ಡಾಲಿ ಧನಂಜಯ್ ಜೊತೆ ಅಭಿನಯಿಸಲ್ಲ ಎಂದ ರಮ್ಯಾ; ಉತ್ತಾರಕಾಂಡ ಸಿನಿಮಾ ಅರ್ಧಕ್ಕೆ ಕೈಬಿಟ್ಟ ಮೋಹಕ ತಾರೆ

 | 
Ju

ಸ್ಯಾಂಡಲ್‌ವುಡ್‌ನ ಮೋಹಕ ತಾರೆ ನಟಿ ರಮ್ಯಾ ಮತ್ತೆ ಚಿತ್ರರಂಗಕ್ಕೆ ಬರುತ್ತಿರುವುದಾಗಿ ಹೇಳಿದ ಮೇಲೆ, ಅವರ ಅಪಾರ ಅಭಿಮಾನಿ ಬಳಗ ಖುಷಿಪಟ್ಟಿತ್ತು. ಅವರ ಆಗಮನಕ್ಕೆ ಕೆಂಪು ಹಾಸಿನ ಸ್ವಾಗತ ಕೋರಿತ್ತು. ಸುದೀರ್ಘ 8 ವರ್ಷಗಳ ಬಳಿಕ ಚಂದನವನಕ್ಕೆ ಮರಳಿದ್ದ ರಮ್ಯಾ, ಉತ್ತರಕಾಂಡ ಚಿತ್ರಕ್ಕೆ ನಾಯಕಿಯಾಗಿದ್ದರು. ಸಿನಿಮಾ ಕಥೆ ಕೇಳಿ ಥ್ರಿಲ್‌ ಆಗಿದ್ದೇನೆ, ಇನ್ಮ್ಯಾಲಿಂದ ಫುಲ್‌ ಗುದ್ದಾಂ ಗುದ್ದಿ ಎಂದೂ ಹೇಳಿಕೊಂಡಿದ್ದರು. 

ಆದರೆ, ಈಗ ಇದೇ ರಮ್ಯಾ, ಅಭಿಮಾನಿ ವಲಯದ ಆಸೆಯನ್ನು ನಿರಾಸೆ ಮಾಡಿದ್ದಾರೆ. ಉತ್ತರಕಾಂಡ ಚಿತ್ರದಿಂದ ಹಿಂದೆ ಸರಿದಿದ್ದಾರೆ. ದೇಶದಲ್ಲೀಗ ಲೋಕಸಭೆ ಚುನಾವಣೆಯ ಕಾವು ಜೋರಾಗಿದೆ. ಈ ಮೊದಲು ಕಾಂಗ್ರೆಸ್‌ ಪಕ್ಷದಿಂದ ಗುರುತಿಸಿಕೊಂಡಿದ್ದ ರಮ್ಯಾ, ಇದೀಗ ಇದೇ ಚುನಾವಣೆಯ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆಯೇ? ಅದರಲ್ಲೂ ರಮ್ಯಾಗೆ ಈ ಸಲವೂ ಟಿಕೆಟ್‌ ಸಿಕ್ಕಿಲ್ಲ. 

