ವಯಸ್ಸು 40 ದಾಟಿದರು ಕೂಡ ಇನ್ನೂ ಚಿನ್ನದಂತ ಫಿಗರ್ ಹೊಂದಿದ್ದಾರೆ ಮೋಹಕ ತಾರೆ ರಮ್ಯಾ

 | 
Hi
ಕನ್ನಡ ಚಿತ್ರರಂಗದಲ್ಲಿ ಈದೀಗ ವೈರಲ್ ಟಾಕ್ ನಡೀತಿರೋದು ಇದೊಂದೆ ವಿಷಯದ ಬಗ್ಗೆ. ಹೌದು ಕಣ್ರೀ ನಟಿ ರಮ್ಯಾಗೆ ವಯಸ್ಸೇ ಆಗಲ್ವಾ? ಈಗಲೂ ನವ ತರುಣಿಯಂತೆ ಕಂಗೊಳಿಸುತ್ತಿರೋ ಸಂದ್ರಿ! ನಿಜಕ್ಕೂ ಇವಳು ಊರಿಗೆ ಒಬ್ಬಳೇ ಪದ್ಮಾವತಿ ಅನ್ನೋ ಸುದ್ದಿ ಎಲ್ಲೆಡೆ ಕೇಳಿ ಬರ್ತಿದೆ..
ಸ್ನೇಹಿತರೇ... ನಟಿ ರಮ್ಯ ಮತ್ತ ರಕ್ಷಿತಾ ಒಂದೇ ಸಮಯದಲ್ಲಿ ಚಂದನವನಕ್ಕೆ ಕಾಲಿಟ್ಟವರು. ಇಬ್ಬರೂ ಚಿತ್ರರಂಗದ ಬಹುಬೇಡಿಕೆಯ ನಟಿಯರಾಗಿದ್ದವರು. ರಕ್ಷಿತಾ ಪ್ರೇಮ್‌ರನ್ನು ಮದುವೆಯಾದ ಬಳಿಕ ಚಿತ್ರರಂಗವನ್ನು ತೊರೆದರೆ, ರಮ್ಯಾ ರಾಜಕೀಯ ಸೇರಿದ ಬಳಿಕ ಸಿನಿಮಾಗಳಲ್ಲಿ ಅಭಿನಯಿಸುವುದನ್ನು ಬಿಟ್ಟರು. ಇಬ್ಬರೂ ಒಂದೇ ಕಾಲದಲ್ಲಿ ಉತ್ತುಂಗದಲ್ಲಿದ್ದಾಗ, ಇಬ್ಬರ ನಡುವೆ ಪೈಪೋಟಿಯಿತ್ತು, ಆದರೆ ಈಗ ಇಬ್ಬರೂ ಉತ್ತಮ ಸ್ನೇಹಿತೆಯರು.
ಸ್ನೇಹಿತರೇ... ಈಗ ರಮ್ಯಾ ಸಿನಿ ರಂಗದಿಂದ ಕೊಂಚ ದೂರ ಸರಿದಿದ್ದಾರೆ. ರಾಜಕೀಯದಲ್ಲಿ ಕೂಡ ಮೊದಲಿನಷ್ಟು ಕಾಣಿಸುತ್ತಿಲ್ಲ. ಇನ್ನೇನು ರಮ್ಯಾ ತೆರೆ ಮರೆಗೆ ಸೇರಿ ಬಿಟ್ರು ಅನ್ನೋವಾಗಲೇ ರಕ್ಷಿತಾ ತಮ್ಮ ರಾಣಾ ಮದುವೆಗೆ ಮೋಹಕ ತಾರೆ ರಮ್ಯಾ ಆಗಮಿಸಿದ್ದರು. ರಮ್ಯಾರನ್ನು ನೋಡಿದ ಅಭಿಮಾನಿಗಳು ಮಾತ್ರ ಫುಲ್ ಖುಷಿಯಾಗಿದ್ದಾರೆ. ಮೋಹಕ ತಾರೆಯ ಅಂದ ನೋಡಿದ ಫ್ಯಾನ್ಸ್ ರಮ್ಯಾ ನಿಮಗೆ ವಯಸ್ಸೇ ಆಗಲ್ವಾ ಎಂದು ಕೇಳಿದ್ದಾರೆ
