ಬಾಯ್ ಫ್ರೆಂಡ್ ಜೊತೆ ಭರ್ಜರಿ ಸ್ಟೆಪ್ ಹಾಕಿದ ಶ್ರೇಯಾಂಕಾ ಪಾಟೀಲ್; ಮೆಚ್ಚಿಗೆ ಪಟ್ಟ ಕನ್ನಡಿಗರು

 | 
Ha

ನಮ್ಮ ಕನ್ನಡದ ಹುಡುಗಿ ಆರ್‌ಸಿಬಿ ತಂಡದ ಆಟಗಾರ್ತಿ, ಶ್ರೇಯಾಂಕಾ ಪಾಟೀಲ್ ಉತ್ತಮ ಡ್ಯಾನ್ಸರ್ ಕೂಡ ಎನ್ನುವುದು ಗೊತ್ತಿದೆ. ಶುಕ್ರವಾರ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಕತ್ ಡ್ಯಾನ್ಸ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಹೌದು ಪಟ್ ಪಟ್ ಎಂದು ಮಾತನಾಡುವ ಇವರು ಅಭಿಮಾನಿಗಳ ಫೇವರೆಟ್.

ಅಷ್ಟಕ್ಕೂ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಅಭಿಯನಯದ ಗೌರಿ ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮ ಮೈಸೂರಿನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೇಯಾಂಕಾ ಪಾಟೀಲ್ ಸಮರ್ಜಿತ್ ಲಂಕೇಶ್ ಜೊತೆ ಭರ್ಜರಿ ಸ್ಟೆಪ್ಟ್ ಹಾಕುವ ಮೂಲಕ ಮಿಂಚಿದ್ದಾರೆ. ಆಟ ಆಡಲು ಮಾತ್ರವಲ್ಲ ಡ್ಯಾನ್ಸ್ ಮಾಡಲು ಕೂಡ ನಾವು ಸೈ ಎನಿಸಿಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಬ್ಯಾಟಿಂಗ್ ಕೂಡ ಮಾಡಿದ ಶ್ರೇಯಾಂಕ ಪಾಟೀಲ್, ಬಳಿಕ ಹಾಡು ಬಿಡುಗಡೆ ಮಾಡಿದರು. ಬಳಿಕ ಸಮರ್ಜಿತ್ ಲಂಕೇಶ್ ಜೊತೆಗೆ ವೇದಿಕೆಯಲ್ಲಿ ಭರ್ಜರಿ ಡ್ಯಾನ್ಸ್ ಮಾಡುವ ಮೂಲಕ ನೆರೆದ ಪ್ರೇಕ್ಷಕರನ್ನು ರಂಜಿಸಿದರು.ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆರ್ ಸಿಬಿ ತಂಡದ ಪ್ರದರ್ಶನದ ಬಗ್ಗೆ ಮಾತನಾಡಿದರು. 

ಆರ್ ಸಿಬಿ ಇಷ್ಟು ವರ್ಷ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅದಕ್ಕೆ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ನಮಗೆ ಅಷ್ಟು ಬೆಂಬಲ ಸಿಕ್ಕಿದೆ ಎಂದರು. ಬಾಯ್‌ಫ್ರೆಂಡ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟ ಶ್ರೇಯಾಂಕಾ ಪಾಟೀಲ್, ನಾನಿನ್ನೂ ಸಿಂಗಲ್, ನಿಮಗೆ ಯಾರಾದ್ರೂ ಗೊತ್ತಿದ್ದರೆ ಹೇಳಿ ಎಂದು ಮಾಧ್ಯಮದವರ ಜೊತೆ ತಮಾಷೆಯಾಗಿದೆ ಮಾತನಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.