ಸೀರಿಯಲ್ ಪಾತ್ರಕ್ಕಾಗಿ ತನ್ನ ಕೂದಲು ಬೋಳಿಸಿದ ರಾಮಾಚಾರಿ ಧಾರಾವಾಹಿ ಚಾರು

 | 
Bn
ಕನ್ನಡ ಕಿರುತೆರೆಯಲ್ಲಿ ವೀಕ್ಷಕರ ಫೇವರೆಟ್​ ಆಗಿ ಉಳಿದುಕೊಂಡಿದೆ ರಾಮಾಚಾರಿ ಸೀರಿಯಲ್. ರಾಮಾಚಾರಿ ಧಾರಾವಾಹಿಗೆ ವೀಕ್ಷಕರಿಂದ ಉತ್ತಮ ರೆಸ್ಪಾನ್ಸ್​ ಸಿಗುತ್ತಿದೆ. ಟಿಆರ್​ಪಿಯಲ್ಲೂ ರಾಮಾಚಾರಿ ಉತ್ತಮ ಸ್ಥಾನ ಕಾಯ್ದುಕೊಂಡು ಮುನ್ನುಗ್ಗುತ್ತಿದೆ. ಇದೇ ಸೀರಿಯಲ್​ ಮೂಲಕ ದೊಡ್ಡ ಮಟ್ಟದಲ್ಲಿ ಮಿಂಚುತ್ತಿದ್ದಾರೆ ನಟಿ ಮೌನ ಗುಡ್ಡೆಮನೆ. ಆದರೆ ಇದರ ಮಧ್ಯೆ ಸೀರಿಯಲ್​ನಲ್ಲಿ ಯಾರು ಊಹಿಸಲಾರದ ಟ್ವಿಸ್ಟ್ ನೀಡಿದ್ದರು.
ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿ ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್​ ಪಡೆದುಕೊಂಡು ಮುನ್ನುಗ್ಗುತ್ತಿದೆ. ಆದರೆ ಚಾರು ಪಾತ್ರದಲ್ಲಿ ಅಭಿನಯಿಸುತ್ತಿರೋ ಮೌನ ಗುಡ್ಡೆಮನೆ ಹೊಸ ಅವತಾರಕ್ಕೆ ವೀಕ್ಷಕರು ಹಾಗೂ ಅಭಿಮಾನಿಗಳು ಬೆಚ್ಚಿ ಬಿದ್ದಿದ್ದಾರೆ. ನಾರಾಯಣ ಆಚಾರ್ಯರ ಹಿರಿಯ ಸೊಸೆ ವೈಶಾಖಳ ಕುಂತತ್ರಕ್ಕೆ ಚಾರು ಮೋಸ ಹೋಗಿದ್ದಳು.
ವೈಶಾಖ ಹೇಗಿದ್ದಾಳೆ ಅಂತ ಗೊತ್ತಿದ್ದರು ಆಕೆಯ ಮಾತನ್ನು ನಂಬಿ ಮತ್ತೆ ಮೋಸ ಹೋಗಿದ್ದಾಳೆ ಚಾರು. ಕಾಲಿಗೆ ಸ್ವಾಧೀನವಿಲ್ಲ ಎಂದು ನಾಟಕ ಮಾಡುತ್ತಿರುವ ವೈಶಾಖಾ ದೇವರಲ್ಲಿ ಹರಿಕೆ ಹೊತ್ತಿದ್ದೆ ಈಗ ಪಾಲಿಸಲು ನನಗೆ ಶಕ್ತಿ ಇಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾರೆ. ಅಯ್ಯೋ ಅಕ್ಕ ಹರಕೆ ಏನೇ ಇದ್ದರೂ ನಾನು ಮಾಡುತ್ತೀನಿ ಎಂದು ಮಾತು ಕೊಟ್ಟುಬಿಡುತ್ತಾಳೆ. ಮಾತು ಕೊಟ್ಟ ಮೇಲೆ ತಲೆ ಬೋಳಿಸಿಕೊಳ್ಳಬೇಕು, ಉಪವಾಸವಿದ್ದು ದೇವರ ಪೂಜೆ ಮಾಡಬೇಕು ಎಂದು ವೈಶಾಖಾ ಹೇಳುತ್ತಾಳೆ. ಮನೆ ಮಂದಿ ಹೆದರಿಕೊಂಡರೂ ಚಾರು ಗಟ್ಟಿತನದಿಂದ ಹರಿಕೆ ತೀರಿಸಲು ತಲೆ ಬೋಳಿಸಿಕೊಂಡಿದ್ದಳುಕೊಂಡಿದ್ದಳು.
ನಟಿ ಕೂದಲನ್ನು ಸಂಪೂರ್ಣವಾಗಿ ಬಾಲ್ಡ್ ಮಾಡಿದ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ, ಫೋಟೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಇದೇನಿದು ಸೀರಿಯಲ್​ಗಾಗಿ ಅಷ್ಟು ಚಂದದ ಕೂದಲಿಗೆ ಕತ್ತರಿ ಹಾಕ್ಬಿಟ್ರಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.ಮೌನ ಗುಡ್ಡೆಮನೆ ಸದ್ಯ ರಾಮಾಚಾರಿಯ ಪ್ರೀತಿಯ ಚಾರು ಆಗಿ ನಟಿಸುತ್ತಿದ್ದಾರೆ. 
ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಅವರ ಟ್ರಾವೆಲ್, ಸೀರಿಯಲ್ ಅಪ್ಡೇಟ್ಸ್ ಕೊಡುತ್ತಿರುತ್ತಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.