ಪ್ರತಿ ತಿಂಗಳಿಗೆ 3ಲಕ್ಷ ಸಂಬಳ; ಡಾ ಬ್ರೋ ಅವರನ್ನು ಮೀರಿ ಬೆಳೆದ ಸೋನು ಗೌಡ

 | 
Hj
ಇದು ಫಾಸ್ಟ್​ ಫುಡ್ ಯುಗ.. ಊಟ ಆರ್ಡರ್​​ ಮಾಡಿದ ಕೂಡಲೇ ಹೇಗೆ ಫಾಸ್ಟಾಗಿ ಡೆಲಿವರಿ ಆಗುತ್ತೋ ಹಾಗೇ ಇಲ್ಲಿ ಯಾರು ಬೇಕಾದರೂ ಕ್ಷಣ ಮಾತ್ರದಲ್ಲಿ ಫೇಮಸ್ ಆಗಬಹುದು. ಇಂಟರ್​ನೆಟ್ ಮೂಲಕ ಹಲವು ಪ್ರತಿಭೆಗಳು ಬೆಳಕಿಗೆ ಬಂದಿವೆ.  ಕೆಲವರು ತಮ್ಮ ಟ್ಯಾಲೆಂಟ್ ಪ್ರದರ್ಶಿಸಿ ಇನ್ನೂ ಚಾಲ್ತಿಯಲ್ಲಿದ್ದಾರೆ. 
ಇನ್ನೂ ಕೆಲವರು ಬಂದ ಪುಟ್ಟ ಹೋದ ಪುಟ್ಟ ಎನ್ನುವ ಹಾಗೇ ಆಗಿದ್ದಾರೆ. ಟಿಕ್​ ಟಾಕ್ ಬ್ಯಾನ್​ ಆಗುವುದಕ್ಕಿಂತ ಮುಂಚೆ ಕರ್ನಾಟಕದಲ್ಲೂ ಹಲವು ಪ್ರತಿಭೆಗಳು ಹೆಸರು ಮಾಡಿದ್ದರು. ರಾತ್ರೋ ರಾತ್ರಿ ಸ್ಟಾರ್​​ ಗಳ ರೇಂಜ್​ನಲ್ಲಿ ಹೆಸರು ಮಾಡಿದ್ದರು. ಆದರೆ, ಅದನ್ನು ಉಳಿಸಿಕೊಳ್ಳುವ ತಾಕತ್ತು ಯಾರಿಗೂ ಇರಲಿಲ್ಲ. ಇನ್ನೂ ಕೆಲವರು ಸೋಷಿಯಲ್​ ಮೀಡಿಯಾದಿಂದ ಬಂದ ಫೇಮ್ ಬಳಸಿಕೊಂಡು ಉತ್ತಮ ಕಮಾಯಿ ಮಾಡುತ್ತಿದ್ದಾರೆ.
ಇದೇ ರೀತಿ ಸಾಮಾಜಿಕ ಜಾಲತಾಣ ಬಳಸ ಲಕ್ಷಾಂತರ ಗಳಿಕೆ ಮಾಡುವುದರಲ್ಲಿ ಸೋನು ಶ್ರೀನಿವಾಸ್​ ಗೌಡ ಸಹ ಒಬ್ಬರು. ಈಕೆಯ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ಇತ್ತೀಚೆಗಂತೂ ಈಕೆಯನ್ನು ನೋಡದಿರದೇ ಇರುವವರಿಲ್ಲ. ಟಿಕ್​ಟಾಕ್​ ಬ್ಯಾನ್​ ಆದಮೇಲೂ ಸೋನು ಇನ್​ಸ್ಟಾಗ್ರಾಂ ರೀಲ್ಸ್​ ಮಾಡಿ ಇನ್ನೂ ಚಾಲ್ತಿಯಲ್ಲಿದ್ದಾರೆ. ಹೀಗಿರುವಾಗ ಯಾವುದೇ ಕೆಲಸ ಮಾಡದೇ ಸದಾ ವಿಡಿಯೋ ಮಾಡುತ್ತಲೇ ಇರುವ ಇವರಿಗೆ ಹೇಗೆ ಇಷ್ಟೊಂದು ಹಣ ಸಿಗುತ್ತೆ? ಇವರ ತಿಂಗಳ ಗಳಿಕೆಯೆಷ್ಟು? ಎಂಬುದಂರ ಬಗ್ಗೆ ಪ್ರಶ್ನೆ ಮೂಡುತ್ತೆ. 
