ಟಾಲಿವುಡ್ ಸಿನಿಮಾದಿಂದ ರಶ್ಮಿಕಾ ಮಂದಣ್ಣ; boycott ಕೂಗು ಕೇಳಿ ಬರುತ್ತಿದೆ

 | 
ಕಕ

ಕಿರಿಕ್ ಬ್ಯೂಟಿ ಎಂದೇ ಫೇಮಸ್ ಆಗಿರುವ ರಶ್ಮಿಕಾ ಮಂದಣ್ಣ ಯಾರಿಗೆ ತಾನೇ ಗೊತ್ತಿಲ್ಲಾ ಹೇಳಿ. ಈ ಹಿಂದೆಯೇ ನಟಿ ರಶ್ಮಿಕಾ ಮಂದಣ್ಣ ದಕ್ಷಿಣ ಚಿತ್ರರಂಗದವರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದಾಗಲೇ  ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ಹೆಸರುವಾಸಿಯಾಗಿರೋ ಇವರು  ನಿಧಾನವಾಗಿ ಬಾಲಿವುಡ್‌ಗೆ ಕಾಲಿಡುತ್ತಿದ್ದಾರೆ. 

ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಅಲ್ಲಿ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದಾಗಲೇ ನ್ಯಾಷನಲ್​ ಕ್ರಶ್​ ಎಂಬ ಪಟ್ಟ ಕೂಡ ಸಿಕ್ಕಿದೆ. ಅನಿಮಲ್​ ಚಿತ್ರದ ಬಳಿಕ ಇವರಿಗೆ ಡಿಮ್ಯಾಂಡ್​ ಕೂಡ ಜಾಸ್ತಿಯಾಗಿದೆ. ಆದರೆ ಈ ಹಿಂದೆ ಕನ್ನಡ ಚಿತ್ರೋದ್ಯಮದ ಜೊತೆ ಕಿರಿಕ್​ ಮಾಡಿಕೊಂಡಿದ್ದ ರಶ್ಮಿಕಾಗೆ ಇದಾಗಲೇ ಕನ್ನಡ ಚಲನಚಿತ್ರೋದ್ಯಮವು ನಿಷೇಧಿಸಿದೆ. ಈಗ  ಟಾಲಿವುಡ್ ಕೂಡ ಇದೇ ರೀತಿ ಮಾಡಬೇಕು. 

ಈಕೆ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಬೇಕು ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ. ದಕ್ಷಿಣವೇ ಈಕೆಯ ಬೇರು. ಆದರೆ  ತನ್ನ ಸಕ್ಸಸ್​ ಅಡಿಪಾಯವನ್ನು ಈಕೆ ಗೌರವಿಸುತ್ತಿಲ್ಲ ಎಂದು ಸೋಷಿಯಲ್​ ಮೀಡಿಯಾದಲ್ಲಿ ಕೂಗು ಜೋರಾಗುತ್ತಿದೆ. ಅಷ್ಟಕ್ಕೂ ರಶ್ಮಿಕಾ ಸೌತ್​ನವರ ಕೆಂಗಣ್ಣಿಗೆ ಗುರಿಯಾಗುತ್ತಿರುವುದಕ್ಕೆ ಕಾರಣವೂ ಇದೆ. ಬಾಲಿವುಡ್​ಗೆ ಕಾಲಿಡುತ್ತಿದ್ದಂತೆಯೇ ಮತ್ತೆ  ದಕ್ಷಿಣ ಭಾರತದ ಚಲನಚಿತ್ರಗಳ ಬಗ್ಗೆ ಕಿರಿಕ್​ ಮಾಡಿಕೊಂಡಿದ್ದಾರೆ ನಟಿ.

ಇದು ನೆಟ್ಟಿಗರನ್ನು ಹಾಗೂ ಸೌತ್​ ಇಂಡಸ್ಟ್ರಿಯನ್ನು ಕೆರಳಿಸಿದೆ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ, ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಮಿಷನ್ ಮಜ್ನು ಸಿನಿಮಾದ ಕುರಿತು ಮಾತನಾಡುತ್ತಿದ್ದ ವೇಳೆ ಅವರು ಆಡಿರುವ ಮಾತುಗಳಿಗೆ ಜನರು ಕಿಡಿಕಿಡಿಯಾಗುತ್ತಿದ್ದಾರೆ. ಅಷ್ಟಕ್ಕೂ ನಟಿ ಹೇಳಿದ್ದೇನೆಂದರೆ,  ಬಾಲಿವುಡ್‌ನಲ್ಲಿ ರೊಮ್ಯಾಂಟಿಕ್ ಹಾಡುಗಳಿಗೆ ಅವಕಾಶವಿದೆ. ಇದೊಂದು ಒಳ್ಳೆಯ ಸಂಪ್ರದಾಯ ಕೂಡ. 

ಆದರೆ ದಕ್ಷಿಣದಲ್ಲಿ ಹಾಗಿಲ್ಲ. ಅಲ್ಲಿ ಏನಿದ್ದರೂ ಕೇವಲ ಮಸಾಲೆ ಹಾಡುಗಳು ಮತ್ತು ಐಟಂ ಸಾಂಗ್​ಗಳು. ಇವೇ ಹೆಚ್ಚಾಗಿವೆ ಎಂದಿದ್ದಾರೆ.  ಹೀಗೆ ಹೋದಲೆಲ್ಲಾ ಬಕೆಟ್ ಹಿಡಿದು ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಅಂದ್ರೆ ತಪ್ಪಿಲ್ಲ . (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.