ಸಚಿವರ ಮಾತಿಗೆ ರೊಚ್ಚಿಗೆದ್ದ ರಂಗಣ್ಣ, ಸಾಲ ಮನ್ನ ವಿಚಾರಕ್ಕೆ ಗುಮ್ಮಿದ ರಂ.ಗಣ್ಣ

 | 
ಪರ ಕ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ್, ಹಿಂದಿನ ಸರ್ಕಾರಗಳು ಸಾಲ ಮನ್ನಾ ಮಾಡಿವೆ. ಆದರೆ ಸರ್ಕಾರ ಕಷ್ಟದಲ್ಲಿದ್ದಾಗ ಅದು ಸಾಧ್ಯವಿಲ್ಲ ಎಂದಿದ್ದಾರೆ. ರೈತರ ಬಗ್ಗೆ ಸಚಿವ ಶಿವಾನಂದ ಪಾಟೀಲ್ ಹಗುರವಾಗಿ ಮಾತನಾಡಿದ್ದಾರೆ. ಸಾಕಷ್ಟು ಜನ ರೈತರು ಬರಗಾಲವನ್ನ ಎದುರು ನೋಡುತ್ತಾರೆ. ಬರಗಾಲ ಬಂದರೆ ಸಾಲ ಮನ್ನ ಆಗುತ್ತೆ ಎಂಬ ನಿರೀಕ್ಷೆ ಅವರಲ್ಲಿರುತ್ತೆ ಎಂದಿದ್ದಾರೆ.  

ಕೃಷ್ಣಾನದಿ ನೀರು ಪುಕ್ಸಟ್ಟೆ, ಅದೇ ರೀತಿ ಕರೆಂಟ್ ಕೂಡ ಪುಕ್ಸಟ್ಟೆ ಸಿಗುತ್ತಿದೆ. ಮುಖ್ಯಮಂತ್ರಿಗಳು ಬಿತ್ತನೆ ಬೀಜ, ಗೊಬ್ಬರದ ವ್ಯವಸ್ಥೆ ಕಲ್ಪಿಸಿದ್ದಾರೆ. ಬರಗಾಲ ಬಂದರೆ ರೈತರು ಸಾಲ ಮನ್ನಾ ಆಗುವ ನಿರೀಕ್ಷೆ ಇಟ್ಟುಕೊಳ್ಳುತ್ತಾರೆ. ರೈತರ ಆಸೆ ಒಂದೆ ಆಗಿದ್ದು, ಮತ್ತೆ ಮತ್ತೆ ಬರಗಾಲ ಬರಲಿ ಎಂದು ರೈತರು ಬಯಸುತ್ತಾರೆ.

ಆಗ ನಮ್ಮ ಸಾಲ ಮನ್ನಾ ಆಗಲಿದೆ ಎಂದು ರೈತರು ನಿರೀಕ್ಷೆ ಇಟ್ಟುಕೊಳ್ಳುತ್ತಾರೆ ಎಂದು ಶಿವಾನಂದ ಅವರು ಹೇಳಿಕೆ ನೀಡಿದ್ದು, ಬಿಜೆಪಿ ಸೇರಿ ಪ್ರತಿಪಕ್ಷ, ರೈತ ಸಂಘಟನೆಗಳು ಸಚಿವ ಶಿವಾನಂದ ಪಾಟೀಲ ಅವರ ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ ರಾಜೀನಾಮೆಗೆ ಆಗ್ರಹಿಸಿವೆ. ಪ್ರತಿಪಕ್ಷಗಳು ಹಾಗೂ ರೈತ ಸಂಘಟನೆಗಳು ತಮ್ಮ ವಿರುದ್ಧ ಗರಂ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಶಿವಾನಂದ್ ಪಾಟೀಲ್ ಸಮರ್ಥನೆ ನೀಡಿದ್ದಾರೆ. ನನ್ನ ಹೇಳಿಕೆಯನ್ನು ಸಂಪೂರ್ಣವಾಗಿ ತಿರುಚಲಾಗಿದೆ. 

ನಾನು ಎಂದಿಗೂ ರೈತ ವಿರೋಧಿಯಲ್ಲ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ರಾಜಕೀಯ ಮಾಡಲು ನನ್ನ ಹೇಳಿಕೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಸಚಿವ ಶಿವಾನಂದ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ಇನ್ನು ಈ ಕುರಿತಾಗಿ ಒಂದಿಷ್ಟು ಮಾತನಾಡಿದ ಮಾಧ್ಯಮದವರು ಚೆನ್ನಾಗಿ ಬೆಂಡೆತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.