ನಟಭಯಂಕರ ರಂಗಣ್ಣನಿಗೆ ಚಮಕ್ ಕೊಟ್ಟ ರಿಷಭ್ ಶೆಟ್ಟಿ, ಸಪ್ಪೆಯಾದ Alright ರಂಗಣ್ಣ

 | 
Ranga

ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರ ಅದ್ಭುತ ಕೃತಿ ‘ಕಾಂತಾರ ಚಾಪ್ಟರ್ 1’ ಇದೀಗ ಜಗತ್ತಿನಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ. ವಿಶ್ವದಾದ್ಯಂತ 7000 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ, ಕನ್ನಡ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದೆ.

ಪಬ್ಲಿಕ್ ಟಿವಿ ರಂಗಣ್ಣ ಅವರೊಂದಿಗೆ ನಡೆದ ಸಂದರ್ಶನದಲ್ಲಿ, ರಿಷಬ್ ಶೆಟ್ಟಿ ತಮ್ಮ ಸಿನಿಮಾ ಪ್ರಯಾಣ ಮತ್ತು ಯಶಸ್ಸಿನ ಬಗ್ಗೆ ಹಂಚಿಕೊಂಡರು. ರಂಗಣ್ಣ ಅವರು “ನಿಮ್ಮ ಸಿನಿಮಾವೂ ನಿಮ್ಮ ಮಗುವೇನೋ?” ಎಂದು ಪ್ರಶ್ನಿಸಿದಾಗ, ರಿಷಬ್ ಹಾಸ್ಯಮಯವಾಗಿ “ಹೌದು” ಎಂದರು ಮತ್ತು ಅದೇ ಸಮಯದಲ್ಲಿ ಕನ್ನಡ ಚಿತ್ರರಂಗದ ಪ್ರಗತಿಯ ಹಿಂದೆ ಇರುವವರ ಬಗ್ಗೆ ಹೃದಯಪೂರ್ವಕವಾಗಿ ಮಾತನಾಡಿದರು.

ಯಶ್ ಸರ್, ಪ್ರಶಾಂತ್ ನೀಲ್ ಸರ್, ವಿಜಯ್ ಸರ್, ಕಾರ್ತಿಕ್ ಸರ್ ಮತ್ತು ಹೊಂಬಾಳೆ ಫಿಲ್ಮ್ಸ್ ಎಲ್ಲರೂ ನಮ್ಮ ಕನ್ನಡ ಸಿನಿಮಾ ಉದ್ಯಮಕ್ಕೆ ಹೊಸ ದಾರಿಯನ್ನು ತೆರೆದವರು. ಇವರು ಕನ್ನಡ ಚಿತ್ರವನ್ನು ದೇಶದ ಮಟ್ಟದಿಂದ ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಅವರ ಪ್ರಯತ್ನವಿಲ್ಲದಿದ್ದರೆ ‘ಕಾಂತಾರ’ ಇಷ್ಟು ಬೇಗ ವಿಶ್ವದಾದ್ಯಂತ ತಲುಪಿರಲಿಲ್ಲ.

ಹೊಂಬಾಳೆ ಸಂಸ್ಥೆಯ ಪ್ರಯೋಗಗಳು ಯಶಸ್ವಿಯಾದದ್ದರಿಂದ ನಾವು ಕೂಡ ನಮ್ಮ ಸಿನಿಮಾವನ್ನು ಡಬ್ ಮಾಡದೆ ನೇರವಾಗಿ ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡುವ ಧೈರ್ಯ ಪಡೆದಿದ್ದೇವೆ. ಮೊದಲು ಇಂತಹ ಪ್ರಯತ್ನಗಳು ಕೇವಲ ಸೆಟಲೈಟ್ ಮತ್ತು OTT ಮಟ್ಟದಲ್ಲೇ ಸೀಮಿತವಾಗಿದ್ದವು.ಎಂದು ಹೇಳಿ ಎಲ್ಲರ ಸಹಾಯ ನೆನಪಿಸಿ ಕೊಂಡಿದ್ದಾರೆ.