30 ವರ್ಷದ ಹುಟ್ಟು ಹಬ್ಬವನ್ನು ವಿದೇಶದಲ್ಲಿ ಗೆಳೆಯನ ಜೊತೆ ಆಚರಿಸಿದ ರಶ್ಮಿಕಾ ಮಂದಣ್ಣ
Apr 5, 2025, 13:23 IST
|

ನಟಿ ರಶ್ಮಿಕ ಮುಟ್ಟಿದ್ದೆಲ್ಲಾ ಚಿನ್ನ. ಹೌದು ಬಾಲಿವುಡ್, ಟಾಲಿವುಡ್ ಎಂದು ಗೆಲ್ಲುವ ಕುದುರೆ ಎನಿಸಿಕೊಂಡ ರಶ್ಮಿಕಾ ಸದಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುತ್ತಿದ್ದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇದೀಗ ತಮ್ಮ ಹುಟ್ಟುಹಬ್ಬ ಆಚರಣೆಗೆ ಕೊಂಚ ರಿಲೀಫ್ ಮಾಡಿಕೊಂಡಿದ್ದಾರೆ. 29ನೇ ವರ್ಷದ ಹುಟ್ಟುಹಬ್ಬವನ್ನುಇನ್ನಷ್ಟು ಸ್ಪೆಷಲ್ ಆಗಿ ಸೆಲೆಬ್ರೇಟ್ ಮಾಡೋಕೆ ನಟಿ ವಿದೇಶಕ್ಕೆ ಹಾರಿದ್ದಾರೆ.
ಹೌದು. ತಮ್ಮ ಹುಟ್ಟುಹಬ್ಬ ಆಚರಣೆಗಾಗಿ ಗಲ್ಫ್ ರಾಷ್ಟ್ರವಾದ ಒಮನ್‌ಗೆ ಹಾರಿದ್ದಾರೆ. ರಶ್ಮಿಕಾ ಒಬ್ಬರೇ ಹೋಗಿಲ್ಲ, ಬದಲಾಗಿ ಗೆಳೆಯ ವಿಜಯ್ ದೇವರಕೊಂಡ ಸಹ ಒಮನ್‌ಗೆ ಹಾರಿದ್ದಾರೆ ಎಂದು ಮೂಲಗಳು ಹೇಳಿವೆ.ಜೊತೆಗೆ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅವ್ರ ಕಾಮನ್ ಫ್ರೆಂಡ್ಸ್ ಕೂಡ ಬರ್ತ್‌ಡೇ ಪಾರ್ಟಿಯಲ್ಲಿ ಭಾಗಿಯಾಗಲಿದ್ದಾರಂತೆ. ಈ ಹಿಂದೆಯೂ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ವಿದೇಶದಲ್ಲಿ ಒಟ್ಟಾಗಿ, ಗುಟ್ಟಾಗಿ ಪಾರ್ಟಿ ಮಾಡಿದ್ದರು.
ಇದೀಗ ರಶ್ಮಿಕಾ ಹುಟ್ಟುಹಬ್ಬವನ್ನ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡೋದಕ್ಕೆ ದೇವರಕೊಂಡ ಸಹ ವಿದೇಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದುಬಂದಿದೆ.ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಸುದ್ದಿಗಳು ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೈಪ್ ಕ್ರಿಯೇಟ್ ಮಾಡುತ್ತಲೇ ಇರುತ್ತದೆ. ಈ ಹಿಂದೆಯೂ ಇಬ್ಬರು ಪ್ರೀತಿಯಲ್ಲಿದ್ದು ಶೀಘ್ರವೇ ವಿವಾಹವಾಗಲಿದ್ದಾರೆ ಎಂಬ ವದಂತಿಗಳೂ ಹರಿದಾಡಿದ್ದವು.
ಈ ಬಗ್ಗೆ ಪ್ರಶ್ನೆ ರಶ್ಮಿಕಾರನ್ನ ಪ್ರಶ್ನೆ ಮಾಡಿದಾಗ ನಿಮಗೆ ಗೊತ್ತಿಲ್ಲದೇ ಇರುವುದು ಏನಿದೆ ಎಂದು ಹೇಳಿದ್ದರು.ರಶ್ಮಿಕಾ ಮಂದಣ್ಣ ನಟನೆಯ ಸಿಖಂದರ್ ಸಿನಿಮಾ ಇತ್ತೀಚೆಗಷ್ಟೇ ರಿಲೀಸ್ ಆಗಿದೆ. ಅಲ್ಲದೇ ತೆಲುಗಿನಲ್ಲಿ ಗರ್ಲ್‌ಫ್ರೆಂಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪುಷ್ಪಾ-2 ಬಳಿಕ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ನಟಿ ಇದೀಗ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲು ವಿದೇಶಕ್ಕೆ ಹಾರಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.