CSK ಅಭಿಮಾನಿಗಳಿಗೆ ಜಾಡಿಸಿದ RCB ಹೆಣ್ಣುಮಕ್ಕಳು;

RCB ತಂಡಕ್ಕೆ ಅದೇನೋ ಅಭಿಮಾನಿಗಳು. ಗೆಲ್ಲಲಿ ಸೋಲಲಿ ಅಭಿಮಾನಿಗಳ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಹೌದು ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2024ರ ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 27 ರನ್‌ಗಳಿಂದ ಸೋಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟಾಪ್ 4 ಸ್ಥಾನ ಪಡೆದು ಪ್ಲೇಆಫ್‌ಗೆ ಅರ್ಹತೆ ಪಡೆಯಿತು.
ಕೆಲವು ದಿನಗಳ ಹಿಂದಿನಿಂದಲೇ ಸಾಕಷ್ಟು ಕುತೂಹಲ ಕೆರಳಿಸಿದ್ದ ಪಂದ್ಯವು, ವರುಣನ ಆತಂಕವಿಲ್ಲದೆ ಫಲಿತಾಂಶ ಕಂಡಿದೆ. ಆರ್‌ಸಿಬಿಯ ಗೆಲುವಿನ ಬೆನ್ನಲ್ಲೇ ರಾಜಧಾನಿಯ ಎಲ್ಲೆಡೆ ಸಂಭ್ರಮ ಮುಗಿಲು ಮುಟ್ಟಿದೆ. ರಾತ್ರಿಯಿಡೀ ನಿದ್ದೆಗೆಟ್ಟ ಅಭಿಮಾನಿಗಳು ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ. ಮಧ್ಯರಾತ್ರಿ 1.30ರ ವೇಳೆಗೆ ಆರ್‌ಸಿಬಿ ತಂಡವು ಸ್ಟೇಡಿಯಂನಿಂದ ಹೊರಹೋಗುವಾಗಲೂ, ಬೆಂಗಳೂರು ಬೀದಿಗಳಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಸೇರಿದ್ದರು.
ಶನಿವಾರ ಪಂದ್ಯದ ಆರಂಭಕ್ಕೂ ಮುನ್ನವೇ ಬೆಂಗಳೂರಿನ ರಸ್ತೆಗಳಲ್ಲಿ ಉಭಯ ತಂಡಗಳ ಅಭಿಮಾನಿಗಳು ಜಮಾಯಿಸಿದ್ದರು. ಆದರೆ, ಪಂದ್ಯ ಮುಗಿದ ಬಳಿಕ ಆರ್‌ಸಿಬಿ ಫ್ಯಾನ್ಸ್ ಅಬ್ಬರವೇ ಕಂಡುಬಂದಿತು. ಪಂದ್ಯ ಮುಗಿದ ಬಳಿಕ ಆರ್‌ಸಿಬಿ ತಂಡವು ಸ್ಟೇಡಿಯಂನಿಂದ ಹೊರಹೋಗುವಾಗ ತಡವಾಗಿತ್ತು. 1.30ರ ಸುಮಾರಿಗೆ ತಂಡದ ಆಟಗಾರರು ಬಸ್‌ನಲ್ಲಿ ಹೋಟೆಲ್‌ನತ್ತ ತೆರಳಿದರು. ಈ ವೇಳೆಯೂ ನಗರದ ಬೀದಿಗಳಲ್ಲಿ ನೆಚ್ಚಿನ ಆರ್‌ಸಿಬಿಗೆ ಅಭಿಮಾನಿಗಳ ಜೈಕಾರ ಮೊಳಗಿತು. ನಗರದ ರಾಜಭವನ ರಸ್ತೆ, ಕ್ವೀನ್ಸ್ ರಸ್ತೆ, ಎಂಜಿ ರೋಡ್, ಕಬ್ಬನ್ ಪಾರ್ಕ್ ಆಸುಪಾಸಿನಲ್ಲಿ ಟ್ವೆಲ್ತ್ ಮ್ಯಾನ್ ಆರ್ಮಿ ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು.
ಆಟಗಾರರ ಬಸ್ ಕಂಡ ವಿಶ್ವದ ಅತ್ಯುತ್ತಮ ಅಭಿಮಾನಿಗಳು, ಇನ್ನಷ್ಟು ಜೋರಾಗಿ ಆರ್‌ಸಿಬಿ, ಆರ್‌ಸಿಬಿ… ವಿರಾಟ್ ಕೊಹ್ಲಿ ಎಂದು ಘೋಷಣೆ ಕೂಗಿದರು. ಮಧ್ಯಾರಾತ್ರಿಯಾದರೂ ಅಭಿಮಾನಿಗಳ ಬೆಂಬಲ ಕಂಡು ಆರ್‌ಸಿಬಿ ಫ್ರಾಂಚೈಸ್ ಖುಷಿಯಾಗಿದೆ. ಅಭಿಮಾನಿಗಳ ಸಂಭ್ರಮಾಚರಣೆಯ ವಿಡಿಯೋವನ್ನು ಆರ್‌ಸಿಬಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.