ಕನ್ನಡಿಗರಿಗೆ ಬಿಸಿಬಿಸಿ ಬೌಬೌ ತಿನ್ನಿಸಿ ಬಿಟ್ಟ ರಜಾಕ್;

 | 
Us

ಬೆಂಗಳೂರಿನಲ್ಲಿ ನಾಯಿ ಮಾಂಸ ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ಇಳಿಸಿರುವ ಲೋಡ್​ಗಟ್ಟಲೇ ಬಾಕ್ಸ್​ನಲ್ಲಿ ಕುರಿ ಮಾಂಸದ ಜೊತೆ ನಾಯಿ ಮಾಂಸ ಮಿಕ್ಸ್ ಆಗಿದ್ದು, ಇದೇ ಮಾಂಸವನ್ನ ನಗರದ ಹೋಟೆಲ್​ಗಳಿಗೆ ಪೂರೈಕೆ ಆಗ್ತಿದೆ ಅನ್ನೋ ಆರೋಪ ಕೇಳಿ ಬಂದಿತ್ತು.

ನಿನ್ನೆ ಜೈಪುರದಿಂದ ಬಾಕ್ಸ್​ಗಳನ್ನ ತಂದು ಇಳಿಸ್ತಿದ್ದಂತೆ ಪುನೀತ್ ಕೆರೆಹಳ್ಳಿ ತಂಡ ದಾಳಿ ಮಾಡಿತ್ತು. ಕುರಿ ಮಾಂಸ 700 ರಿಂದ 800 ರೂ. ಮಾರಾಟ ಆಗುತ್ತಿದೆ. ಆದರೆ ರಾಜಸ್ಥಾನದ ಮಾಂಸ ಕೇವಲ 500 ರೂಪಾಯಿಗೆ ಒಂದು ಕೆಜಿ ಮಾರಾಟ ಆಗ್ತಿದ್ದು ಇದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಇನ್ನು ಖಾಸಗೀ ಚಾನಲ್ ಒಂದರಲ್ಲಿ ಕಾಣಿಸಿಕೊಂಡ ಅಬ್ದುಲ್  ರಜಾಕ್ ಬಳಿ ಸರಿಯಾದ ಕಾಗದ ಪತ್ರಗಳು ಹಾಗೂ ದಾಖಲೆಗಳು ಕೂಡ ಇಲ್ಲ. ಇನ್ನು ಈ ಕುರಿತಾಗಿ ಮಾತನಾಡಿರುವ ಸದ್ಯ 12 ಜನರಿಗೆ ಮಾಂಸ ಮಾರಾಟದ ಲೈಸೆನ್ಸ್ ಕೊಟ್ಟಿದ್ದೇವೆ. ಅವರನ್ನ ಭೇಟಿ ನೀಡಿ ಮಾಹಿತಿ ನೀಡುವುದಕ್ಕೆ ಹೇಳಿದ್ದೇವೆ. ಒಂದು ವೇಳೆ ಇಂದು ಆ 12 ಜನ ಹಾಜರಾಗದಿದ್ದರೆ ನೋಟಿಸ್ ಕೊಡುತ್ತೇವೆ. ವಿಚಾರಣೆಗೆ ಬಾರದಿದ್ದರೆ 12 ಜನರ ಲೈಸೆನ್ಸ್ ರದ್ದು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಅಬ್ದುಲ್​ ರಜಾಕ್ ಮಾತನಾಡಿ, ಥ್ರೆಟ್ ಸಂಬಂಧ ಕಾಟನ್​​​ಪೇಟೆ ಪೊಲೀಸರಿಗೆ ದೂರು ನೀಡಿದ್ದೆ, ಕಾಟನ್​ಪೇಟೆ ಠಾಣೆಯಲ್ಲಿ NCR ದಾಖಲಾಗಿತ್ತು. ಹೀಗಾಗಿ ನನ್ನ ವಿರುದ್ಧ ಪಿತೂರಿ ಮಾಡಲು ಪುನೀತ್​ ಕೆರೆಹಳ್ಳಿ ಪ್ರಯತ್ನ, ಸುಖಾಸುಮ್ಮನೆ ಗಲಾಟೆ ಮಾಡಿ ಜೈಲು ಸೇರಿದ್ದಾರೆ. ನಾನು 12 ವರ್ಷದಿಂದ ಮಾಂಸದ ವ್ಯವಹಾರ ಮಾಡುತ್ತಿದ್ದೇನೆ, ರಾಜಸ್ಥಾನದ ಕುರಿಗಳಿಗೆ ಬಾಲ ದೊಡ್ಡದಾಗಿ ಇರುತ್ತೆ. 

ಎಲ್ಲಾ ರೀತಿಯ ದಾಖಲೆ ಇಟ್ಟುಕೊಂಡೇ ವ್ಯವಹಾರ ಮಾಡ್ತಿದ್ದೇನೆ ಎಂದಿದ್ದಾರೆ. FSSAIನವರು ನಾಯಿ ಮಾಂಸ ಅಲ್ಲ, ಕುರಿ ಮಾಂಸ ಅಂತಾ ಹೇಳಿದ್ದಾರೆ, ಜನರಲ್ಲಿ ಆತಂಕ ಸೃಷ್ಟಿಸಲು ಪುನೀತ್​ ಕೆರೆಹಳ್ಳಿ ಪ್ರಯತ್ನ ಮಾಡಿದ್ರು. ಜನರು ಇದ್ಕೆಲ್ಲಾ ತಲೆಕೆಡಿಸಿಕೊಳ್ಳಬೇಡಿ ಎಂದು ಅಬ್ದುಲ್​​​​ ರಜಾಕ್​​ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.