ರಮೋಲ ಸೊಂಟ ಹಿಡಿದು ಡ್ಯಾನ್ಸ್ ಮಾಡಿದ ರಕ್ಷಕ್ ಬುಲೆಟ್, ಫಿದಾ ಆದ ಜಡ್ಜ್
Apr 18, 2025, 11:00 IST
|

ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ವೀಕ್ಷಕರಿಗೆ ಮಸ್ತ್ ಮನರಂಜನೆ ನೀಡುತ್ತಿದೆ. ಪ್ರಸ್ತುತವಾಗಿ ಜೀ ಕನ್ನಡದಲ್ಲಿ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ನಡೆಯುತ್ತಿದೆ. ಈ ಬಾರಿಯ ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮದಲ್ಲಿ ಧೂಳೆಬ್ಬಿಸುತ್ತಿದ್ದಾರೆ ರಕ್ಷಕ್ ಬುಲೆಟ್. ಹೌದು, ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10 ಮೂಲಕ ಸಖತ್ ಫೇಮಸ್ ಆಗಿದ್ದರು ರಕ್ಷಕ್ ಬುಲೆಟ್.
ಬಿಗ್ಬಾಸ್ ಬಳಿಕ ಭರ್ಜರಿ ಬ್ಯಾಚುಲರ್ಸ್ ಸೀಸನ್ 2ನಲ್ಲಿ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದಾರೆ.ಇನ್ನೂ, ರಕ್ಷಕ್ ಬುಲೆಟ್ಗೆ ಜೋಡಿಯಾಗಿ ಕನ್ನಡತಿ ಸೀರಿಯಲ್ ಮೂಲಕ ತನ್ನದೇ ಆದ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರೋ ನಟಿ ರಮೋಲ ಆಯ್ಕೆಯಾಗಿದ್ದಾರೆ. ಈ ಇಬ್ಬರ ಕಾಂಬಿನೇಷನ್ ವೀಕ್ಷಕರಿಗೆ ಇಷ್ಟವಾಗಿದೆ. ಈ ವಾರ ಬ್ಯಾಚುಲರ್ಸ್ಗಳಿಗೆ ಹೊಸ ಚಾಲೆಂಜ್ ಎದುರಾಗಿದೆ. ಅದುವೇ ಲವ್ ಕೆಮಿಸ್ಟ್ರಿ ರೌಂಡ್.
ಬ್ಯಾಚುಲರ್ಸ್ ಮತ್ತು ಏಂಜಲ್ಸ್ ಒಬ್ಬರನ್ನೊಬ್ಬರು ಎಷ್ಟು ಅರ್ಥ ಮಾಡ್ಕೊಂಡಿದ್ದಾರೆ ಅಂತ ಈ ರೌಂಡ್ ಮೂಲಕ ಗೊತ್ತಾಗಲಿದೆ. ಹೀಗೆ ಜೀ ಕನ್ನಡ ರಿಲೀಸ್ ಮಾಡಿರೋ ಪ್ರೋಮೋದಲ್ಲಿ ರಕ್ಷಕ್ ಬುಲೆಟ್ ಹಾಗೂ ರಮೋಲ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.ವಿಶೇಷ ಎಂದರೆ ನಟ ದರ್ಶನ್ ಹಾಗೂ ರಕ್ಷಿತಾ ಅಭಿನಯದ ಸೂಪರ್ ಹಿಟ್ ಸಿನಿಮಾ ಸುಂಟರಗಾಳಿ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ ರಕ್ಷಕ್ ಬುಲೆಟ್ ಹಾಗೂ ರಮೋಲ.
ವೇದಿಕೆ ಮೇಲೆ ಸೇಮ್ ಸೇಮ್ ದರ್ಶನ್ ಹಾಗೂ ರಕ್ಷಿತಾರಂತೆ ಡ್ಯಾನ್ಸ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಡ್ಯಾನ್ಸ್ ನೋಡಿದ ಕ್ರೇಜಿಸ್ಟಾರ್ ರವಿಚಂದ್ರನ್ ಅವರು, ರಮೋಲ ಅರಾಮ್ ಆಗಿ ಡ್ಯಾನ್ಸ್ ಮಾಡ್ತಾಳೆ. ನನ್ನ ಕಣ್ ಅಂತೂ ಅವಳ ಮೇಲೆ ಜಾಸ್ತಿ ಹೋಗುತ್ತೆ ಅಂತ ಹೇಳಿದ್ದಾರೆ.ಇನ್ನೂ, ಈ ಹಿಂದೆ ಇದೇ ವೇದಿಕೆ ಮೇಲೆ ರಕ್ಷಕ್ ಬುಲೆಟ್ ಬುಲ್ ಬುಲ್ ಸಿನಿಮಾದ ಒಂದು ಸೀನ್ ಅನ್ನು ರೀ ಕ್ರಿಯೇಟ್ ಮಾಡಿದ್ದರು.
ಇದೇ ವೇಳೆ ರಕ್ಷಕ್ ಸೇಮ್ ಟು ಸೇಮ್ ನಟ ದರ್ಶನ್ರಂತೆ, ರಮೋಲಾ ರಚಿತಾ ರಾಮ್ನಂತೆ ಬಟ್ಟೆಗಳನ್ನು ತೊಟ್ಟು ಡೈಲಾಗ್ಗನ್ನು ವೇದಿಕೆ ಮೇಲೆ ರೀ ಕ್ರಿಯೇಟ್ ಮಾಡಿದ್ದಾರೆ. ಹೀಗೆ ಆ ಸಿನಿಮಾದಲ್ಲಿ ನಟ ದರ್ಶನ್ ಹೊಡೆದ ಡೈಲಾಂಗ್ನಂತೆ ರಕ್ಷಕ್ ಬುಲೆಟ್ ಕೂಡ ರೀಪಿಟ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.