ಸರಿಗಮಪದಲ್ಲಿ ಭಾವನಾ ಎಡವಟ್ಟು, ಬಿಸಿ‌ ಮುಟ್ಟಿಸಿದ ರಮೇಶ್ ಅರವಿಂದ್

 | 
Jh
ಚಂದ್ರಮುಖಿ ಪ್ರಾಣಸಖಿ ಖ್ಯಾತಿಯ ನಟಿ ಭಾವನಾ ರಿಯಾಲಿಟಿ ಶೋದಲ್ಲಿ ಬೆತ್ತಲೆ ಬೆನ್ನು ಪ್ರದರ್ಶನ ಮಾಡಿ ಸಿಕ್ಕಾಪಟ್ಟೆ ಟ್ರೋಲ್‌ಗೊಳಗಾಗಿದ್ದಾರೆ. ಎಲ್ಲ ಜಾಲಿ ಜಾಲಿ ಅಂತ ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ. ಹೌದು ಒಂದಲ್ಲ ಎರಡಲ್ಲ ಬರೋಬ್ಬರಿ ಐವತ್ತು ಲಕ್ಷ ವೀಕ್ಷಣೆ ಕಂಡಿರೋ ನಟಿ ಭಾವನಾ ವೀಡಿಯೋವೊಂದು ಸೋಷಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೆನ್ಸೇಶನ್ ಕ್ರಿಯೇಟ್‌ ಮಾಡಿದೆ. ಖ್ಯಾತ ಎಂಟರ್‌ಟೇನ್‌ಮೆಂಟ್ ಚಾನೆಲ್‌ನ ಸಂಗೀತ ರಿಯಾಲಿಟಿ ಶೋದಲ್ಲಿ ಭಾವನಾ ಭಾಗಿಯಾಗಿದ್ದು ಅದರ ವೀಡಿಯೋ ಇದು. 
ಅಷ್ಟಕ್ಕೂ ಈ ವೀಡಿಯೋದಲ್ಲಿ ಭಾವನಾ ತನ್ನ ಬೆತ್ತಲೆ ಬೆನ್ನು ಪ್ರದರ್ಶನ ಮಾಡಿದ್ದೇ ಈ ಮಟ್ಟಿನ ಪಬ್ಲಿಸಿಟಿಗೆ ಕಾರಣವಾಗಿದೆ. ಅಷ್ಟಕ್ಕೂ ಭಾವನಾ ರಾಮಣ್ಣ ಎಷ್ಟೋ ಜನರಿಗೆ ಇವತ್ತಿಗೂ ಚಂದ್ರಮುಖಿ ಪ್ರಾಣಸಖಿ ಭಾವನಾ ಅಂತಲೇ ಮನಸ್ಸಿಗೆ ಹತ್ತಿರವಾದವರು. ಈ ಸಿನಿಮಾದಲ್ಲಿ ಅವರು ಮಾಡಿರೋ ಪಾತ್ರ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು.ಇಪ್ಪತ್ತಾರು ವರ್ಷಗಳ ಹಿಂದೆ ಬಂದಿರೋ ಈ ಸಿನಿಮಾದಲ್ಲಿ ರಮೇಶ್ ನಾಯಕನಾಗಿ ನಟಿಸಿದರೆ ಪ್ರೇಮಾ ನಾಯಕಿಯಾಗಿದ್ದರು. ಎರಡನೇ ನಾಯಕಿಯಾಗಿ ಮಿಂಚಿದ್ದೇ ಈ ಭಾವನಾ. 
ಈ ಸಿನಿಮಾದಲ್ಲೂ ಇವರ ಪಾತ್ರದ ಹೆಸರು ಭಾವನಾ. ಈ ಸಿನಿಮಾ ಎರಡು ದಶಕಗಳ ಹಿಂದೆ ಎಷ್ಟು ಜನಪ್ರಿಯವಾಯ್ತೋ ಭಾವನಾ ಪಾತ್ರವೂ ಅಷ್ಟೇ ಸಕ್ಸಸ್‌ಫುಲ್ ಆಯ್ತು.ಈ ನಡುವೆ ಈ ನಟಿ ಜನಪ್ರಿಯ ಚಾನೆಲ್‌ ಒಂದರ ಪ್ರಸಿದ್ಧ ಸಂಗೀತ ರಿಯಾಲಿಟಿ ಶೋಗೆ ಗೆಸ್ಟ್ ಆಗಿ ಹೋಗಿದ್ದಾರೆ. ಹೋಗೋದೇನೋ ಹೋಗಿದ್ದಾರೆ. ಆದರೆ ಬೆತ್ತಲೆ ಬೆನ್ನು ಪ್ರದರ್ಶಿಸುವಂತೆ ಸೀರೆ ಉಟ್ಟು ಹೋಗಿದ್ದಾರೆ. ಇದರಲ್ಲೇ ರಾಜೇಶ್‌ ಕೃಷ್ಣನ್‌ ಅವರೊಂದಿಗೆ ಡ್ಯಾನ್ಸ್‌ ಮಾಡಿ ಕ್ಯಾಮರ ಎದುರಿಗೂ ತನ್ನ ಬೆತ್ತಲೆ ಬೆನ್ನಿನ ಪ್ರದರ್ಶನ ಮಾಡಿದ್ದಾರೆ.
ಇದನ್ನು ಆ ಚಾನೆಲ್‌ ತನ್ನ ಪ್ರೋಮೋದಲ್ಲಿ ಪ್ರಸಾರ ಮಾಡಿದೆ. ಇದಕ್ಕೆ ಐವತ್ತು ಲಕ್ಷಕ್ಕೂ ಅಧಿಕ ವೀಕ್ಷಣೆ ಆಗಿದೆ. ಇನ್ನೇನು ಒಂದು ದಿನ ಕಳೆದರೆ ಅದು ಅರವತ್ತು ಲಕ್ಷಕ್ಕೆ ಏರಿಕೆ ಆಗಬಹುದು. ಇದು ಕೇವಲ ಇನ್‌ಸ್ಟಾ ಒಂದರಲ್ಲೇ ಆಗಿರುವ ವೀಕ್ಷಣೆ. ಇನ್ನು ಫೇಸ್‌ಬುಕ್, ಯೂಟ್ಯೂಬ್‌, ಜೀ ಫೈವ್‌ ಎಲ್ಲ ಸೇರಿಸರೆ ಈ ವೀಕ್ಷಣೆ ಹತ್ತಿರರತ್ತಿರ ಕೋಟಿ ಸಮೀಪಿಸಬಹುದು. 
ಇದಕ್ಕೆ ಜನ ಬಾಯಿಗೆ ಬಂದಂಗೆ ಕಾಮೆಂಟ್ ಮಾಡಿದ್ದಾರೆ. ಎಲ್ಲ ಜಾಲಿ ಜಾಲಿ ಎಂದು ಒಬ್ಬರು ಕಾಮೆಂಟ್ ಮಾಡಿದರೆ, ನೂರಾರು ಮಂದಿ, ಬ್ಲೌಸ್ ಹಾಕ್ಕೊಂಡು ಬನ್ರೀ... ಎಂದು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ತೀರಾ ಅಶ್ಲೀಲ ಕಾಮೆಂಟ್‌ಗಳೂ ಬಂದಿವೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.