Cotton Candy ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ ರೀಲ್ಸ್ ರಾಣಿ Reshma aunty

 | 
Hji
ಸೋಷಿಯಲ್ ಮೀಡಿಯಾದಲ್ಲಿ ಹಲೋ ಫ್ರೆಂಡ್ಸ್ ಎನ್ನುತ್ತಾ ಸದಾ ರೀಲ್ಸ್ ಮೂಲಕ ಹಾವಳಿ ಕೊಡುವ ರೇಷ್ಮಾ ಇದೀಗ ಕಾಟನ್‌ ಕ್ಯಾಂಡಿ ಹಾಡಿಗೆ ಸಖತ್‌ ಆಗಿ ರೀಲ್ಸ್‌ ಮಾಡಿದ್ದಾರೆ. ಈ ರೀಲ್ಸ್‌ ಭರ್ಜರಿ ವೈರಲ್‌ ಆಗುತ್ತಿದೆ. ತಮ್ಮ ರೀಲ್ಸ್‌ ಮೂಲಕವೇ ಫೇಮಸ್‌ ಆದ ರೇಷ್ಮಾ ಅವರು ಗಿಚ್ಚಿ ಗಿಲಿಗಿಲಿ-3 ಗೂ ಎಂಟ್ರಿ ಕೊಟ್ಟಿದ್ದರು. ಅಲ್ಲಿಯೂ ಹಾಸ್ಯದ ಮೂಲಕ ನೋಡುರನ್ನು ರಂಜಿಸಿದ್ದರು.
ಇತ್ತೀಚಗೆ ರೇಷ್ಮಾ ಅವರು ಕ್ರಿಯೇಟಿವ್‌ ಆಗಿರುವ ವಿಡಿಯೋಗಳನ್ನು ಶೇರ್‌ ಮಾಡುತ್ತಿದ್ದಾರೆ, ಇದೀಗ ಕ್ರಿಯೇಟರ್ ನವೀನ್ ಕುಮಾರ್‌ ಜೊತೆ ಕನ್ನಡದ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದಾರೆ. ಈಗ ನವೀನ್ ಕುಮಾರ್ ಎಂಟ್ರಿ ಕೊಟ್ಟಿದ್ದಕ್ಕೆ ರೀಲ್ಸ್‌ ಕೂಡ ಮೆಚ್ಚಿಕೊಳ್ಳುತ್ತಿದ್ದಾರೆ ನೆಟ್ಟಿಗರು.ನಟ-ಗಾಯಕ ಹಾಗು ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಮ್ಯೂಸಿಕ್ ವಿಡಿಯೋ ‘ಕಾಟನ್ ಕ್ಯಾಂಡಿ’ ರಿಲಿಸ್ ಆಗಿದ್ದು ಸದ್ಯ ಟ್ರೆಂಡಿಂಗ್ ಕ್ರಿಯೇಟ್ ಮಾಡಿದೆ.
 ‘ಕಾಟನ್ ಕ್ಯಾಂಡಿ’ ಹೆಸರಿನ ಮ್ಯೂಸಿಕ್ ವಿಡಿಯೋದಲ್ಲಿ ನಟ, ಗಾಯಕ ಚಂದನ್ ಶೆಟ್ಟಿ ಜೋಡಿಯಾಗಿ ಸುಷ್ಮಿತಾ ಗೋಪಿನಾಥ್ ನಟಿಸಿದ್ದಾರೆ.ಈ ವಿಡಿಯೋವನ್ನು ಹೆಚ್ಚು ಅದ್ದೂರಿಯಾಗಿ ಶೂಟ್ ಮಾಡಲಾಗಿದೆ, ಈ ಮ್ಯೂಸಿಕ್ ಸಾಂಗ್‌ಗೆ ಹೆಚ್ಚಿನ ತಯಾರಿ ಮಾಡಿಕೊಂಡಿದ್ದರು ಚಂದನ್ ಶೆಟ್ಟಿ. ಈ ಮ್ಯೂಸಿಕ್ ವಿಡಿಯೋವನ್ನು ಸ್ವತಃ ಚಂದನ್ ಶೆಟ್ಟಿಯವರೇ ನಿರ್ದೇಶನ ಕೂಡ ಮಾಡಿದ್ದಾರೆ.
ಈ ಹಾಡಿಗೆ ಈಗ ರೀಲ್ಸ್‌ ರೇಷ್ಮಾ ಸಖತ್‌ ಆಗಿ ಕುಣಿದಿದ್ದಾರೆ. ಮಾತ್ರವಲ್ಲ ವೆಸ್ಟರ್ನ್‌ ಲುಕ್‌ನಲ್ಲಿ ಮಿಂಚಿದ್ದಾರೆ, ರೇಷ್ಮಾ ಸ್ಪೆಪ್ಸ್‌ಗೆ ಸೂಪರ್ ಅಂತಿದ್ದಾರೆ ಫ್ಯಾನ್ಸ್‌. ನವೀಕ್ ಕುಮಾರ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿದ್ದಾರೆ.ಒಮ್ಮೆ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋಗೆ ಭೇಟಿ ನೀಡಿದಾಗ ರೇಷ್ಮಾ ಅವರ ನಂಬರ್ ಪಡೆಯುತ್ತಾರೆ. ಆಗಾಗ ರೇಶ್ಮಾ ಜೊತೆ ಮಾತನಾಡುತ್ತಿದ್ದಂತೆ. 
ಹುಷಾರಿಲ್ಲದೆ ರೇಷ್ಮಾ ಆಸ್ಪತ್ರೆಗೆ ಸೇರಿರುವುದನ್ನು ನೋಡಿ ತಮ್ಮನ ಸ್ಥಾನದಲ್ಲಿ ನಿಂತು ಭೇಟಿ ನೀಡಿದ್ದರಂತೆ. ಅಲ್ಲಿಂದ ಇಬ್ಬರೂ ರೀಲ್ಸ್‌ ಮಾಡುತ್ತಿದ್ದಾರೆ. ಅಂದಹಾಗೆ ರೇಷ್ಮಾ ಪತಿ ಅವರು ಆಟೋ ಓಡಿಸ್ತಾರಂತೆ. ರೇಷ್ಮಾ ಪತಿ ಕೂಡ ಈ ಶೋನಲ್ಲಿ ಕಾಣಿಸಿಕೊಂಡಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.