ಕಾಟೇರ ಸಿನಿಮಾ ನೋಡಿ ಕಣ್ಣೀರ ಮಳೆಸುರಿಸಿದ ರಶ್ಮಿಕಾ ಮಂದಣ್ಣ, ದರ್ಶನ್ ಮೆಚ್ಚುಗೆ

 | 
ಲ
ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಸದ್ಯ ನ್ಯಾಷನಲ್ ಕ್ರಶ್ ಆಗಿ ಮಿಂಚುತ್ತಿದ್ದಾರೆ. ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ, ಬಾಲಿವುಡ್, ಟಾಲಿವುಡ್, ಕಾಲಿವುಡ್ ನ ಬಹುಬೇಡಿಕೆಯ ನಟಿಯಾಗಿದ್ದಾರೆ.ಸಂಕ್ರಾಂತಿ ಹಬ್ಬದಂದು ಆರೆಂಜ್ ಕಲರ್ ಡ್ರೆಸ್​ನಲ್ಲಿ ನಟಿ ರಶ್ಮಿಕಾ ಮಂದಣ್ಣ ಮಿಂಚುತ್ತಿದ್ರು. ಇನ್ಸ್ಟಾದಲ್ಲಿ ಬ್ಯೂಟಿಫುಲ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಟ್ರೆಡಿಷನಲ್ ಲುಕ್​ನಲ್ಲಿ ರಶ್ಮಿಕಾ ಮಿಂಚುತ್ತಿದ್ದಾರೆ.
ಅಭಿಮಾನಿಗಳಿಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು ತಿಳಿಸಿದ್ದಾರೆ. ಪ್ಯಾನ್​ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ನಟಿಗೆ ಎಲ್ಲಾ ಭಾಷೆಗಳಲೂ ಫ್ಯಾನ್ಸ್ ಇದ್ದಾರೆ. ಹಾಗಾಗಿ ಎಲ್ಲಾ ಭಾಷೆಯ ಅಭಿಮಾನಿಗಳಿಗಾಗಿ ನಟಿ ರಶ್ಮಿಕಾ ಮಂದಣ್ಣ, ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ ಭಾಷೆಯಲ್ಲಿ ಸಂಕ್ರಾಂತಿ ಶುಭಾಶಯ ತಿಳಿಸಿದ್ದಾರೆ.
ಕನ್ನಡ ಸಿನಿಮಾ ಇಂಡಸ್ಟ್ರಿಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಕನ್ನಡವನ್ನು ಮರೆತೆ ಹೋಗಿದ್ದಾರೆ ಎಂದು ಕನ್ನಡಿಗರು ಕೋಪಗೊಂಡಿದ್ರು. ಇದೀಗ ರಶ್ಮಿಕಾ ಕನ್ನಡದಲ್ಲೂ ವಿಶ್ ಮಾಡಿದ್ದಾರೆ. ಅಲ್ಲದೆ ಕಾಟೇರ ಸಿನೆಮಾ ನೋಡಿ ಅದ್ಬುತವಾದ ಸಿನೆಮಾ ಎಂದು ಹಾಡಿ ಹೊಗಳಿದ್ದಾರೆ. ಅಲ್ಲದೇ ಚಿತ್ರದ ಕೊನೆಯ ಭಾಗ ಕಣ್ಣೀರು ತರಿಸಿತು ಅಂದಿದ್ದಾರೆ. ಕನ್ನಡದಲ್ಲಿ ರಶ್ಮಿಕಾ ವಿಶ್ ಮಾಡಿದ್ದನ್ನು ನೋಡಿದ ಫ್ಯಾನ್ಸ್ ಖುಷ್ ಆಗಿದ್ದಾರೆ. ಕೊಡಗಿನ ಕುವರಿ ಆಗಾಗ ಪೋಷಕರನ್ನು ನೋಡಲು ಕೊಡಗಿಗೆ ಬರುತ್ತಿರುತ್ತಾರೆ. 
ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ನಟಿ ಬ್ಯುಸಿ ಆಗಿದ್ದಾರೆ.ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ನಟಿಯಾಗಿರುವ ರಶ್ಮಿಕಾ ಮಂದಣ್ಣ, ಟಾಲಿವುಡ್ನಲ್ಲಿ ಹಲವು ಬ್ಲಾಕ್ ಬಸ್ಟರ್ ಗಳನ್ನು ನೀಡಿದ್ದಾರೆ. ಗುಡ್ ಬೈ ಸಿನಿಮಾ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟ ಚೆಲುವೆ ಅನಿಮಲ್ ಸಿನಿಮಾ ಮೂಲಕ ಬಿಗ್ ಸಕ್ಸಸ್ ಕಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.