ರಕ್ಷಿತಾ ಶೆಟ್ಟಿ ರೀ ಎಂಟ್ರಿ, ಎಲ್ಲಾ ಸತ್ಯವನ್ನು ಆಚೆ ಹಾಕಿದ ರಕ್ಷಿತಾ ತಾಯಿ

 | 
Rakshitha

ಬಿಗ್‌ಬಾಸ್ ಕನ್ನಡ 12 ಈ ಬಾರಿ ರಾಜಕೀಯ, ಪ್ರಾದೇಶಿಕತೆ ಮತ್ತು ಭಾಷಾ ಚರ್ಚೆಗೆ ಕಾರಣವಾಗಿದೆ. ಕರಾವಳಿ ಮೂಲದ ಸೋಷಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ ರಕ್ಷಿತಾ ಶೆಟ್ಟಿ ಕೇವಲ ಒಂದು ದಿನದಲ್ಲೇ ಎಲಿಮಿನೇಟ್ ಆಗಿರುವುದು ಈ ವಿವಾದಕ್ಕೆ ಹೊತ್ತಿ ಉರಿಯುವಂತೆ ಮಾಡಿದೆ. ಈ ಕುರಿತಾಗಿ ಮಾತನಾಡಿರುವ ಅವರ ತಾಯಿ ಅವಳನ್ನು ಏಕೆ ಎಲಿಮಿನೇಷನ್ ಮಾಡಿದರು ಗೊತ್ತಿಲ್ಲ ಎಂದಿದ್ದಾರೆ.

ರಕ್ಷಿತಾ ಅವರು ಬಿಗ್‌ಬಾಸ್ ಮನೆಯಲ್ಲಿ "ಜೈ ತುಳುನಾಡು" ಎಂದು ಹೇಳಿದ ಕ್ಷಣವೇ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಯಿತು. ಕೆಲವರು ಇದನ್ನು ಅವಳ ನಿಜವಾದ ತುಳು ಪ್ರೀತಿಯ ಅಭಿವ್ಯಕ್ತಿ ಎಂದು ಕಂಡುಕೊಂಡರೆ, ಇನ್ನೂ ಕೆಲವರು ಇದು ಪ್ರಚಾರಕ್ಕಾಗಿ ಮಾಡಿದ ಕ್ರಮ ಎಂದು ಆಕ್ಷೇಪಿಸಿದ್ದಾರೆ. ತುಳು ಭಾಷೆಯನ್ನು ಕರ್ನಾಟಕದ ಎರಡನೇ ಭಾಷೆಯನ್ನಾಗಿ ಮಾಡಲು ಸರ್ಕಾರವೇ ತಯಾರಾಗುತ್ತಿರುವ ಈ ಹೊತ್ತಿನಲ್ಲಿ, ಈ ಘಟನೆಗೆ ಹೆಚ್ಚುವರಿ ಪ್ರಾಮುಖ್ಯತೆ ಸಿಕ್ಕಂತಾಗಿದೆ.

ಮಂಗಳೂರು ಭಾಗದ ಹಲವು ನೆಟ್ಟಿಗರು ರಕ್ಷಿತಾ ವಿರುದ್ಧ ನಡೆದ ಎಲಿಮಿನೇಶನ್ ಉದ್ದೇಶಪೂರ್ವಕವಾಗಿತ್ತೆಂದು ಪ್ರಶ್ನಿಸುತ್ತಿದ್ದಾರೆ. "ಅವಳ ಎಲಿಮಿನೇಷನ್ ತುಳುನಾಡಿಗೆ ಅವಮಾನ" ಎಂದು ಕೆಲವರು ಕಮೆಂಟ್ ಮಾಡಿದರೆ, ಇತರರು "ರಕ್ಷಿತಾ ಪ್ರಚಾರಕ್ಕಾಗಿ ಮಾತ್ರ ಬಿಗ್‌ಬಾಸ್‌ಗೆ ಬಂದಿದ್ದರು" ಎಂದು ಆರೋಪಿಸಿದ್ದಾರೆ.

ಬಿಗ್‌ಬಾಸ್ ನೋಡುತ್ತಿದ್ದ ಕೆಲವರು "ನಮ್ಮ ಭಾಗದ ಯುವತಿಯೊಬ್ಬಳು ಬಂದಿದ್ದಾಳೆ" ಎಂಬ ಹೆಮ್ಮೆಯಿಂದ ಕಾರ್ಯಕ್ರಮ ವೀಕ್ಷಣೆ ಆರಂಭಿಸಿದ್ದರೂ, ಎಲಿಮಿನೇಶನ್‌ನಿಂದ ನಿರಾಶರಾಗಿದ್ದಾರೆ. ಮತ್ತೊಂದೆಡೆ, ವಿರೋಧ ಪಕ್ಷದ ನೆಟ್ಟಿಗರು "ಇದು ಸೂಕ್ತ ನಿರ್ಧಾರ" ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ರಕ್ಷಿತಾ ಶೆಟ್ಟಿ ಮತ್ತೆ  ಬಿಗ್ಬಾಸ್ ಮನೆಗೆ ಹೋಗ್ತಾರಾ ಇಲ್ಲ ವಾಪಸ್ ಮನೆಗೆ ಬರ್ತಾರ ಕಾದು ನೋಡಬೇಕಿದೆ.