯಾಘಾತ ಸಂಭವಿಸಿ ನಿಧನ ಹೊಂದಿದ್ದಾರೆ ಎಂದು ಹೇಳಲಾಗ್ತಿದೆ.
ರಾತ್ರಿ 1 ಗಂಟೆ ಸುಮಾರಿಗ ಲೋ ಬಿಪಿ ಉಂಟಾಗಿ ರಾಕೇಶ್ ಪೂಜಾರಿ ಕುಸಿದು ಬೀಳುತ್ತಿದ್ದಂತೆ ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅದಾಗಲೇ ಅವರು ಮೃತಪಟ್ಟಿದ್ದರಿಂದ ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.ಹೌದು.. ರಾಕೇಶ್ ಪೂಜಾರಿ ಅದೊಂದು ತಪ್ಪು ಮಾಡಬಾರದಿತ್ತು. ಅವರ ಆಪ್ತರು ಹೇಳುವ ಪ್ರಕಾರ, ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಪ್ರತಿಯೊಬ್ಬರ ಜೊತೆಯೂ ನಗುಮೊಗದಿಂದ ಒಂಚೂರೂ ಅಹಂಕಾರ ಪ್ರದರ್ಶಿಸದೆ ಮಾತನಾಡುತ್ತಿದ್ದ ರಾಕೇಶ್ ಪೂಜಾರಿ ಮೊದಲ ಮಾತಿನಲ್ಲೇ ಎಲ್ಲರ ಹೃದಯ ಗೆಲ್ಲುತ್ತಿದ್ದರು. ಆದರೆ ನಿನ್ನೆ ಅವರು ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ಮಾಡಿದ ಒಂದು ತಪ್ಪು ಅವರ ಸಾವಿಗೆ ಕಾರಣ ಇರಬಹುದು ಅಂತಾ ಅವರ ಆಪ್ತವಲಯ ಹೇಳ್ತಿದೆ.
ಅದೆಂದರೆ ಮೆಹಂದಿ ಗೆಳೆಯನ ಮೆಹಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಕೇಶ್ ಪೂಜಾರಿ ಸಿಕ್ಕಾಪಟ್ಟೆ ಡ್ಯಾನ್ಸ್ ಮಾಡಿದ್ದರು. ಸ್ನೇಹಿತನ ಮದುವೆಯ ಸಂಭ್ರಮದಲ್ಲಿ ಮನಸೋಇಚ್ಛೆ ಸಂಭ್ರಮಪಟ್ಟು ಕುಣಿದಿದ್ದರು. ಆಗ ಅವರ ದೇಹಕ್ಕೆ ದಣಿವಾಗಿದ್ದರೂ ಸಹ ಅವರು ರೆಸ್ಟ್ ಮಾಡಿರಲಿಲ್ಲ. ಹೀಗಾಗಿ ದೇಹಕ್ಕೆ ತೀವ್ರ ಸುಸ್ತಾಗಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಅವರಿಗೆ ಲೋ ಬಿಪಿ ಉಂಟಾಗಿ ಹೃದಯಾಘಾತ ಆಗಿದೆ. ಯಾವುದೇ ದುಶ್ಚಟ, ದುರಭ್ಯಾಸ ಇಲ್ಲದ ರಾಕೇಶ್ ಪೂಜಾರಿ ನಿಧನ ಎಲ್ಲರಿಗೂ ಆತಂಕ ತಂದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.