ಟಿಕೆಟ್‌ ಸಿಗದಿದ್ದರೇನಂತೆ, ಪಕ್ಷದ ಅಭ್ಯರ್ಥಿಗಳ ಪ್ರಚಾರಕ್ಕೆ ಮುಂದಾಗಲಿದ್ದಾರೆ ಎಂದೂ ಹೇಳಲಾಗುತ್ತಿತ್ತು. ಆದರೆ, ಈಗ ಇದೇ ವಿಚಾರವನ್ನು ತಮ್ಮ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ರಮ್ಯಾ, ಉತ್ತರಕಾಂಡ ಸಿನಿಮಾ ಮಾತ್ರವಲ್ಲದೇ ರಾಜಕೀಯದ ಬಗ್ಗೆಯೂ ತಿಳಿಸಿದ್ದಾರೆ. ಡೇಟ್‌ ಕೊರತೆಯಿಂದ ನಾನು ಉತ್ತರಕಾಂಡ ಸಿನಿಮಾದಲ್ಲಿ ನಟಿಸುತ್ತಿಲ್ಲ. ಆ ಚಿತ್ರದಿಂದ ಹಿಂದೆ ಸರಿದಿದ್ದೇನೆ. ಈ ಮೂಲಕ ನಾನು ಸಿನಿಮಾ ಮತ್ತು ರಾಜಕೀಯ ಕೆಲಸಗಳನ್ನು ಹೋಲ್ಡ್‌ ಮಾಡಿದ್ದೇನೆ. ಉತ್ತರಕಾಂಡ ಚಿತ್ರತಂಡಕ್ಕೆ ನನ್ನ ಶುಭ ಹಾರೈಕೆಗಳುಎಂದು ರಮ್ಯಾ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಪೋಸ್ಟ್‌ ಮಾಡಿದ್ದಾರೆ.

 ಬಹುತೇಕರು ಲೋಕಸಭೆ ಚುನಾವಣೆ ನಿಮಿತ್ತ ನಟಿ ರಮ್ಯಾ ಸಿನಿಮಾ ಕೈ ಬಿಟ್ಟಿರಬಹುದು ಎಂದುಕೊಂಡಿದ್ದರು. ಈಗ ಪೋಸ್ಟ್‌ನಲ್ಲಿ ರಾಜಕೀಯದಲ್ಲೂ ತೊಡಗಿಸಿಕೊಳ್ಳದಿರುವ ಬಗ್ಗೆ ಖಾತ್ರಿ ಪಡಿಸಿದ್ದಾರೆ. ಆದರೆ, ಈ ನಿರ್ಧಾರಕ್ಕೆ ಕಾರಣ ಏನಿರಬಹುದು? ಅದನ್ನು ಅವರೇ ಹೇಳಬೇಕು.2016ರಲ್ಲಿ ಕೋಡಿ ರಾಮಕೃಷ್ಣ ನಿರ್ದೇಶನದಲ್ಲಿ ಮೂಡಿಬಂದಿದ್ದ ನಾಗರಹಾವು ಸಿನಿಮಾದಲ್ಲಿ ಪೂರ್ಣಪ್ರಮಾಣದ ನಾಯಕಿಯಾಗಿ ರಮ್ಯಾ ನಟಿಸಿದ್ದರು. ಅದಾದ ಬಳಿಕ ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 

ಜತೆಗೆ ತಮ್ಮದೇ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಲ್ಲೂ ನಟಿಸುವುದಾಗಿ ಹೇಳಿದ್ದರು. ಆದರೆ, ರಾಜ್‌ ಬಿ ಶೆಟ್ಟಿ ನಿರ್ದೇಶನದ ಆ ಸಿನಿಮಾದಿಂದಲೂ ರಮ್ಯಾ ಹಿಂದೆ ಸರಿದರು. ಅವರ ಸ್ಥಾನಕ್ಕೆ ಸಿರಿ ರವಿಕುಮಾರ್‌ ಅವರನ್ನು ಕರೆತಂದರು. ಕಳೆದ ವರ್ಷ ಬಿಡುಗಡೆಯಾಗಿದ್ದ ಆ ಸಿನಿಮಾ ಅಷ್ಟೇನೂ ಸದ್ದು ಮಾಡಲಿಲ್ಲ. ಹೀಗಿರುವಾಗಲೇ ಈಗ ಉತ್ತರಕಾಂಡದಿಂದಲೂ ಆಚೆ ನಡೆದು ಅಭಿಮಾನಿಗಳ ಮನಸ್ಸಿಗೆ ನೋವು ನೀಡಿದ್ದಾರೆ ರಮ್ಯಾ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.