ಸಲ್ಮಾನ್ ಖಾನ್ ಜೊತೆ ಡೇಟಿಂಗ್ ಹೊರಟ ರಶ್ಮಿಕಾ ಮಂದಣ್ಣ; ತಲೆಕೆಡಿಸಿ ಕೂತ ರಕ್ಷಿತ್ ಶೆಟ್ಟಿ
ಕನ್ನಡ ಸಿನಿಮಾ ಕಿರಿಕ್ ಪಾರ್ಟಿ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ನಟಿಯಾಗಿದ್ದಾರೆ. ತೆಲುಗುಮ ತಮಿಳು ಬಳಿಕ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿರುವ ಅವರು ಸಾಲು ಸಾಲು ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ. ರಣಬೀರ್ ಕಪೂರ್ ಜೊತೆಗಿನ ಅನಿಮಲ್ ಸಿನಿಮಾ ಸಕ್ಸಸ್ ಬಳಿಕ ಮತ್ತಷ್ಟು ಅವಕಾಶಗಳು ಬರುತ್ತಿವೆ.
ಬಾಲಿವುಡ್ ಭಾಯ್‌ಜಾನ್ ಎಂದು ಕರೆಸಿಕೊಳ್ಳುವ ನಟ ಸಲ್ಮಾನ್ ಖಾನ್ ಅವರು ಎಆರ್ ಮುರುಗದಾಸ್ ನಿರ್ದೇಶನದ ಮುಂದಿನ ಬಹುನಿರೀಕ್ಷಿತ 'ಸಿಕಂದರ್' ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಸಾಜಿದ್ ನಾಡಿಯಾಡ್ವಾಲಾ ನಿರ್ಮಾಣದ ಈ ಚಿತ್ರಕ್ಕೆ ನಟಿ ರಶ್ಮಿಕಾ ಮಂದಣ್ಣ ಕೂಡ ಸೇರಿಕೊಂಡಿದ್ದಾರೆ. ಈ ಚಿತ್ರವು ಮುಂದಿನ ಈದ್ ಹಬ್ಬಕ್ಕೆ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.
ಅನಿಮಲ್ ಚಿತ್ರದ ಯಶಸ್ಸಿನ ನಂತರ, ರಶ್ಮಿಕಾ ಮಂದಣ್ಣ ಹೊಸ ಹಿಂದಿ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಎಆರ್ ಮುರುಗದಾಸ್ ಅವರ ಆಕ್ಷನ್ ಚಿತ್ರ ಸಿಕಂದರ್‌ನಲ್ಲಿ ಅವರು ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಎದುರು ಜೋಡಿಯಾಗಲಿದ್ದಾರೆ. ಸದ್ಯ ಅಲ್ಲು ಅರ್ಜುನ್ ಅವರ ಪುಷ್ಪ: ದಿ ರೂಲ್ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ.
ಜನಪ್ರಿಯ ಕನ್ನಡ, ತಮಿಳು ಮತ್ತು ತೆಲುಗು ನಟಿ ರಶ್ಮಿಕಾ ಮಂದಣ್ಣ 2022 ರಲ್ಲಿ ಅಮಿತಾಬ್ ಬಚ್ಚನ್ ಅವರ ಗುಡ್‌ಬೈ ಸಿನಿಮಾ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ನಂತರ ಅವರು ಮಿಷನ್ ಮಜ್ನು ಮತ್ತು ಅನಿಮಲ್ ಸಿನಿಮಾದಲ್ಲಿ ನಟಿಸಿದರು. ಈಗ ವಿಕ್ಕಿ ಕೌಶಲ್ ಎದುರು ಚಾವದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ತೆಲುಗಿನಲ್ಲಿ ಅಲ್ಲು ಅರ್ಜುನ್ ಎದುರು ಪುಷ್ಪ: ದಿ ರೂಲ್ ಮತ್ತು ತಮಿಳಿನಲ್ಲಿ ಧನುಷ್ ಜೊತೆಗೆ ಕುಬೇರ ಚಿತ್ರದಲ್ಲಿ ಬ್ಯುಸಿಯಾಗುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.