ರೈತನ ಬಟ್ಟೆ ನೋಡಿ ಮೆಟ್ರೋ ಒಳಗಡೆ ಬಿಡದ ಅಧಿಕಾರಿಗಳು, ಎದ್ದು ಬಿದ್ದು ರೊ.ಚ್ಚಿಗೆದ್ದ ರಂಗಣ್ಣ

 | 
Yyy

ಬೆಂಗಳೂರಿನಲ್ಲಿ ರೈತನ ಬಟ್ಟೆ ಮೆಟ್ರೋ ಪ್ರಯಾಣಕ್ಕೆ ಸೂಕ್ತವಲ್ಲವೆಂದು ತಡೆದಿದ್ದ ಭದ್ರತಾ ಸಿಬ್ಬಂದಿಯೊಬ್ಬರನ್ನು ವಜಾಗೊಳಿಸಲಾಗಿದೆ. ರೈತನನ್ನು ತಡೆದು ಬಟ್ಟೆ ಗಲೀಜಾಗಿದೆ ನಿಮಗೆ ಪ್ರಯಾಣಕ್ಕೆ ಅನುಮತಿಸುವುದಿಲ್ಲ ಎಂದು ಹೇಳಲಾಗಿತ್ತು. ಇದನ್ನು ಪ್ರಶ್ನಿಸಿ ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದು, ವೈರಲ್ ಆದ ಬಳಿಕ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಕೋಲಾಹಲ ಸೃಷ್ಟಿಸಿತ್ತು. ಘಟನೆಯು ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ನಡೆದಿದ್ದು, ರೈತ ಬಿಳಿ ಶರ್ಟ್ ಧರಿಸಿ, ತಲೆಯ ಮೇಲೆ ಗೋಣಿಚೀಲದಂತೆ ಕಾಣುವ ಮೂಟೆಯೊಂದನ್ನು ಹೊತ್ತಿದ್ದರು. ತಪಾಸಣೆಯಲ್ಲಿ ಮೂಟೆಯಲ್ಲಿ ಏನೂ ಅಪಾಯಕಾರಿ ವಸ್ತುಗಳು ಇರಲಿಲ್ಲ. ಅವರ ಬಟ್ಟೆ ಮಾಸಿಹೋಗಿ ಗಲೀಜಾಗಿ ಕಂಡಿದೆ ಅಷ್ಟೇ.

ವೈರಲ್ ವಿಡಿಯೋದಲ್ಲಿ ಹಿಂದಿ ಮಾತನಾಡುತ್ತಿರುವ ರೈತನಿಗೆ ಪ್ರವೇಶ ನೀಡದ ಕಾರಣ ಚೆಕಿಂಗ್ ಪಾಯಿಂಟ್‌ನಲ್ಲಿ ಲಗ್ಗೇಜ್ ಸ್ಕಾನರ್ ಬಳಿ ನಿಂತಿರುವುದನ್ನು ಕಾಣಬಹುದು. ಇದೇ ವಿಡಿಯೋವನ್ನು ಮಾಡಿದ ಕಾರ್ತಿಕ್ ಎಂಬಾತ ಸಿಬ್ಬಂದಿ ಬಳಿ ಪ್ರವೇಶ ನಿರಾಕರಣೆಯನ್ನು ಪ್ರಶ್ನಿಸುವುದನ್ನು ನೋಡಬಹುದು. ಇಲ್ಲಿ ಪದೇ ಪದೇ ಬಟ್ಟೆ ಗಲೀಜಿರುವುದನ್ನೇ ಕಾರಣವಾಗಿ ಹೇಳಿರುವುದನ್ನು ಕೇಳಬಹುದು.

ರೈತ ಯಾವುದೇ ಮಾರಣಾಯುಧಗಳನ್ನು ಹೊತ್ತೊಯ್ಯುತ್ತಿಲ್ಲ, ಬದಲಿಗೆ ಅವರು ಕೇವಲ ಬಟ್ಟೆಗಳನ್ನು ಮಾತ್ರ ಚೀಲದಲ್ಲಿ ಹೊತ್ತೊಯ್ಯುತ್ತಿದ್ದಾರೆ. ಇದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ  ನಿಯಮಗಳ ಉಲ್ಲಂಘನೆಯೇನಲ್ಲ ಎಂದು ವಿಡಿಯೋ ಮಾಡಿದವರ ಜೊತೆಗೆ ಅಲ್ಲೇ ಇದ್ದ ಮತ್ತೊಬ್ಬ ಪ್ರಯಾಣಿಕ ಅಧಿಕಾರಿಗಳಿಗೆ ಹೇಳುತ್ತಿದ್ದರು.

ಸಾಕಷ್ಟು ಸಮಯ ಸಿಬ್ಬಂದಿಯೊಂದಿಗೆ ವಾದ ಮಾಡಿದ ಬಳಿಕ ರೈತನ ಪ್ರವೇಶಕ್ಕೆ ಒಪ್ಪಿಗೆ ನೀಡಲಾಯಿತು. ಕೇವಲ ಗಲೀಜಿರುವ ಬಟ್ಟೆಯನ್ನು ಹಾಕಿದ್ದ ಕಾರಣ ರೈತನಿಗೆ ಹೀಗೆ ಅವಮಾನ ಮಾಡುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪ್ರವೇಶಕ್ಕೆ ಅಡ್ಡಿಪಡಿಸಿದ ಭದ್ರತಾ ಮೇಲ್ವಿಚಾರಕನನ್ನು ವಜಾಗೊಳಿಸಲಾಗಿದೆ. ಇನ್ನು ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ರಂಗಣ್ಣ ಹೊಟ್ಟೆಗೆ ಏನ್ ತಿಂತೀರಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.