ರಾಮೇಶ್ವರಂ ಕೆಫೆ ಓನರ್ ದಿವ್ಯ ನಡೆದು ಬಂದ ಹಾದಿ ಕೇಳಿದ್ರೆ ಬೆಚ್ಚಿ ಬೀಳ್ತೀರಾ

 | 
ಕಕಕ

ರಾಮೇಶ್ವರಂ ಕೆಫೆ ಅಂದ್ರೆ ಸಾಕು.. ಬೆಂಗಳೂರಿನ ಫುಡ್‌ ಲವರ್ಸ್‌ಗೆ ತಕ್ಷಣ ನೆನಪಾಗೋದೇ ಘೀ ಪುಡಿ ಇಡ್ಲಿ, ಘೀ ಪುಡಿ ಮಸಾಲೆ ದೋಸೆ, ಬೆಳ್ಳುಳ್ಳಿ ರೋಸ್ಟ್ ದೋಸೆ ಹಾಗೂ ಪೊಂಗಲ್. ಅಷ್ಟರಮಟ್ಟಿಗೆ ಈ ರಾಮೇಶ್ವರಂ ಕೆಫೆಯಲ್ಲಿ ತಯಾರಿಸುವ ಈ ಸ್ಪೆಷಲ್ ಖಾದ್ಯಗಳು ಆಹಾರ ಪ್ರಿಯರ ಬಾಯಲ್ಲಿ ನೀರೂರಿಸುತ್ತವೆ.

ರಾಮೇಶ್ವರಂ ಕೆಫೆಯನ್ನು ಆರಂಭಿಸಿದವರು ದಿವ್ಯಾ ಹಾಗೂ ರಾಘವೇಂದ್ರ ರಾವ್. ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದ ರಾಘವೇಂದ್ರ ರಾವ್ ಅವರಿಗೆ ಫುಡ್ ಇಂಡಸ್ಟ್ರಿಯಲ್ಲಿ 20+ ವರ್ಷಗಳ ಅನುಭವ ಇದೆ. ಇತ್ತ ಚಾರ್ಟರ್ಡ್ ಅಕೌಂಟೆಂಟ್‌  ಆಗಿದ್ದವರು ದಿವ್ಯಾ. ರಾಘವೇಂದ್ರ ರಾವ್ ಹಾಗೂ ದಿವ್ಯಾ ಕೈಜೋಡಿಸಿ 2021ರಲ್ಲಿ ದಿ ರಾಮೇಶ್ವರಂ ಕೆಫೆ ಆರಂಭಿಸಿದರು.

ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಮೇಲೆ ದಿವ್ಯಾ ಹಾಗೂ ರಾಘವೇಂದ್ರ ರಾವ್‌ ವಿಶೇಷ ಅಭಿಮಾನ ಹೊಂದಿದ್ದಾರೆ. ಎಪಿಜೆ ಅಬ್ದುಲ್ ಕಲಾಂ ಅವರ ಹುಟ್ಟೂರು ರಾಮೇಶ್ವರಂ. ಹೀಗಾಗಿ, ತಮ್ಮ ಕೆಫೆಗೆ ದಿ ರಾಮೇಶ್ವರಂ ಕೆಫೆ ಅಂತ ಹೆಸರಿಟ್ಟಿದ್ದಾರೆ.ದಕ್ಷಿಣ ಭಾರತದ ಖಾದ್ಯಗಳನ್ನ ಗ್ಲೋಬಲ್‌ ಲೆವೆಲ್‌ಗೆ ತೆಗೆದುಕೊಂಡು ಹೋಗಲು ದಿ ರಾಮೇಶ್ವರಂ ಕೆಫೆಯನ್ನ ದಿವ್ಯಾ ಹಾಗೂ ರಾಘವೇಂದ್ರ ರಾವ್ ಆರಂಭಿಸಿದರು. ಹೀಗಾಗಿ, ರೆಸ್ಟೋರೆಂಟ್‌ ಹೆಸರು ಹೇಳಿದ ಕೂಡಲೆ ದಕ್ಷಿಣ ಭಾರತದ ಫೀಲ್‌ ಬರಬೇಕಿತ್ತು. ಪರಿಣಾಮ, ರಾಮೇಶ್ವರಂ ಹೆಸರನ್ನ ಕೆಫೆಗೆ ಇಡಲಾಯಿತು.

ದಿವ್ಯಾ ಬೆಂಗಳೂರಿನವರೇ. ಪುರೋಹಿತರ ಕುಟುಂಬದಲ್ಲಿ ಬೆಳೆದು ಬಂದವರು ದಿವ್ಯಾ. ಮಿಡಲ್ ಕ್ಲಾಸ್ ಫ್ಯಾಮಿಲಿಯ ಹುಡುಗಿ ದಿವ್ಯಾ. ತಾವು 3ನೇ ಕ್ಲಾಸ್‌ನಲ್ಲಿ ಓದುವಾಗಲೇ ಫ್ಯಾಮಿಲಿಯಲ್ಲಿನ ಆರ್ಥಿಕ ಬಿಕ್ಕಟ್ಟಿಗೆ ದಿವ್ಯಾ ಸಾಕ್ಷಿಯಾಗಿದ್ದರು. ಚೆನ್ನಾಗಿ ಓದಿ, ಕುಟುಂಬವನ್ನ ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಉದ್ದೇಶದಿಂದ ಸಿಎ ಆಗಬೇಕು ಎಂಬ ಆಸೆ ಅವರಲ್ಲಿ ಹುಟ್ಟಿತು. ಪಿಯುಸಿ ಬಳಿಕ ದಿವ್ಯಾ ಸಿಎ ಆದರು. ಆನಂತರ ಐಐಎಂ ಅಹಮದಾಬಾದ್‌ನಲ್ಲಿ ಮ್ಯಾನೇಜ್‌ಮೆಂಟ್‌ & ಫೈನಾನ್ಸ್‌ ಶಿಕ್ಷಣ ಪಡೆದರು. 

ಅಲ್ಲಿ ಫುಡ್ ಬಿಸಿನೆಸ್‌ ಬಗ್ಗೆ ಕೇಸ್‌ ಸ್ಟಡೀಸ್‌ ಮಾಡಿದ್ಮೇಲೆ ರೆಸ್ಟೋರೆಂಟ್ ತೆರೆಯುವ ಮನಸ್ಸು ಮಾಡಿದರು ದಿವ್ಯಾ. ಇವರಿಗೆ ಕೈಜೋಡಿಸಿದವರು ರಾಘವೇಂದ್ರ ರಾವ್. ಕೋವಿಡ್ ಸಮಯದಲ್ಲಿ ಪ್ಲಾನ್ ಮಾಡಿ 2021ರಲ್ಲಿ ರಾಮೇಶ್ವರಂ ಕೆಫೆ ತೆರೆದರು ದಿವ್ಯಾ ಮತ್ತು ರಾಘವೇಂದ್ರ ರಾವ್.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.