ಕಾಟೇರ ಸಿನಿಮಾದ ಕಲೆಕ್ಷನ್ ಕೇಳಿ ರಂಗಣ್ಣ ಗಪ್ಚುಪ್

 | 
B

ರಾಜ್ಯಾದ್ಯಂತ ಕಾಟೇರ ಸಿನಿಮಾ ಧೂಳೆಬ್ಬಿಸುತ್ತಿದೆ. ಆರು ದಿನಕ್ಕೆ ಈ ಚಿತ್ರ  ಸರಿ ಸುಮಾರು 100 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ‌. ಆ ಕುರಿತ ಪ್ರಶ್ನೆಗೆ ರಾಕ್‌ಲೈನ್ ವೆಂಕಟೇಶ್ ಪ್ರತಿಕ್ರಿಯೆ ನೀಡಿದ್ದಾರೆ.ದರ್ಶನ್ ಅಭಿಮಾನಿಗಳು  ಕಾಟೇರ  ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಅನೇಕ ಕಡೆಗಳಲ್ಲಿ ಈ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಅದೇ ಖುಷಿಯಲ್ಲಿ ಕಾಟೇರ ಚಿತ್ರತಂಡದವರು ಸಕ್ಸಸ್ ಮೀಟ್ ಮಾಡಿದ್ದಾರೆ. 

ಇನ್ನು ಈ ವೇಳೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರಿಗೆ ಕಾಟೇರ ಚಿತ್ರದ ಕಲೆಕ್ಷನ್ ಬಗ್ಗೆ ಕೇಳಲಾಯಿತು. ನನ್ನ ಸಿನಿಮಾಗಳ ಬಜೆಟ್, ಲಾಭ, ನಷ್ಟದ ಬಗ್ಗೆ ನಾನು ಯಾರೊಂದಿಗೂ ಮಾತಾಡಲ್ಲ. ಕಾಟೇರ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿದೆ ಅಂತ ನೀವೇ ಬರೆಯುತ್ತಿದ್ದೀರಿ. ಹಾಗೇ ಆಗಲಿ ಅಂತ ಭಗವಂತನಲ್ಲಿ ಪ್ರಾರ್ಥನೆ ಮಾಡಿಕೊಂಡು ಸುಮ್ಮನೆ ಇದ್ದೇನೆ. ಚೆನ್ನಾಗಿ ಕಲೆಕ್ಷನ್ ಆಗುತ್ತಿದೆ. ನಾನು ಲೆಕ್ಕ ನೋಡೋಕೆ ಹೋಗಿಲ್ಲ. ಅದನ್ನು ಕೊನೆಯಲ್ಲಿ ಮಾಡ್ತೀನಿ.‌ ಆಮೇಲೆ ಹೇಳ್ತೀನಿ ಎಂದು ರಾಕ್‌ಲೈನ್ ವೆಂಕಟೇಶ್ ಹೇಳಿದ್ದಾರೆ.

ಈಗಾಗಲೇ ಚಿತ್ರ  ಬಿಡುಗಡೆ ಆಗಿ ಒಂದು ವಾರ ಕಳೆದರು ಕಾಟೇರ ಕ್ರೇಜ್ ಇನ್ನು ಕಡಿಮೆ ಆಗಿಲ್ಲ. ಬೆಂಗಳೂರಿನಲ್ಲಿ ಮೊದಲ ವಾರಕ್ಕಿಂತ ಎರಡನೇ ವಾರ ಕಾಟೇರ ಪ್ರದರ್ಶನಗಳ ಸಂಖ್ಯೆ ಹೆಚ್ಚಾಗಿದೆ. ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲೂ ಕಾಟೇರ ಚಿತ್ರಕ್ಕೆ ಉತ್ತಮ ಬೇಡಿಕೆ ಇದೆ. ಗೋವಾ, ಹೈದರಾಬಾದ್, ಹೊಸೂರಿನಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ.

ರಾಜ್ಯದಲ್ಲಿ ಮೋಡಿ ಮಾಡಿರುವ ಕಾಟೇರ ಈಗ ವಿದೇಶದಲ್ಲೂ ಬಿಡುಗಡೆಗೆ ಸಿದ್ಧವಾಗಿದೆ. ದುಬೈ, ಯುಎಸ್ಎ, ಕೆನಡಾ, ಆಸ್ಟ್ರೇಲಿಯಾ, ಒಮನ್ ದೇಶಗಳಲ್ಲಿ ಕೂಡ ಕಾಟೇರ ಪ್ರದರ್ಶನ ಕಾಣಲಿದೆ. ಕನ್ನಡದಲ್ಲಿ ಮೆಗಾಹಿಟ್ ಅದ ಬಳಿಕ ಹಲವು ಭಾಷೆಗಳಿಂದ ಕೂಡ ಬೇಡಿಕೆ ಬಂದಿದ್ದು, ಡಬ್ ಮಾಡಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ‌. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.