ಸ್ನೇಹಿತರೇ...ರಕ್ಷಿತಾ ಸಹೋದರ ರಾಣಾ ಮದುವೆಗೆ ರಮ್ಯಾ ಆಗಮಿಸಿದ್ದು ನೆರೆದಿದ್ದವರ ಗಮನ ಸೆಳೆದರು. ಅವರು ಮದುವೆಗೆ ಬಂದಿದ್ದ ವಿಡಿಯೋಗಳು ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ರಮ್ಯಾರನ್ನು ಕಪ್ಪು ಸೀರೆಯಲ್ಲಿ ನೋಡಿದ ಅಭಿಮಾನಿಗಳು ಸಖತ್ ಮೆಚ್ಚಿಕೊಂಡಿದ್ದಾರೆ. ರಮ್ಯಾ ಅಂದ ಒಂಚೂರು ಕಡಿಮೆಯಾಗಿಲ್ಲ ಅದಕ್ಕೆ ಅವರನ್ನು ಸ್ಯಾಂಡಲ್‌ವುಡ್ ಕ್ವೀನ್ ಎನ್ನುವುದು ಎಂದು ಹಾಡಿಹೊಗಳಿದ್ದಾರೆ.ರಮ್ಯಾಗೆ ಈಗ 42 ವರ್ಷ, ಆದರೆ ಅವರನ್ನು ನೋಡಿದರೆ ಅಷ್ಟೊಂದು ವಯಸ್ಸಾಗುತ್ತದೇ ಎಂದು ಹೇಳುವುದೇ ಕಷ್ಟ. ದಿನೇ ದಿನೇ ನಿಮಗೆ ವಯಸ್ಸು ಕಡಿಮೆಯಾಗುತ್ತಿದೆ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ನೇಹಿತರೇ...ರಮ್ಯಾರನ್ನು ತಬ್ಬಿಕೊಂಡು ರಕ್ಷಿತಾ ಬರಮಾಡಿಕೊಂಡಿದ್ದಾರೆ. ದಂಪತಿಗಳಿಗೆ ಶುಭ ಹಾರೈಸಿದ ರಮ್ಯಾ ನಂತರ ಅಭಿಮಾನಿಗಳ ಜೊತೆ ಸೆಲ್ಫಿಗೆ ಫೋಸ್ ಕೊಟ್ಟಿದ್ದಾರೆ. ನಗು ನಗುತ್ತಲೇ ಎಲ್ಲರನ್ನೂ ಮಾತಾಡಿಸುವ ವಿಡಿಯೋಗಳನ್ನು ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ಆಗೊಮ್ಮೆ ಈಗೊಮ್ಮೆ ರಮ್ಯಾ ಮತ್ತೆ ಸಿನಿಮಾ ಮಾಡಲ್ವ ಎನ್ನುವ ವಿಚಾರ ಚರ್ಚೆಯಾಗುತ್ತಲೇ ಇರುತ್ತದೆ. ಆದರೆ ಅದಕ್ಕೆಲ್ಲ ಫುಲ್ ಸ್ಟಾಪ್ ಇಟ್ಟು ಮತ್ತೆ ಚಿತ್ರರಂಗದಲ್ಲಿ ರಮ್ಯಾ ಕಾಣಿಸಿಕೊಳ್ಳಲಿ ಅನ್ನೊದು ಅಭಿಮಾನಿಗಳ ಆಶಯ...
ನಿಮಗೂ ನಟಿ ರಮ್ಯಾ ಅವರ ಅಭಿನಯ ಇಸ್ಟವಾಗಿದ್ರೆ. ಅವರು ಅಭಿನಯಿಸಿದ ಯಾವ ಸಿನಿಮಾ ಇಷ್ಟ ಎಂದು ಈಗಲೇ ಕಮೆಂಟ್ ಮಾಡಿ ತಿಳಿಸಿ.