ಗಿಚ್ಚಿಗಿಲಿಗಿಲಿ 10ಲಕ್ಷ 'ಅವಳಿಗೆ'; ಹುಲಿ ಕಾತಿ೯ಕ್ ಹುಡುಗಿ ಯಾರು ಗೊತ್ತಾ

 | 
He
 ಕಲರ್ಸ್ ಕನ್ನಡದಲ್ಲಿ ಯಶಸ್ವಿಯಾಗಿರುವ ಕಾರ್ಯಕ್ರಮ ಗಿಚ್ಚಿಗಿಲಿಗಿಲಿ ಸೀಸನ್‌ 3ರ ವಿನ್ನರ್ ಆಗಿ ಹುಲಿ ಕಾರ್ತಿಕ್‌ 10 ಲಕ್ಷ ರೂಗಳ ಚಿನ್ನ ಬೆಲ್ಟ್ ಗೆದ್ದಿದ್ದಾರೆ. ತುಕಾಲಿ ಮಾನಸ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಇವರು 3 ಲಕ್ಷ ರೂ ಬಹುಮಾನ ಗೆದ್ದಿದ್ದಾರೆ. ನನಗೆ ವಾಯ್ಸ್‌ ಬರುತ್ತಿಲ್ಲ . ನನ್ನ ತಾಯಿಗೆ ಥ್ಯಾಂಕ್ಸ್‌ ಹೇಳುತ್ತೇನೆ. ಆಕೆ ನನಗೆ ಕೊಟ್ಟ ಫ್ರೀಡಂ ಇದಕ್ಕೆಲ್ಲ ಕಾರಣ ಎಂದಿದ್ದಾರೆ ಕಾರ್ತಿಕ್.
ಬಿಗ್‌ಬಾಸ್‌ ಕನ್ನಡ ಸೀಸನ್ 10ರ ನಂತರ ಗಿಚ್ಚಿಗಿಲಿ ಗಿಲಿ ಆರಂಭವಾಗಿ ಬರೋಬ್ಬರಿ 8 ತಿಂಗಳ ಕಾಲ ಕಲರ್ಸ್ ಕನ್ನಡದಲ್ಲಿ ಈ ಶೋ ಸುದೀರ್ಘವಾಗಿ ಮೂಡಿಬಂದಿತ್ತು. ಮತ್ತು ಜನ ಮನ್ನಣೆ ಗಳಿಸಿತ್ತು. ಮಲೆನಾಡಿನ ಹೆಮ್ಮೆಯ ಕಲಾವಿದ ಹುಲಿ ಕಾರ್ತಿಕ್ ಪ್ರಶಸ್ತಿ ಗೆಲ್ಲಲು 8 ವರ್ಷ ಕಾದಿದ್ದಾರೆ. ಕಲರ್ಸ್ ಸೂಪರ್‌ ನಲ್ಲಿ ಮೂಡಿ ಬರುತ್ತಿದ್ದ ಮಜಾ ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕಾರ್ತಿಕ್‌ ಹಾಗೇ ಮುಂದುವರೆದು 8 ವರ್ಷದ ಬಳಿಕ ಕಲರ್ಸ್ ನ ಕಾಮಿಡಿ ನಟನಾಗಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಯಾವುದೇ ಪಾತ್ರ ಕೊಟ್ಟರೂ ನೀರು ಕುಡಿದಷ್ಟೇ ಸಲೀಸಾಗಿ ನಿಭಾಯಿಸಿ, ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುವ, ಅದ್ಭುತ ಕಾಮಿಡಿ ಟೈಮಿಂಗ್ ಹೊಂದಿರುವ ಕಲಾವಿದ ಹುಲಿ ಕಾರ್ತಿಕ್. ಅವರ ಪೆದ್ದರಾಜನ ಸ್ಕಿಟ್‌ ಯಾರೂ ಮರೆಯುವಂತಿಲ್ಲ. ಕಾರ್ತಿಕ್ ಮೂಲತಃ ಶಿವಮೊಗ್ಗದವರು. ತೀರ್ಥಹಳ್ಳಿಯ ಚಿಕ್ಕಳ್ಳಿ ಎಂಬ ಊರಿನವರು ಇವರಿಗೆ ತಾಯಿಯೇ ಪ್ರಪಂಚ.
ಬಡತನದಲ್ಲಿ ಬೆಳೆದ ಕಾರ್ತಿಕ್ ಗಾರೆ ಕೆಲಸ , ಪಂಚರ್ ಶಾಪ್, ವೆಲ್ಡಿಂಗ್ ಶಾಪ್, ಐಸ್‌ಕ್ರೀಮ್ ಪಾರ್ಲರ್‌ ನಲ್ಲಿ ಹೊಟ್ಟೆಪಾಡಿಗಾಗಿ ಕೆಲಸ ಮಾಡಿದ್ದಾರೆ. ಬಣ್ಣದ ಬದುಕಿನತ್ತ ಆಕರ್ಪಿತರಾಗಿ ನಾಟಕಗಳಲ್ಲಿ  ಬಣ್ಣ ಹಚ್ಚಿ, ಮಜಾ ಭಾರತ ಮತ್ತು ಗಿಚ್ಚಿಗಿಲಿಗಿಲಿಯಲ್ಲಿ ಜನಪ್ರಿಯತೆ ಗಳಿಸಿದರು. ನಂತರ  ಟಗರು ಪಲ್ಯ, ತ್ರಿವಿಕ್ರಮ ಮುಂತಾದ ಹಲವು ಸಿನಿಮಾಗಳಲ್ಲಿ ಹುಲಿ ಕಾರ್ತಿಕ್ ನಟಿಸಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.