ಈ ಮೊದಲೇ ಮದುವೆಯಾಗಿ ಮಗು ಕೂಡ ಇದೆ, ನಿಜ ಹೇಳಿ ಯುವಕರ ಎದೆಗೆ ಕಾಲಿಟ್ಟ ರಮ್ಯಾ
Jun 20, 2025, 10:38 IST
|

ನಟಿ ರಮ್ಯಾ ಅಂದ್ರೆ ಈಗಲೂ ಹಲವರ ಮುಖ ಅರಳುತ್ತದೆ. ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್ ಆಳಿದ, ಒಂದರ ಮೇಲೊಂದು ಹಿಟ್ ಸಿನಿಮಾ ಕೊಟ್ಟಿದ್ದ ಕ್ವೀನ್, ಸ್ಟಾರ್ ನಟಿ ರಮ್ಯಾ ರಾಜಕೀಯದಲ್ಲೂ ಛಾಪು ಮೂಡಿಸಲು ಮುಂದಾಗಿ ಸೋತಿದ್ದರು. ಅಲ್ಲಿಂದ ಕನ್ನಡ ಚಿತ್ರರಂಗ, ರಾಜಕೀಯದಿಂದ ದೂರು ಸರಿದರು. ಮರಳಿ ಈ ಎರಡು ಕ್ಷೇತ್ರದಲ್ಲಿ ಸಕ್ರಿಯವಾಗದ ರಮ್ಯಾ ಅವರು ಹೊಸ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಲೇ ಇದೆ.
ಇದೀಗ ರಮ್ಯಾ ಅವರು ಬಾಲ್ಯ, ಅಪ್ಪ, ಸರ್‌ನೇಮ್, ಮದುವೆ, ಮಕ್ಕಳ ಕುರಿತು ಮಾತನಾಡಿದ್ದಾರೆ. ಮುಕ್ತವಾಗಿ ಮಾತನಾಡಿದ ನಟಿ ರಮ್ಯಾ ಅವರ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ನಟಿ ರಮ್ಯಾ ಇದೀಗ ಯೂಟ್ಯೂಬ್ ಪಾಡ್‌ಕಾಸ್ಟ್‌ನಲ್ಲಿ ಪ್ರತ್ಯಕ್ಷವಾಗಿದ್ದಾರೆ. ಗಂಟೆಗಳ ಕಾಲ ತಮ್ಮ ಜೀವನದ ಕೆಲವು ಸಂಗತಿಗಳನ್ನು ತಿಳಿಸಿದ್ದಾರೆ. ನಟಿ ಶಭ್ರಾ ಅಯ್ಯಪ್ಪ ಅವರೊಂದಿಗೆ ಪಾಡ್‌ಕಾಸ್ಟ್ ನಲ್ಲಿ ಮಾತನಾಡಿದ್ದಾರೆ. ಚಿಕ್ಕವಳಿದ್ದಾಗ ನಾನು ಹೆಚ್ಚು ಮಾತನಾಡುತ್ತಿದ್ದೆ. ಅಮ್ಮ ತುಂಬಾ ಪ್ರೀತಿ ತೋರಿಸುತ್ತಿದ್ದರು. ನಾನು ಆಗ ಊಟಿಯಲ್ಲಿದ್ದೇ ಎಂದು ನಟಿ ರಮ್ಯಾ ಅವರು ಮಾತು ಆರಂಭಿಸುತ್ತಾರೆ.
ನನಗೆ ಅಮ್ಮ ಮಾತ್ರ ಇದ್ದದ್ದು, ನಾನು ಚಿಕ್ಕವಳಿದ್ದಾಗಲೇ ಅಪ್ಪನನ್ನು ಕಳೆದುಕೊಂಡೆ. ಬೋರ್ಡಿಂಗ್ ಸ್ಕೂಲ್‌ನಲ್ಲಿ ಓದುವಾಗ ಅಪ್ಪನಿಲ್ಲದೇ ಖಾಲಿ ಅನ್ನಿಸುತ್ತಿತ್ತು. ನನಗೆ ಇದ್ದದ್ದು ಸಿಂಗಲ್ ಪೇರೆಂಟ್. ಎಲ್ಲರು ಅವರಪ್ಪನ ಬಗ್ಗೆ ಹೇಳುತಿದ್ದರು. ಆಗ ನಾನು ಅಮ್ಮನ ಹೆಸರು ಹೇಳಿತ್ತಿದ್ದೆ. ನನಗೆ ಸರ್‌ನೇಮ್ ಇರಲಿಲ್ಲ. ನಾನು ಭಿನ್ನವಾಗಿ ಕಾಣಿಸುತ್ತಿದ್ದೆ ಎಂದು ವೈಯಕ್ತಿಕ ಮಾಹಿತಿ ಹಂಚಿಕೊಂಡು ಶಾಲಾ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಇನ್ನು ನನ್ನ ಮದುವೆ ವಿಚಾರ ಆಗಾಗ ಚರ್ಚೆಯಲ್ಲಿರುತ್ತದೆ. ನನಗೆ ಗೊತ್ತಿಲ್ಲದೇ ಅನೇಕ ಸಲ ನನಗೆ ಮದುವೆ ಮಾಡಿಸಿದ್ದಾರೆ. ಮಕ್ಕಳನ್ನು ಮಾಡಿಸಿದ್ದಾರೆ ಎಂದು ನಗೆ ಬೀರಿದರು. ರಮ್ಯಾಗೆ ಮದುವೆ, ಮಕ್ಕಳಾಗಿವೆ. ವಿದೇಶದಲ್ಲಿದ್ದಾರೆ ಎಂದೆಲ್ಲ ಗಾಸಿಪ್ ಹರಿದಾಡಿತ್ತು. ಇದೆಲ್ಲವು ನನಗೆ ವಿಚಿತ್ರ ಅನ್ನಿಸುತ್ತದೆ. ತಮಗೆ ತಾವೇ ಕಲ್ಪನೆ ಮಾಡಿಕೊಂಡು ನನಗೆ ಮದುವೆ ಮಾಡಿದ್ದಾರೆ ಎಂದು ನಗು ನಗುತ್ತಲೇ ಮಾತನಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.