ಹಿಂದೂ ಸಂಪ್ರದಾಯದಂತೆ ಮಡಿಕೇರಿಯಲ್ಲಿ ನಿಶ್ಚಿತಾರ್ಥ ಮಾಡಿಸಿಕೊಂಡ ರಶ್ಮಿಕಾ, ವಿಜಯ್ ದೇವರಕೊಂಡ ಬಲೆಗೆ ಬಿತ್ತು ಎಂದ ನೆಟ್

 | 
Rashmika

ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ರಶ್ಮಿಕಾ ಮಂದಣ್ಣ, ಇಂದು ದಕ್ಷಿಣ ಭಾರತದ ಅತಿ ಜನಪ್ರಿಯ ನಟಿಯರಲ್ಲಿ ಒಬ್ಬರು. ಇತ್ತೀಚೆಗೆ ನಟಿ ಮತ್ತು ಟಾಲಿವುಡ್ ಹೀರೋ ವಿಜಯ್ ದೇವರಕೊಂಡ ರಹಸ್ಯ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೆಲ ವರದಿಗಳ ಪ್ರಕಾರ, ಹೈದರಾಬಾದ್‌ನಲ್ಲಿರುವ ವಿಜಯ್ ಅವರ ನಿವಾಸದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಈ ನಿಶ್ಚಿತಾರ್ಥ ನೆರವೇರಿದೆಯಂತೆ.ಇದಕ್ಕೂ ಮುನ್ನ ಇಬ್ಬರೂ ಗೀತಾ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಅದಾದ ಬಳಿಕ ಅವರ ನಡುವಿನ ಸ್ನೇಹ ಪ್ರೇಮವಾಗಿ ಮಾರ್ಪಟ್ಟಿತೇ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡಿತ್ತು.

ಈಗ ಈ ನಿಶ್ಚಿತಾರ್ಥ ಸುದ್ದಿ ಅದಕ್ಕೆ ಮತ್ತಷ್ಟು ಬಲ ನೀಡಿದಂತಾಗಿದೆ. ರಶ್ಮಿಕಾ ಇತ್ತೀಚೆಗೆ “ನೀವೆಲ್ಲ ಇದಕ್ಕಾಗಿ ಕಾಯುತ್ತಿದ್ದೀರಿ” ಎಂದು ಹೇಳುತ್ತಾ, ಹೊಸ ಘೋಷಣೆಯೊಂದನ್ನು ಮಾಡಿದ್ದಾರೆ.ತಮ್ಮ ಹೊಸ ಸಿನಿಮಾ ದಿ ಗರ್ಲ್‌ಫ್ರೆಂಡ್ ನವೆಂಬರ್ 7ರಂದು ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು. “ಆ ದಿನ ಎಲ್ಲರೂ ಥಿಯೇಟರ್‌ಗೆ ಬನ್ನಿ, ಮಾತನಾಡೋಣ,” ಎಂದು ರಶ್ಮಿಕಾ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.

ಇವರ ಮದುವೆಯನ್ನು ಫೆಬ್ರವರಿ 2026 ವೇಳೆಗೆ ಯೋಜಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಇಬ್ಬರೂ ಇವರೆಗೂ ತಮ್ಮ ಮದುವೆಯ ದಿನಾಂಕವನ್ನು ಸಾಮಾಜಿಕ ಮಾಧ್ಯಮ ಅಥವಾ ಅಧಿಕೃತ ಘೋಷಣೆಯ ಮಾಡಿಲ್ಲ.ರಶ್ಮಿಕಾ ಪೂರ್ವದಲ್ಲಿ ಕನ್ನಡ ನಟ ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥವಾಗಿದ್ದಿದ್ದರು, ಆದರೆ ಆ ನಿಶ್ಚಿತಾರ್ಥವನ್ನು ನಂತರ ರದ್ದುಗೊಳಿಸಿದ್ದರು. ಇದೀಗ ಎನ್ ಮಾಡ್ತಾರೆ ಕಾದು ನೋಡಬೇಕಿದೆ.