ಕೋಟಿ ಬೆಲೆಯ BMW ಕಾರು ಖರೀದಿ ಮಾಡಿ ನೆಟ್ಟಿಗರಿಗೆ ಟಾಂಗ್ ಕೊಟ್ಟ ರಕ್ಷಕ್ ಬುಲೆಟ್

ಸ್ಯಾಂಡಲ್‌ವುಡ್ ನಟ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಬುಲೆಟ್ ಸಹ, ಅಪ್ಪನಂತೆ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವತ್ತ ಹೊರಟಿದ್ದಾರೆ. ಗುರುಶಿಷ್ಯರು ಸಿನಿಮಾದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಕ್ಷಕ್, ಬಿಗ್‌ಬಾಸ್‌ಗೂ ಹೋಗಿ ಬಂದಿದ್ದರು. ಈಗ ಗ್ಯಾಪ್‌ನಲ್ಲಿಯೇ ದುಬಾರಿ ಕಾರು ಖರೀದಿಸಿ ಸುದ್ದಿಯಲ್ಲಿದ್ದಾರೆ. ಅದರ ಬೆಲೆಯೂ ಹುಬ್ಬೇರಿಸುವಂತಿದೆ.
ಜಡೇಶ್ ಕುಮಾರ್ ಹಂಪಿ ನಿರ್ದೇಶನದ ಗುರು ಶಿಷ್ಯರು ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದರು ರಕ್ಷಕ್ ಬುಲೆಟ್. ಜಾಲತಾಣಗಳಲ್ಲಿ ಟೀಕೆ, ಟ್ರೋಲ್ ಮೂಲಕವೇ ರಕ್ಷಕ್ ಹೆಚ್ಚು ಮುನ್ನೆಲೆಗೆ ಬಂದಿದ್ದರು. ತಮ್ಮ ಹೇಳಿಕೆಗಳ ಮೂಲಕವೂ ಹೆಚ್ಚು ಚರ್ಚೆಗೂ ಗ್ರಾಸವಾಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಬುಲೆಟ್. ಈಗ ಹೊಸ ಖಾರು ಖರೀದಿಸಿ ಸದ್ದು ಮಾಡುತ್ತಿದ್ದಾರೆ.
ಈ ಮೊದಲು ಅಕ್ಕನ ಮದುವೆ ಸಮಯದಲ್ಲಿ ಹೊಸ ಮಹೀಂದ್ರಾ ಥಾರ್ ಖರೀದಿಸಿದ್ದ ರಕ್ಷಕ್, ಈಗ ಐಷಾರಾಮಿ ಕಾರ್ ಮನೆಗೆ ತಂದಿದ್ದಾರೆ. ಈ ವಿಚಾರವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಬಿಎಂಡಬ್ಲ್ಯೂ ಕಾರ್ ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ. ನಮ್ಮ ಮನೆಗೆ ಹೊಸ ಅತಿಥಿಯ ಆಗಮನ ಎಂದು ಸ್ಟೋರಿ ಶೇರ್ ಮಾಡಿಕೊಂಡು, ಬಿಎಂಡಬ್ಲೂ ಕಾರ್ ರಿವೀಲ್ ಮಾಡಿದ್ದಾರೆ.
ಕಾರ್‌ನ ಫೋಟೋ ರಿವೀಲ್ ಮಾಡುತ್ತಿದ್ದಂತೆ, ಬೆಕ್ಕಸ ಬೆರಗಾಗಿರುವ ನೆಟ್ಟಿಗರು, ಈ ಕಾರ್‌ನ ಬೆಲೆ ಎಷ್ಟಿರಬಹುದು ಎಂದು ಊಹಿಸಿದ್ದಾರೆ. ಅಷ್ಟಕ್ಕೂ ಇಷ್ಟೊಂದು ಹಣ ರಕ್ಷಕ್‌ಗೆ ಸಿಕ್ಕಿದ್ದಾದರೂ ಎಲ್ಲಿಂದ ಎಂದೂ ಅಚ್ಚರಿ ಹೊರಹಾಕುತ್ತಿದ್ದಾರೆ. ಬಿಎಂಡಬ್ಲ್ಯೂ ಸಾಮಾನ್ಯರು ಖರೀದಿಸುವ ಕಾರಲ್ಲ. ಈ ಕಂಪನಿಯ ಕಾರ್‌ನ ಆರಂಭಿಕ ಬೆಲೆಯೇ 40ಲಕ್ಷ ಮೇಲಿದೆ. ಇದೀಗ ಈ ಐಶಾರಾಮಿ ಕಾರ್‌ನ ಒಡೆಯನಾಗಿದ್ದಾರೆ ರಕ್ಷಕ್. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.