RGV ಜೊತೆ ನೈಟ್ ಪಾಟಿ೯ಯಲ್ಲಿ ರಶ್ಮಿಕಾ ಹಾಟ್ ಅವತಾರ? ಗೊಂದಲಕ್ಕೀಡಾದ ನೆಟ್ಟಿಗರು

 | 
ುಿಾ

ರಾಮ್ ಗೋಪಾಲ್ ವರ್ಮಾ  ತಮ್ಮ ಸಿನಿಮಾಗಳ ಜೊತೆಗೆ ತಮ್ಮ ಬೋಲ್ಡ್ ಹೇಳಿಕೆಗಳಿಂದಲೂ ಜನಪ್ರಿಯರು. ಅದರಲ್ಲಿಯೂ ಮಹಿಳೆಯರ ಬಗ್ಗೆ ತುಸು ಹೆಚ್ಚೆ ಬಿಡುಬೀಸಾಗಿ ವರ್ಮಾ ಮಾತನಾಡಿದ್ದಿದೆ. ಯುವತಿಯೊಟ್ಟಿಗೆ ಪಾರ್ಟಿ ಮಾಡುವ ಚಿತ್ರಗಳನ್ನು ಸಹ ವರ್ಮಾ ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ವರ್ಮಾ, ಪಾರ್ಟಿಯಲ್ಲಿ ಯುವತಿಯರೊಟ್ಟಿಗೆ ಡ್ಯಾನ್ಸ್ ಮಾಡುವ ವಿಡಿಯೋಗಳು ವೈರಲ್ ಆಗುವುದುಂಟು. 

ಇದೀಗ ವರ್ಮಾ ಹೊಸ ಚಿತ್ರವೊಂದನ್ನು ಹಂಚಿಕೊಂಡಿದ್ದು, ಚಿತ್ರ ನೋಡಿದ ಹಲವರಿಗೆ ಇದೇನಿದು ವರ್ಮಾ ಜೊತೆ ರಶ್ಮಿಕಾ ಮಂದಣ್ಣ ಎಂದು ಶಾಕ್ ಆಗಿದೆ.ರಾಮ್ ಗೋಪಾಲ್ ವರ್ಮಾ ನಿರ್ದೇಶನ ಮಾಡಿರುವ ‘ವ್ಯೂಹಂ’ ಸಿನಿಮಾದ ಬಿಡುಗಡೆಗೆ ತಡೆ ನೀಡಲಾಗಿತ್ತು. ಈ ಸಿನಿಮಾ ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್ ಹಾಗೂ ಇತರೆ ನಾಯಕರ ವಿರುದ್ಧವಾದ ಸಿನಿಮಾ ಆಗಿದ್ದ ಕಾರಣ ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್ ಸಿನಿಮಾದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿ ಸಿನಿಮಾ ಬಿಡುಗಡೆ ತಡೆದಿದ್ದರು. ಆದರೆ ಇತ್ತೀಚೆಗೆ ನಡೆದ ವಿಚಾರಣೆಯಲ್ಲಿ ವ್ಯೂಹಂ ಸಿನಿಮಾ ಮೇಲಿದ್ದ ತಡೆಯನ್ನು ತೆರವುಗೊಳಿಸಲಾಗಿದೆ.

ಸುದ್ದಿ ಹೊರಬೀಳುತ್ತಿದ್ದಂತೆ ಪಾರ್ಟಿ ಮಾಡಿರುವ ರಾಮ್ ಗೋಪಾಲ್ ವರ್ಮಾ, ಯುವತಿಯೊಟ್ಟಿಗಿನ ಚಿತ್ರವನ್ನು ಹಂಚಿಕೊಂಡು, ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್, ನಾರಾ ಲೋಕೇಶ್ ನೋಡಿ ನಮ್ಮ ವ್ಯೂಹಂ ಸಿನಿಮಾ ಬಿಡುಗಡೆ ಆಗುತ್ತಿರುವುದಕ್ಕೆ ನಾನು ಪಾರ್ಟಿ ಮಾಡುತ್ತಿದ್ದೇನೆ ಎಂದು ಕ್ಯಾಪ್ಷನ್ ಬರೆದಿದ್ದರು. ವರ್ಮಾ ಹಂಚಿಕೊಂಡಿದ್ದ ಚಿತ್ರದಲ್ಲಿ ವರ್ಮಾ ಜೊತೆಗಿರುವ ಯುವತಿ ಥೇಟ್ ರಶ್ಮಿಕಾ ಮಂದಣ್ಣ ರೀತಿ ಕಾಣುತ್ತಿದ್ದರು. ಚಿತ್ರ ನೋಡಿದ ಹಲವರು ಇದೇನಿದು ವರ್ಮಾ ಜೊತೆ ರಶ್ಮಿಕಾ ಮಂದಣ್ಣ ಇದ್ದಾರೆಂದು ಆಶ್ಚರ್ಯದಿಂದ ಟ್ವೀಟ್ ಮಾಡಿದ್ದರು.

ಅಸಲಿಗೆ ವರ್ಮಾ ಜೊತೆ ಚಿತ್ರದಲ್ಲಿರುವುದು ರಶ್ಮಿಕಾ ಮಂದಣ್ಣ ಅಲ್ಲ ಬದಲಿಗೆ ಮಾಡೆಲ್, ನಟಿಯಾಗಿರುವ ಮಾಸೂಮ್ ಶಂಕರ್. ವರ್ಮಾ ಜೊತೆಗೆ ಹಲವು ಚಿತ್ರಗಳು ಹಾಗೂ ವಿಡಿಯೋಗಳನ್ನು ಮಾಸೂಮ್ ಹಂಚಿಕೊಂಡಿದ್ದಾರೆ. ಮಾಸೂಮ್ ಶಂಕರ್, ಡಿಡಿ ರಿಟರ್ನ್ಸ್, ಪಯಣಿಗಲ್ ಗಮನಿಕ್ಕುವುಂ, 90 ಎಂಐ, ನಾಗೇಶ್ ತಿರೈರಂಗಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್​ಸ್ಟಾಗ್ರಾಂನಲ್ಲಿಯೂ ಸಕ್ರಿಯವಾಗಿರುವ ಮಾಸೂಮ್ ಶಂಕರ್, ತಮ್ಮ ಕೆಲವು ಹಾಟ್ ಬಿಕಿನಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.