ಅಯೋಧ್ಯೆ ರಾಮ ಮಂದಿರಕ್ಕೆ ಸರ್ವಧರ್ಮಗಳ ಶಕ್ತಿ, ಅನ್ಯಧರ್ಮೀಯರ ಪ್ರೀತಿಗೆ ತಲೆಬಾಗಿದ ಹಿಂದೂಗಳು

 | 
ರ್

ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮಮಂದಿರದ ಲೋಕಾರ್ಪಣೆಗೆ ದಿನಗಣನೆ ಆರಂಭವಾಗಿದೆ. ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ  ಅವರು ರಾಮಮಂದಿರ ಲೋಕಾರ್ಪಣೆ ಮಾಡಲಿದ್ದಾರೆ. ಗರ್ಭಗುಡಿಯಲ್ಲಿ ರಾಮಲಲ್ಲಾನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈಗಾಗಲೇ ಸಾವಿರಾರು ಗಣ್ಯರಿಗೆ ರಾಮಮಂದಿರ ಟ್ರಸ್ಟ್‌ನಿಂದ ಆಹ್ವಾನ ಕಳುಹಿಸಲಾಗಿದೆ. ಭರದ ಸಿದ್ಧತೆಯನ್ನೂ ನಡೆಸಲಾಗುತ್ತಿದೆ.

ಇದರ ಬೆನ್ನಲ್ಲೇ, ಶ್ರೀರಾಮನ ದರ್ಶನಕ್ಕಾಗಿ ಮುಂಬೈನ ಮುಸ್ಲಿಂ ಯುವತಿ ಶಬನಮ್‌ ಶೇಖ್‌  ಅವರು ಅಯೋಧ್ಯೆಗೆ ಪಾದಯಾತ್ರೆ ಹೊರಟಿದ್ದಾರೆ. ಹೌದು ಅಪ್ಪಟ ರಾಮನ ಭಕ್ತೆಯಾಗಿರುವ, ತನ್ನನ್ನು ತಾನು ಸನಾತನಿ ಎಂದು ಕರೆದುಕೊಳ್ಳುವ ಶಬನಮ್‌ ಶೇಖ್‌ ಅವರು ಮುಂಬೈನಿಂದ ಅಯೋಧ್ಯೆಗೆ ಪಾದಯಾತ್ರೆ ಹೊರಟಿದ್ದಾರೆ. ಶ್ರೀರಾಮನ ಧ್ವಜ ಹಿಡಿದುಕೊಂಡು ಸಾಗುತ್ತಿರುವ ಯುವತಿಯು ಈಗಾಗಲೇ ನೂರಕ್ಕೂ ಅಧಿಕ ಕಿಲೋಮೀಟರ್‌ ಮಾರ್ಗವನ್ನು ನಡೆದುಕೊಂಡೇ ಕ್ರಮಿಸಿದ್ದಾರೆ.

 ಮಾರ್ಗದ ಮಧ್ಯೆ ಶ್ರೀರಾಮನ ಭಕ್ತರನ್ನು ಭೇಟಿಯಾಗುತ್ತ, ಜೈ ಶ್ರೀರಾಮ್‌ ಎಂದು ಘೋಷಣೆ ಕೂಗುತ್ತ ಸಾಗುತ್ತಿರುವ ಇವರ ವಿಡಿಯೊಗಳು ಭಾರಿ ವೈರಲ್‌ ಆಗಿವೆ. ನಿತ್ಯವೂ ಪಾದಯಾತ್ರೆಯ ವಿಡಿಯೊಗಳನ್ನು ಶಬನಮ್‌ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದು, ಜನರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.ಜೈ ಶ್ರೀರಾಮ್.‌ ಶ್ರೀರಾಮನ ದರ್ಶನ ಮಾಡುವುದೇ ನನ್ನ ಜೀವನದ ಗುರಿಯಾಗಿದೆ. ಇದಕ್ಕಾಗಿ ನಾನು ಅಯೋಧ್ಯೆಗೆ ನಡೆದುಕೊಂಡೇ ಸಾಗುತ್ತಿದ್ದೇನೆ ಎಂದು ಶಬನಮ್‌ ಶೇಖ್‌ ಹೇಳಿದ್ದಾರೆ.

ಇವರಿಗೆ ಸ್ನೇಹಿತರು ಕೂಡ ಸಾಥ್‌ ನೀಡಿದ್ದಾರೆ. ಇನ್ನು ಇಸ್ಲಾಂ ಧರ್ಮದಲ್ಲಿ ಜನಿಸಿ, ರಾಮನ ದರ್ಶನಕ್ಕೆ ತೆರಳುತ್ತಿರುವ ಯುವತಿಗೆ ಮಾರ್ಗದುದ್ದಕ್ಕೂ ಹಿಂದುಗಳು, ಹಿಂದು ಸಂಘಟನೆಗಳ ಕಾರ್ಯಕರ್ತರು ಬೆಂಬಲ ನೀಡುತ್ತಿದ್ದಾರೆ. ಅಲ್ಲದೇ 10000 ಮುಸ್ಲಿಂಮರು ಈಗಾಗಲೇ ರಾಮ ಮಂದಿರಕ್ಕೆ ಬೆಂಬಲ ಸೂಚಿಸಿದ್ದು ಅಯೋಧ್ಯೆಗೆ ಭೇಟಿ ನೀಡುವ ಹಂಬಲದಲ್ಲಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.