ಬಿಗ್ ಬಾಸ್ ಮನೆಗೆ ರಕ್ಷಿತಾ ಶೆಟ್ಟಿ ರೀ ಎಂಟ್ರಿ, ಎಲ್ಲರ ಕುತೂಹಲಕ್ಕೆ ಸ್ಪಷ್ಟತೆ ಕೊಟ್ಟ ಕಿಚ್ಚ ಸುದೀಪ್
ಕನ್ನಡಿಗರ ಬಹು ನಿರೀಕ್ಷಿತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12 ಸೆಪ್ಟೆಂಬರ್ 28ರಂದು ಭರ್ಜರಿಯಾಗಿ ಆರಂಭವಾಯಿತು. ಒಟ್ಟು 19 ಮಂದಿ ಸ್ಪರ್ಧಿಗಳು ದೊಡ್ಮನೆ ಪ್ರವೇಶಿಸಿದರು. ಆದರೆ ಪ್ರೇಕ್ಷಕರಿಗೆ ಅಚ್ಚರಿ ಉಂಟುಮಾಡಿದ ಸಂಗತಿ ಎಂದರೆ ಕರಾವಳಿಯ ಇನ್‌ಸ್ಟಾಗ್ರಾಂ ಇನ್‌ಫ್ಲುಯೆನ್ಸರ್ ರಕ್ಷಿತಾ ಶೆಟ್ಟಿ ಮೊದಲ ದಿನವೇ ಎಲಿಮಿನೇಟ್ ಆಗಿರುವುದು. ಈ ನಿರ್ಧಾರ ಎಲ್ಲರಿಗೂ ಶಾಕ್ ನೀಡಿತು.
ಈ ಬೆಳವಣಿಗೆಯನ್ನು ನೋಡಿ ತಮಿಳು ಬಿಗ್ಬಾಸ್ ಸೀಸನ್ 8 ಜ್ಞಾಪಕವಾಗುತ್ತದೆ. ಅಲ್ಲಿ ನಟಿ ಸಂಚನಾ ನಮಿದಾಸ್ ಶೋ ಆರಂಭವಾದ 24 ಗಂಟೆಯೊಳಗೇ ಮನೆ ಬಿಟ್ಟಿದ್ದರು. ಅವರು ವಿಜಯ್ ಸೇತುಪತಿ ಅಭಿನಯದ ಮಹಾರಾಜ ಸಿನಿಮಾದಲ್ಲಿ ಮಗಳ ಪಾತ್ರ ನಿರ್ವಹಿಸಿದ್ದರು. ಶೋನ ಮೊದಲ ದಿನದಲ್ಲೇ ಹೊರಹಾಕಲ್ಪಟ್ಟಿದ್ದರೂ ನಂತರ ವೈಲ್ಡ್ ಕಾರ್ಡ್ ಮೂಲಕ ಮನೆಗೆ ಮತ್ತೆ ಬಂದಿದ್ದರು.
ರಕ್ಷಿತಾ ಶೆಟ್ಟಿ ಕೂಡಾ ತಮ್ಮ ಕ್ರಿಯೇಟಿವ್ ವಿಡಿಯೋಗಳ ಮೂಲಕ ಜನರ ಮನ ಗೆದ್ದಿದ್ದರು. ಅವರ ಅಭಿಮಾನಿಗಳು ಈಗಾಗಲೇ "ಮತ್ತೆ ಬರುವಿರಾ?" ಎಂಬ ನಿರೀಕ್ಷೆಯಲ್ಲಿ ಕುಳಿತಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಮೊದಲ ದಿನದಲ್ಲೇ ಹೊರಹಾಕಲ್ಪಟ್ಟಿದ್ದರೂ ಅವರ ಪಾಪ್ಯುಲಾರಿಟಿ ಕಡಿಮೆಯಾಗಿಲ್ಲ ಎಂಬುದನ್ನು ಇದು ಸಾಬೀತುಪಡಿಸುತ್ತದೆ.
ಹೀಗಾಗಿ, ಕನ್ನಡ ಬಿಗ್ಬಾಸ್‌ನಲ್ಲಿಯೂ ತಮಿಳಿನಂತೆಯೇ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ರಕ್ಷಿತಾ ವಾಪಸ್ ಬರುವ ಸಾಧ್ಯತೆ ಹೆಚ್ಚಾಗಿದೆ. ಈಗ ಪ್ರೇಕ್ಷಕರ ಕುತೂಹಲವೆಂದರೆ – ರಕ್ಷಿತಾ ಮತ್ತೊಮ್ಮೆ ದೊಡ್ಮನೆ ಪ್ರವೇಶಿಸಿ ಸ್ಪರ್ಧಿಗಳಿಗೆ ಹೊಸ ಚಾಲೆಂಜ್ ನೀಡುತ್ತಾರಾ ಅಥವಾ ಇಲ್ಲವೇ ಅನ್ನೋದನ್ನ ಕಾದು ನೋಡಬೇಕಿದೆ.