ಬಡಪಾಯಿ ರಾಕೇಶ್ ಪೂಜಾರಿ ಅಂತ್ಯಸಂಸ್ಕಾರಕ್ಕೂ ಬಾರದ ರಿಷಭ್ ಶೆಟ್ಟಿ, ದುಡ್ಡಿನ ಮದ ತಲೆಗೆ ಹತ್ತಿದೆ ಎಂದ ನೆಟ್ಟಿಗರು

 | 
Hjj
ಕೆಲ ದಿನಗಳ ಹಿಂದಷ್ಟೇ ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಸ್ಯನಟ ರಾಕೇಶ್‌ ಪೂಜಾರಿ ಅವರು ಹೃದಯಾಘಾತದಿಂದ ಇತ್ತೀಚೆಗೆ ನಿಧನರಾದರು. ಇಡೀ ಅವರ ಅಂತ್ಯಕ್ರಿಯೆ ಉಡುಪಿಯಲ್ಲಿ ನೆರವೇರಿತ್ತು. ಯೋಗರಾಜ್‌ ಭಟ್‌, ರಕ್ಷಿತಾ ಪ್ರೇಮ್‌, ಆಂಕರ್‌ ಅನುಶ್ರೀ ಸೇರಿದಂತೆ ಇಡೀ ಕಾಮಿಡಿ ಕಿಲಾಡಿಗಳು ಟೀಂ ರಾಕೇಶ್‌ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದಿತ್ತು. ರಿಷಬ್‌ ಶೆಟ್ಟಿ ಅವರ ಕಾಂತಾರ ಚಾಪ್ಟರ್‌-1 ಸಿನಿಮಾದಲ್ಲೂ ರಾಕೇಶ್‌ ನಟಿಸಿದ್ದು, ರಿಷಬ್‌ ಕೂಡ ರಾಕೇಶ್‌ ಅವರ ನಿಧನಕ್ಕೆ ಸಂತಾಪ ಸೂಚಿಸಿ ಪೋಸ್ಟ್‌ ಮಾಡಿದ್ದರು. ಆದರೆ ರಿಷಬ್‌ ಶೆಟ್ಟಿ ವಿರುದ್ಧ ಇದೀಗ ಗಂಭೀರ ಆರೋಪ ಕೇಳಿಬಂದಿದೆ.
ರಿಷಬ್‌ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ಕಾಂತಾರ ಚಾಪ್ಟರ್-‌1 ಸಿನಿಮಾದಲ್ಲಿ ರಾಕೇಶ್‌ ಪೂಜಾರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಅವರು ತಮ್ಮ ಪಾತ್ರದ ಶೂಟಿಂಗ್‌ ಕೂಡ ಮುಗಿಸಿಕೊಟ್ಟಿದ್ದರು. ಇದರ ನಡುವೆಯೇ ಅವರ ಅಕಾಲಿಕ ಮರಣಕ್ಕೆ ತುತ್ತಾಗಿ ಎಲ್ಲರಿಗೂ ಶಾಕ್‌ ನೀಡಿದ್ದಾರೆ. ಕಾಂತಾರ ಚಿತ್ರತಂಡ ಕೂಡ ರಾಕೇಶ್‌ ಸಾವಿನಿಂದ ಆಘಾತಕ್ಕೆ ಒಳಗಾಗಿದೆ. ಈ ಬಗ್ಗೆ ರಿಷಬ್‌ ಶೆಟ್ಟಿ ಅವರು ಸಂತಾಪ ಸೂಚಿಸಿದ್ದರೂ, ಅವರ ಮೇಲೆ ಆ ಒಂದು ಕಾರಣಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.
