ಹೆಂಡತಿಯ ಆಸೆಯಂತೆ 1.5ಕೋಟಿ ಬೆಲೆಯ ಐಶಾರಾಮಿ ಕಾರು ಖರೀದಿ ಮಾಡಿದ ರಿಷಭ್ ಶೆಟ್ಟಿ, ಕನ್ನಡ ನಟರನ್ನು ಹಿಂದಿಕ್ಕಿದ ಕಾಂತಾರ ಶಿವ

 | 
Ns
ಸ್ಯಾಂಡಲ್‌ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ಕಾಂತಾರ 1 ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರೋ ರಿಷಬ್ ಶೆಟ್ಟಿ ಅವರು ಹೊಚ್ಚ ಹೊಸ ಕಾರು ಖರೀದಿಸಿದ್ದಾರೆ.ಕಾಂತಾರ' ಸಿನಿಮಾ ಸಕ್ಸಸ್‌ಬೆನ್ನಲ್ಲೆ 'ಕಾಂತಾರ' ಚಾಪ್ಟರ್ 1 ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ರಿಷಬ್ ಶೆಟ್ಟಿ ಮತ್ತವರ ಪತ್ನಿ ಇಬ್ಬರು ಮಕ್ಕಳು ಸೇರಿ ಕುಟುಂಬ ಸಮೇತ ಹೊಸ ಅತಿಥಿಯನ್ನು ಸ್ವಾಗತಿಸಿದ್ದಾರೆ. 
ಹೌದು, ರಿಷಬ್ ಅವರು ಹೊಸ ಐಶಾರಾಮಿ ಕಾರು ಖರೀದಿಸಿದ್ದಾರೆ.ಸುಮಾರು ಒಂದೂವರೆಗೆ ಕೋಟಿ ರೂಪಾಯಿ ಬೆಲೆ ಬಾಳುವ ಟೊಯೋಟಾ ಐಶಾರಾಮಿ ಕಾರನ್ನು ರಿಷಬ್ ಶೆಟ್ಟಿ ಅವರು ಖರೀದಿಸಿದ್ದಾರೆ. ಹೊಚ್ಚ ಹೊಸ ಕಾರಿನ ಖರೀದಿ ಜೊತೆಗೆ ಅವರ ಮನೆಯಲ್ಲಿ ಸಂತಷ ಇನ್ನೂ ಹೆಚ್ಚಾಗಿದೆ. ಕಪ್ಪು ಬಣ್ಣದ ಟೊಯೋಟಾ ವೆಲ್ಫೈರ್ ಕಾರು ಇದಾಗಿದ್ದು, ಇದರ ಆನ್‌ರೋಡ್ ಬೆಲೆ ಬರೋಬ್ಬರಿ 1.40 ಕೋಟಿ ರೂಪಾಯಿ ಎನ್ನಲಾಗುತ್ತಿದೆ.
ಕಾರಿಗೆ ಪೂಜೆ ನೆರವೇರಿಸಿ ಕುಟುಂಬ ಸಮೇತರಾಗಿ ಸುತ್ತಾಡಿದ್ದಾರೆ. ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಫ್ಯಾನ್ಸ್ ರಿಷಬ್‌ಗೆ ಶುಭ ಕೋರಿದ್ದಾರೆ. ಮೂಲಗಳ ಪ್ರಕಾರ, ಯುಗಾದಿ ಹಬ್ಬಕ್ಕೆ ಬುಕ್ ಮಾಡಿದ ಈ ಕಾರು ಇಂದು ಮನೆಗೆ ಬಂದು ಕೊಟ್ಟು ಹೋಗಿದ್ದಾರೆ ಎನ್ನಲಾಗಿದೆ.ಕಾಂತಾರಾ ಸಿನಿಮಾ ಮಾಡುವಾಗ ಪಂಜುರ್ಲಿ ದೈವದ ಒಪ್ಪಿಗೆ ಪಡೆದಿದ್ದ ನಟ ರಿಷಬ್ ಚಾಪ್ಟರ್ 1 ಮಾಡುವಾಗಲೂ ದೇವರ ಒಪ್ಪಿಗೆ ಪಡೆದಿದ್ದರು. 
ಹೀಗಿದ್ದರು ಅವರು ಇತ್ತೀಚೆಗೆ ಮಂಗಳೂರಿನ ಕದ್ರಿಯ ಪಂಜುರ್ಲಿ ದೈವವನ್ನು ಭೇಟಿ ಮಾಡಿದ್ದಾರೆ. ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಈ ವೇಳೆ ದೈವ ರಿಷಬ್ ಶೆಟ್ಟಿಗೆ ಎಚ್ಚರಿಕೆ ನೀಡಿದೆ.ಈ ವೇಳೆ ಪಂಜುರ್ಲಿ ದೈವವು ನಿನಗೆ ಶತ್ರುಗಳ ಕಾಟ ಇದೆ. ಎಚ್ಚರಿಕೆಯಿಂದ ಇರಬೇಕು. ಜಗತ್ತಿನೆಲ್ಲೆಡೆ ನಿನಗೆ ದುಶ್ಮನ್‌ಗಳಿದ್ದಾರೆ. ನನಗೆ ಸೇವೆ ನೀಡುವ ಹರಕೆ ಕಟ್ಟಿಕೋ.. ಮುಂದಿನ ಐದು ತಿಂಗಳಲ್ಲಿ ನಿನ್ನ ಸಮಸ್ಯೆ ಪರಿಹಾರ ಒದಗಿಸುತ್ತೇನೆ. ಈ ಮೂಲಕ ರಿಷಬ್ ಶೆಟ್ಟಿ ಕುಟುಂಬಕ್ಕೆ ದೈವ ಅಭಯ ನೀಡಿದೆ. ದೈವದ ಮುಂದೆ ರಿಷಬ್ ಜೊತೆಗೆ ಪತ್ನಿ ಪ್ರಗತಿ ಶೆಟ್ಟಿ ಹಾಗೂ ಇಬ್ಬರು ಮಕ್ಕಳು ತೆರಳಿದ್ದರು. ಬೆಳಗ್ಗೆವರೆಗೂ ನಿಂತು ದೈವದ ಪೂಜೆ ನೆರವೇರಿಸಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.