ರಾಮೇಶ್ವರಂ ಕೆಫೆ ಬಾಂ.ಬ್ ಇಟ್ಟವ ಕೊನೆಗೂ ಸಿಕ್ಕಿಬಿದ್ದ? ಯಾವ ಧರ್ಮೀಯ ಗೊ ತ್ತಾ

 | 
ರೀಗೀ

ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರನ ಜಾಡನ್ನು ಹಿಡಿದು ಎನ್‌ಐಎ ಅಧಿಕಾರಿಗಳು ಕರ್ನಾಟಕದಾದ್ಯಂತ ತಿರುಗಾಡುತ್ತಿದ್ದಾರೆ. ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಬಳ್ಳಾರಿಗೆ ತೆರಳಿದ ಶಂಕಿತ ಅಲ್ಲಿಂದ ಭಟ್ಕಳಕ್ಕೆ ಹೋಗಿರುವ ಮಾಹಿತಿ ಲಭ್ಯವಾಗಿದೆ. ಅದಲ್ಲದೇ ಬೀದರ್‌ಗೆ ಕೂಡ ತೆರಳಿರಬಹುದು ಎಂಬ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆ ಎಲ್ಲ ಆಯಾಮಗಳಲ್ಲಿ ಎನ್‌ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಹೌದು ರಾಜಧಾನಿ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್‌ ಸ್ಫೋಟದ ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಶಂಕಿತನ ಜಾಡು ಹಿಡಿದು ಹೋಗಿರುವ ಎನ್‌ಐಎ ಅಧಿಕಾರಿಗಳಿಗೆ ಕ್ಷಣಕ್ಕೊಂದು ತಿರುವು ಸಿಗುತ್ತಿದೆ. ಬೆಂಗಳೂರಿನಿಂದ ಶುರುವಾಗುವ ಶಂಕಿತ ಬಾಂಬರ್‌ನ ಹೆಜ್ಜೆ ಗುರುತು ರಾಜ್ಯದೆಲ್ಲೆಡೆ ಕಂಡುಬಂದಿದ್ದು, ರಾಜ್ಯದ ಹಲವು ನಗರಗಳಲ್ಲಿ ರಾಮೇಶ್ವರಂ ಕೆಫೆ ಬಾಂಬರ್‌ ಗುರುತು ಪತ್ತೆಯಾಗಿದೆ.

ಶಂಕಿತ ಉಗ್ರ ಬಾಂಬ್‌ ಸ್ಫೋಟದ ಬಳಿಕ ಬೆಂಗಳೂರಿನ ಹೂಡಿ ಬಳಿ ಬಟ್ಟೆಯನ್ನು ಬದಲಾಯಿಸಿಕೊಂಡು ಹೋಗಿದ್ದಾನೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಆ ನಂತರ ಮೊದಲು ತುಮಕೂರು ಮಾರ್ಗವಾಗಿ ಬಳ್ಳಾರಿ ಕಡೆಗೆ ಉಗ್ರ ತೆರಳಿದ್ದು, ಅಲ್ಲಿಂದ ಭಟ್ಕಳಕ್ಕೆ ತೆರಳಿರುವ ಬಗ್ಗೆ ಎನ್‌ಐಎ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. ಅದರ ಜೊತೆ ಮತ್ತೊಂದು ಮಾಹಿತಿಯಂತೆ ಬೀದರ್‌ ಕಡೆಯೂ ತೆರಳಿರುವ ಬಗ್ಗೆ ಮಾಹಿತಿಯಿದ್ದು, ಅಧಿಕಾರಿಗಳು ಎರಡು ಕಡೆಯೂ ತನಿಖೆ ನಡೆಸುತ್ತಿದ್ದಾರೆ.

ಶಂಕಿತ ಆರೋಪಿ ತುಮಕೂರು ಮೂಲಕ ಬಳ್ಳಾರಿ ಬಸ್ ನಿಲ್ದಾಣಕ್ಕೆ ಬಂದಿರುವ ಬಗ್ಗೆ ಮಾಹಿತಿ ಆಧರಿಸಿ ಬಳ್ಳಾರಿಯ ಬಸ್ ನಿಲ್ದಾಣದಲ್ಲಿ ಎನ್‌ಐಎ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ. ಶಂಕಿತ ಬಾಂಬರ್‌ ಬಳ್ಳಾರಿ ಬಸ್ ನಿಲ್ದಾಣದಿಂದ ಮಂತ್ರಾಲಯ - ಗೋಕರ್ಣ ಬಸ್ ಮೂಲಕ ಭಟ್ಕಳಗೆ ತೆರಳಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ತಡರಾತ್ರಿಯಿಂದ ಬೆಳಗಿನ ಜಾವದವರೆಗೂ ಬಳ್ಳಾರಿ ಬಸ್ ನಿಲ್ದಾಣದಲ್ಲಿ ಡಿಪೋ ಅಧಿಕಾರಿಗಳಿಂದ ಮಾಹಿತಿ ಪಡೆದು, ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ.ಸ್ಫೋಟದ ದಿನ ಆರೋಪಿ ಆಗಮಿಸಿರುವ ಬಸ್‌ ಬಗ್ಗೆ ಮಾಹಿತಿ, ಬಸ್ ಕಂಡಕ್ಟರ್ ಆರೋಪಿಗೆ ತುಮಕೂರಿನಿಂದ ಬಳ್ಳಾರಿ ಟಿಕೆಟ್ ಕೊಟ್ಟಿರುವ ಮಾಹಿತಿ‌ ಅಧಿಕಾರಿಗಳಿಗೆ ಲಭ್ಯವಾಗಿದೆ. ಇನ್ನು, ಶಂಕಿತ ಉಗ್ರ ಬೀದರ್‌ ಕಡೆಯೂ ಹೋಗಿರುವ ಮಾಹಿತಿ ಲಭ್ಯವಾಗಿದೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.