ರಂಜನಿ‌ ರಾಘವನ್ ಮದುವೆ ಫಿಕ್ಸ್; 'ನನ್ನ ಮದುವೆಗೆ ನಿವೆಲ್ಲರೂ ಬರಬೇಕು ಎಂದ ಪುಟ್ಟಗೌರಿ

 | 
Hd
 ರಂಜನಿ ರಾಘವನ್‌ ಕನ್ನಡದ ಪ್ರತಿಭಾನ್ವಿತ ನಟಿ. ಕನ್ನಡತಿ, ಪುಟ್ಟಗೌರಿ ಮದುವೆ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ಮನೋಜ್ಞವಾಗಿ ನಟಿಸಿ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದರು. ಇದೀಗ ರಂಜನಿ ರಾಘವನ್‌ ತನ್ನ ಲೈಫ್‌ ಪಾಟ್ನರ್‌ ಬಗ್ಗೆ ತಿಳಿಸಿದ್ದಾರೆ. ರಂಜನಿ ರಾಘವನ್‌ ಲವ್‌ ಸಾಗರ್‌ ಭಾರಧ್ವಜ್‌ ಎಂದಿದ್ದಾರೆ. ಸಾಗರ್‌ ಭಾರಧ್ವಜ್‌ ಜತೆಗೆ ಕನ್ನಡಿ ಮುಂದೆ ನಿಂತ ಫೋಟೋವನ್ನು ಹಂಚಿಕೊಂಡಿದ್ದಾರೆ.
 ಕನ್ನಡಿಯಲ್ಲಿ ಕಾಣಿಸುವ ವಿಷಯಗಳು ಅವು ಕಾಣಿಸುವುದಕ್ಕಿಂತಲೂ ಹತ್ತಿರವಾಗಿರುತ್ತವೆ ಎಂಬ ಮಿರರ್‌ ಡೈಲಾಗ್‌ ಅನ್ನು ಕ್ಯಾಪ್ಷನ್‌ ಆಗಿ ನೀಡಿದ್ದಾರೆ. ನನ್ನ ಹುಡುಗ, ಲೈಫ್‌ ಪಾಟ್ನರ್‌ ಎಂಬ ಹ್ಯಾಷ್‌ಟ್ಯಾಗ್‌ನಡಿ ಈ ಲೈಫ್‌ ಪಾಟ್ನರ್‌ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಮೆಚ್ಚಿನ ನಟಿಯ ಲೈಫ್‌ ಪಾಟ್ನರ್‌ ವಿಷಯ ತಿಳಿದು ಸಾಕಷ್ಟು ಜನರು ಕಾಮೆಂಟ್‌ಗಳ ಪ್ರವಾಹವನ್ನೇ ಹರಿಸಿದ್ದಾರೆ. ಇದೇ ಸಂದರ್ಭದಲ್ಲಿ ಈ ಸುದ್ದಿ ಕೇಳಿ ಒಬ್ಬರು ಬೇಸರದಲ್ಲಿ ಕಾಮೆಂಟ್‌ ಮಾಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಜೀವನ ಸಂಗಾತಿಯ ಫೋಟೋ ಶೇರ್ ಮಾಡಿದ ನಟಿರಂಜನಿ ರಾಘವನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಗರ್ ಭಾರದ್ವಾಜ್ ಎನ್ನುವವರ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದರು. ನನ್ನ ಹುಡುಗ, ಜೀವನ ಸಂಗಾತಿ ಎಂದು ಅವರು ಹೇಳಿಕೊಂಡಿದ್ದರು. ಈ ಫೋಟೋವನ್ನು ನೋಡಿದಾಗ ಕೆಲವರು ಖುಷಿಯಿಂದ ಶುಭಾಶಯಗಳನ್ನು ತಿಳಿಸಿದ್ದರೆ, ಇನ್ನೂ ಕೆಲವರು ಈ ವಿಷಯ ನಮಗೆ ಮೊದಲೇ ಗೊತ್ತಿತ್ತು. ಅಂತೂ ಈಗ ಈ ವಿಷಯವನ್ನು ರಿವೀಲ್ ಮಾಡಿದ್ದೀರಿ” ಎಂದು ಹೇಳಿಕೊಂಡಿದ್ದರು. ನೆಗೆಟಿವ್ ಕಾಮೆಂಟ್ ಮಾಡಿದವರಿಗೆ ರಂಜನಿ ರಾಘವನ್ ಅವರು ಸಿಹಿಯಾಗಿ ಉತ್ತರ ನೀಡಿದ್ದಾರೆ
ಅಂದಹಾಗೆ ಸಾಗರ್ ಭಾರದ್ವಾಜ್ ಹಾಗೂ ರಂಜನಿ ರಾಘವನ್ ಅವರು ಕಾಲೇಜು ದಿನಗಳಿದಲೂ ಸ್ನೇಹಿತರು. ಇವರಿಬ್ಬರು ಪ್ರೀತಿ ಮಾಡುತ್ತಿದ್ದು, ಈ ಪ್ರೀತಿಗೆ ಎರಡೂ ಕುಟುಂಬದವರು ಒಪ್ಪಿಗೆ ಸೂಚಿಸಿದ್ದಾರೆ. ರಂಜನಿ ರಾಘವನ್ ಅವರ ಹುಡುಗ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. 
ಸಾಗರ್ ಭಾರದ್ವಾಜ್ ಅವರು ಇಲ್ಲಿಯವರೆಗೆ 20000km ಸೈಕಲ್ ರೈಡ್ ಮಾಡಿದ್ದು, 2000km ರನ್ನಿಂಗ್, 100000kmಗಳಿಗೂ ಹೆಚ್ಚು ಬೈಕ್ ರೈಡ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.