RCB ಗೆ ಎಂಟ್ರಿ ಕೊಟ್ಟ ರೋಹಿತ್ ಶರ್ಮಾ; ತಕ್ಷಣ ಬದಲಾವಣೆಯಿಂದ ಸಿಡಿದೆ ದ್ದ ಮುಂಬೈ Indians
ಟೀಮ್ ಇಂಡಿಯಾದ ಮಾಜಿ ಕ್ರಿಕೆಟರ್ ಅಂಬಾಟಿ ರಾಯುಡು ಮುಂಬೈ ಇಂಡಿಯನ್ಸ್ ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ ಬಗ್ಗೆ ಮತ್ತೆ ಭವಿಷ್ಯ ನುಡಿದಿದ್ದಾರೆ. ಮುಂಬೈ ತಂಡದ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿದ ರೋಹಿತ್ ಶರ್ಮಾ ಮುಂದಿನ ಸೀಸನ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಥವಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರೋ ಸಾಧ್ಯತೆ ಇದೆ ಎಂದಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ರೋಹಿತ್ ಬದಲಿಗೆ ಹಾರ್ದಿಕ್ ಪಾಂಡ್ಯಗೆ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ಕ್ಯಾಪ್ಟನ್ಸಿ ನೀಡಿದೆ. ಬರೋಬ್ಬರಿ 5 ಬಾರಿ ಟ್ರೋಫಿ ಗೆಲ್ಲಿಸಿದ್ದ ರೋಹಿತ್ ಶರ್ಮಾ ಅವರನ್ನು ಕೆಟ್ಟದಾಗಿ ನಡೆಸಿಕೊಂಡ ಮುಂಬೈ ಇಂಡಿಯನ್ಸ್ ವಿರುದ್ಧ ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದರು. ರೋಹಿತ್ ಪತ್ನಿ ರಿತಿಕಾ ಕೂಡ ಇನ್ಸ್ಟಾದಲ್ಲಿ ಅಸಮಾಧಾನ ಹೊರಹಾಕಿದ್ದರು.
ಈ ಮಧ್ಯೆ ಮಾತಾಡಿರೋ ಅಂಬಾಟಿ ರಾಯುಡು ರೋಹಿತ್ ವಿಚಾರದಲ್ಲಿ ಮುಂಬೈ ಇಂಡಿಯನ್ಸ್ ಆತುರದ ನಿರ್ಧಾರ ತೆಗೆದುಕೊಂಡಿದೆ. ರೋಹಿತ್ ಈ ವರ್ಷ ನಾಯಕನಾಗಿ ಮುಂದುವರಿಯಬೇಕಿತ್ತು. ಮುಂದಿನ ಸೀಸನ್ಗೆ ಹಾರ್ದಿಕ್ಗೆ ಜವಾಬ್ದಾರಿ ನೀಡಬಹುದಿತ್ತು. ಈಗ ರೋಹಿತ್ ಮನಸ್ಸು ಬದಲಾಗಿದೆ.
2025ರ ಸೀಸನ್ನಲ್ಲಿ ಸಿಎಸ್ಕೆ ತಂಡದಿಂದ ಧೋನಿ, ಆರ್ಸಿಬಿಯಿಂದ ಫಾಫ್ ರಿಟೈರ್ ಆಗಲಿದ್ದಾರೆ. ಆಗ ಈ ಎರಡು ತಂಡಗಳಲ್ಲಿ ಒಂದಕ್ಕೆ ರೋಹಿತ್ ಕ್ಯಾಪ್ಟನ್ ಆಗಿ ಇನ್ನೊಂದು 4 ವರ್ಷ ಐಪಿಎಲ್ ಆಡಲಿದ್ದಾರೆ ಎಂದಿದ್ದಾರೆ. ಅಷ್ಟೆ ಅಲ್ಲದೆ ಸತತ ಸೋಲಿನಿಂದ ಕಂಗೆಟ್ಟಿರುವ RCB ತಂಡಕ್ಕೆ ರೋಹಿತ್ ಶರ್ಮಾ ಆಗಮನ ಹೊಸ ಹುರುಪನ್ನು ತರುತ್ತದೆಯೋ ನೋಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.