ರಾಕೇಶ್‌ ಪೂಜಾರಿ ಅವರು ರಿಷಬ್‌ ಶೆಟ್ಟಿಗೆ ತೀರಾ ಪರಿಚಿತರು ಮಾತ್ರವಲ್ಲದೆ, ರಾಕೇಶ್‌ ಅವರ ಊರಿಗೆ ಸಮೀಪವೇ ರಿಷಬ್‌ ಶೆಟ್ಟಿ ಅವರ ಊರು ಕೂಡ ಇದೆ ಎನ್ನಲಾಗಿದೆ. ಹೀಗಿರುವಾಗ ರಾಕೇಶ್‌ ಅವರ ಅಂತಿಮ ದರ್ಶನಕ್ಕೂ ರಿಷಬ್‌ ಬರಲೇ ಇಲ್ಲ ಯಾಕೆ? ಎಂದು ಸೋಶಿಯಲ್‌ ಮೀಡಿಯಾದಲ್ಲಿ ಹಲವರು ಪ್ರಶ್ನೆ ಎತ್ತಿದ್ದಾರೆ.ರಿಷಬ್‌ ಶೆಟ್ಟರ ಸಿನಿಮಾದಲ್ಲಿ ರಾಕೇಶ್‌ ನಟಿಸಿದ್ದಾರೆ. ಅವರ ಊರು ಕೂಡ ಹತ್ತಿರದಲ್ಲೇ ಇದೆ. ಹೀಗಿದ್ದರೂ ರಾಕೇಶ್‌ ಅವರ ನಿವಾಸಕ್ಕೆ ಸೌಜನ್ಯಕ್ಕಾದರೂ ಭೇಟಿ ನೀಡಿ ಅಂತಿಮ ದರ್ಶನ ಪಡೆಯಲು ಕೂಡ ಸಾಧ್ಯವಾಗಿಲ್ಲವೇ? ಎಂದು ಆಕ್ರೋಶ ಹೊರಹಾಕಿದ್ದಾರೆ.
 ಸುಮ್ಮನೆ ಎಲ್ಲರಂತೆ ಪೋಸ್ಟ್‌ ಮೂಲಕ ಸಂತಾಪ ಸೂಚಿಸಿದರೆ ಸಾಕೇ? ನಿಮಗೆ ನಿಮ್ಮ ಸಿನಿಮಾದಲ್ಲೇ ನಟಿಸಿದ್ದ ನಟನ ಸಾವಿಗೆ ಅಂತಿಮ ದರ್ಶನ ಪಡೆಯುವುದಕ್ಕೂ ಬಿಡುವಿಲ್ಲದಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೀರಾ, ನಿಮಗೆ ನಿಮ್ಮ ಸಿನಿಮಾ ಶೂಟಿಂಗ್‌ ಹೆಚ್ಚಾಯ್ತಾ? ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.ರಾಕೇಶ್‌ ಪೂಜಾರಿ ಅವರ ನಿಧನಕ್ಕೆ ರಿಷಬ್‌ ಶೆಟ್ಟಿ ಅವರು ತಮ್ಮ ಎಕ್ಸ್‌ ಖಾತೆ ಮೂಲಕ ಸಂತಾಪ ಸೂಚಿಸಿದ್ದರು. ನೀನು ನನ್ನ ಮನಸ್ಸಿನಲ್ಲಿ ಎಂದೆಂದಿಗೂ ಒಬ್ಬ ಅದ್ಭುತ ಕಲಾವಿದ. ಕಾಂತಾರ ಚಾಪ್ಟರ್‌ ಒನ್ ಸಿನಿಮಾದಲ್ಲಿ ನಿನ್ನ ಪಾತ್ರ ಹಾಗೂ ಅದನ್ನು ನಿರ್ವಹಿಸುವಾಗ ನಿನ್ನ ಮುಖದ ನಗು ನನ್ನ ಕಣ್ಣಲ್ಲಿ ಎಂದೆಂದಿಗೂ ಶಾಶ್ವತ ಎಂದು ಕಂಬನಿ ಮಿಡಿದಿದ್ದರು. ಕಲಾವಿದ ವರ್ಗಕ್ಕೆ ಇದೊಂದು ತುಂಬಲಾರದ ನಷ್ಟ, ಮತ್ತೆ ಹುಟ್ಟಿ ಬಾ ಗೆಳೆಯ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಈ ಆಘಾತವನ್ನು ಸಹಿಸುವ ಶಕ್ತಿ ನಿನ್ನ ಕುಟುಂಬಕ್ಕೆ ಕೊಡಲಿ ಎಂದು ರಿಷಬ್‌ ಪೋಸ್ಟ್‌ ಮಾಡಿದ್ದರು. ಹತ್ತಿರದಲ್ಲೇ ಇದ್ದರೂ ಅಂತಿಮ ದರ್ಶನಕ್ಕೆ ಬರಲಿಲ್ಲ ಎಂಬ ಕಾರಣಕ್ಕೆ ರಿಷಬ್‌ ಶೆಟ್ಟಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.