ಮದುವೆ ಫೋಟೋ ಡಿಲೀಟ್ ಮಾಡಿದ ರಣವೀರ್ ಸಿಂಗ್; ಮೊದಲ ಮಗುವಿನ ಸಮಯದಲ್ಲಿ ಗಂಡನಿಂದ ಕಿರಿಕ್

 | 
Gu

ಬಾಲಿವುಡ್​ನ ಕ್ಯೂಟ್​ ಕಪಲ್​ ಎನಿಸಿಕೊಂಡಿರುವ  ರಣವೀರ್​ ಸಿಂಗ್​ ಮತ್ತು ದೀಪಿಕಾ ಪಡುಕೋಣೆ ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇದ್ದಾರೆ. ಈ ನಡುವೆ ಈ ದಂಪತಿ ನಡುವೆ ಕಿರಿಕ್ ಆಗಿರಬಹುದೇ ಎಂಬ ಅನುಮಾನ ಕಾದಿದೆ. ಅದಕ್ಕೆ ಕಾರಣ ಆಗಿರುವುದು ರಣವೀರ್​ ಸಿಂಗ್​ ಅವರ ನಡೆ. 

ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಇದ್ದ ಮದುವೆಯ ಫೋಟೋಗಳನ್ನು ರಣವೀರ್​ ಸಿಂಗ್​ ಅವರು ಡಿಲೀಟ್​ ಮಾಡಿದ್ದಾರೆ. ಇದರಿಂದ ಅಭಿಮಾನಿಗಳಿಗೆ ಬೇಸರ ಆಗಿದೆ. ದೀಪಿಕಾ ಪಡುಕೋಣೆ  ಅವರು ಈ ಬಗ್ಗೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಪರಸ್ಪರ ಪ್ರೀತಿಸಿ ಮದುವೆ ಆದವರು ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​. 2018ರ ನವೆಂಬರ್​ನಲ್ಲಿ ಇಟಲಿಯಲ್ಲಿ ಈ ಜೋಡಿಯ ಮದುವೆ ನಡೆದಿತ್ತು.ಅ  ಬಾಲಿವುಡ್​ನಲ್ಲಿ ಇಬ್ಬರೂ ಬಹುಬೇಡಿಕೆಯ ಕಲಾವಿದರಾಗಿ ಮಿಂಚುತ್ತಿದ್ದಾರೆ. ಈಗ ಅವರು ಮಗು ಪಡೆಯುವ ನಿರ್ಧಾರಕ್ಕೆ ಬಂದಿದ್ದಾರೆ. 

ಆದರೆ ರಣವೀರ್​ ಸಿಂಗ್​ ಅವರು ಮದುವೆಯ ಫೋಟೋಗಳನ್ನು ಡಿಲೀಟ್​ ಮಾಡಲು ಕಾರಣ ಏನು ಎಂಬುದು ತಿಳಿದುಬಂದಿಲ್ಲ.ರಣವೀರ್​ ಸಿಂಗ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಅವರ ಇನ್​ಸ್ಟಾಗ್ರಾಮ್​ ಖಾತೆಯ ಮೇಲೆ ಕಣ್ಣಾಡಿಸಿದ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. 

2023ರ ಜನವರಿಗಿಂತಲೂ ಹಿಂದಿನ ಫೋಟೋಗಳು ಅವರ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಕಾಣಿಸುತ್ತಿಲ್ಲ. ತಂದೆ ಆಗುತ್ತಿರುವ ಸಂದರ್ಭದಲ್ಲಿ ಅವರು ಪತ್ನಿಯ ಜೊತೆ ಜಗಳ ಮಾಡಿಕೊಂಡಿದ್ದಾರಾ ಎಂಬ ಅನುಮಾನ ಕಾಡುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.