ದಕ್ಷಿಣ ಕನ್ನಡದ ಪವರ್ ಫುಲ್ ದೇವಿ ದೇವಾಲಯದಲ್ಲಿ ರಕ್ಷಿತ್ ಶೆಟ್ಟಿ, ಇಲ್ಲಿಗೆ ಬಂದವರ ಪಾಪ ವಿನಾಶ

 | 
Rd

ಕನ್ನಡ ಚಿತ್ರ ನಟ ರಕ್ಷಿತ್ ಶೆಟ್ಟಿ ಹೊಸ ಸಿನೆಮಾ ಪ್ರಾರಂಭಿಸುವ ಮುನ್ನ ತಮ್ಮ ಹುಟ್ಟೂರಾದ ಉಡುಪಿಯಲ್ಲಿ ಇತಿಹಾಸ ಪ್ರಸಿದ್ಧ ಕಾಪು ಮಾರಿಯಮ್ಮನ ಕ್ಷೇತ್ರ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಆಗಮಿಸಿ ಶ್ರೀದೇವಿಯ ದರ್ಶನ ಪಡೆದರು.ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ, ಶ್ರೀದೇವಿಯಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದ ನೀಡಿದರು.

ನಂತರ ಜೀರ್ಣೋದ್ಧಾರ ಕಾರ್ಯಗಳನ್ನು ವೀಕ್ಷಿಸಿ ಮಾತನಾಡಿದ ರಕ್ಷಿತ್ ಶೆಟ್ಟಿ, ನಾನು ಬಾಲ್ಯದಲ್ಲಿ ಪ್ರತಿವರ್ಷ ತಂದೆಯೊಂದಿಗೆ ಕಾಪುವಿನಲ್ಲಿ ಬಾವನ ಮನೆಗೆ ಬರುವಾಗ ಮಾರಿಗುಡಿಗೆ ಬಂದು ಹೋಗುತ್ತಿದ್ದೆ, ಈಗ ಇದರ ಸಂಪೂರ್ಣ ಚಿತ್ರಣವೆ ಬದಲಾಗಿದೆ, ನನ್ನ ಬಾವ ವಾಸುದೇವ ಶೆಟ್ರ ಮುಂದಾಳತ್ವದಲ್ಲಿ ಈ ಕೆಲಸ ನಡೆಯುತ್ತಿದೆ, ಸುಮಾರು ವರ್ಷಗಳಿಂದ ಅವರು ಈ ದೇವಸ್ಥಾನವನ್ನು ಹೇಗೆ ಅಭಿವೃದ್ಧಿಪಡಿಸುವುದು ಎಂಬ ಚಿಂತನೆಯಲ್ಲಿದ್ದರು, ಪುರಾತನ ಕಾಲದಲ್ಲಿ ಈ ರೀತಿಯಾಗಿ ಕಲ್ಲಿನ ದೇವಸ್ಥಾನಗಳನ್ನು ಕಟ್ಟುತ್ತಿದ್ದರು. 

ಈಗಿನ ಕಾಲದಲ್ಲಿ ಅನೇಕ ಕಡೆ ಕಾಂಕ್ರೀಟ್​ನಲ್ಲೆ ದೇವಸ್ಥಾನವನ್ನು ಕಟ್ಟುತ್ತಿದ್ದಾರೆ, ದೇವಸ್ಥಾನ ಇದ್ದರೆ ಹೀಗಿರಬೇಕು, ಇಳಕಲ್​ ಕೆಂಪು ಶಿಲೆಯಲ್ಲಿ ಗರ್ಭಗುಡಿ ಬಹಳಷ್ಟು ಅದ್ಭುತವಾಗಿ ಮೂಡಿಬಂದಿದೆ ಎಂದರು.ಇದು ಮೂರ್ನಾಲ್ಕು ಜನ ಸೇರಿ ಮಾಡುತ್ತಿರುವ ಕೆಲಸವಲ್ಲ, ಪ್ರತಿಯೊಬ್ಬ ಭಕ್ತ ಇದರಲ್ಲಿ ತೊಡಗಿಸಿಕೊಳ್ಳಬೇಕೆಂದು ಸಮಿತಿಯ ಮಹದಾಸೆ. ಈ ಪುಣ್ಯ ಕಾರ್ಯಕ್ಕೆ ಬಹಳಷ್ಟು ದಾನಿಗಳು ಸಹಕರಿಸಿದ್ದಾರೆ. ಇದು ಅಮ್ಮನ ಪ್ರೇರಣೆಯೆಂದು ಅನಿಸುತ್ತಿದೆ, ಕೆಲಸಗಳು ಪೂರ್ಣಗೊಂಡಾಗ ಇನ್ನೆಷ್ಟು ಅದ್ಭುತವಾಗಿ ಕಾಣಬಹುದು. 

ರಾಜ್ಯದ ಜನರೆಲ್ಲರೂ ಬಂದು ಕಣ್ತುಂಬಿಕೊಳ್ಳಿ, ಇಲ್ಲಿನ ಭಕ್ತರಿಗೆ ಒಂದು ವಿಶೇಷ ಅವಕಾಶವನ್ನು ಕಲ್ಪಿಸಲಾಗಿದೆ. 9 ಶಿಲೆ ಅಂದರೆ 9,999 ರೂಪಾಯಿ ಮೇಲ್ಪಟ್ಟು ನೀಡಿದರೆ ಕಾಪುವಿನ ಅಮ್ಮನ ಮಕ್ಕಳು ತಂಡದ ಸದಸ್ಯರಾಗಬಹುದು. ಈ ತಂಡಕ್ಕೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕೆಂದು ನಟ ವಿನಂತಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.