ಬೇರೆಯವರ ಹಾಡುಗಳಿಗೆ, ಡೈಲಾಗ್​ಗಳಿಗೆ ಲಿಪ್ ಸಿಂಕ್ ಮಾಡಿಬಿಟ್ಟರೆ , ತಾವೂ ಕೂಡ ಸೂಪರ್​ ಸ್ಟಾರ್​ ಎಂದು ಅಂದುಕೊಂಡು ಬಿಡುತ್ತಾರೆ. ಆದರೆ, ಇದು ನಿಜವಾದ ಟ್ಯಾಲೆಂಟ್​ ಅಲ್ಲ. ಯಾರೋ ಬರೆದಿರುವ ಹಾಡಿಗೆ, ಯಾರೋ ಬಾರಿಸಿರುವ ಮ್ಯೂಸಿಕ್​ಗೆ, ಇವರು ಕುಣಿದು ಹೆಸರು ಮಾಡಿದ್ದಾರೆ. ಅದರಲ್ಲಿ ಸೋನು ಶ್ರೀನಿವಾಸ್​ ಗೌಡ ಒಬ್ಬರು. 
ಈ ಸೋನು ಶ್ರೀನಿವಾಸ್​ ಗೌಡ ವಿಡಿಯೋಗಳಿಗಿಂತ ಹೆಚ್ಚಾಗಿ ಟ್ರೋಲ್​ ಆಗಿಯೇ ಫೇಮಸ್​ ಆದವರು. ಟ್ರೋಲ್​ ಪೇಜ್​ಗಳಿಂದಲೇ ಈಕೆಗೆ ಇಷ್ಟು ಹೆಸರು ಬಂದಿದ್ದು. ಚೈಲ್ಡೀಸ್​ ಮಾತುಗಳಿಂದ, ಇನ್ನೂ ಅನೇಕ ವಿಚಾರಕ್ಕೆ  ಸಿಕ್ಕಾಪಟ್ಟೆ ಟ್ರೋಲ್​ ಆದವರು ಸೋನು ಶ್ರೀನಿವಾಸ್​ ಗೌಡ.ಈಗ ಸೋಷಿಯಲ್​ ಮೀಡಿಯಾ ಸ್ಟಾರ್​ ಪಟ್ಟ ಪಡೆದುಕೊಂಡಿದ್ದಾರೆ.
ಅನೇಕ ಆಲ್ಬಂ ಸಾಂಗ್​, ಜಾಹೀರಾತುಗಳಲ್ಲಿ ಸೋನು ಶ್ರೀನಿವಾಸ ಗೌಡ ಕಾಣಿಸಿಕೊಂಡಿದ್ದಾರೆ. ಕೆಲ ಕಿರುಚಿತ್ರಗಳಲ್ಲೂ ನಟಿಸಿದ್ದಾರೆ. ಕೆಲ ಕನ್ನಡ ಸಿನಿಮಾಗಳಲ್ಲೂ ನಟಿಸುವ ಚಾನ್ಸ್​ ಪಡೆದುಕೊಂಡಿದ್ದಾರೆ. ಕೆಲ ಬ್ರ್ಯಾಂಡ್​ಗಳ ಪ್ರ,ಮೋಷನ್​ ವಿಡಿಯೋ ಮಾಡಿ ಹಣ ಸಂಪಾದಿಸುತ್ತಿದ್ದಾರೆ ಸೋನು ಶ್ರೀನಿವಾಸ್​ ಗೌಡ. ಇವರು ತಿಂಗಳಿಗೆ ಎಷ್ಟು ಹಣ ಸಂಪಾದಿಸುತ್ತಾರೆ ಎಂದು ಎಲ್ಲರಿಗೂ ಒಂದು ಕುತೂಹಲ ಇರುತ್ತೆ. 
ತಿಂಗಳಿಗೆ ಒಂದರಿಂದ ಎರಡು ಲಕ್ಷ ವಿಡಿಯೋಗಳಿಂದ ಸೋನು ಶ್ರೀನಿವಾಸ ಗೌಡ ಗಳಿಸುತ್ತಾರೆ ಎಂದು ಜನ ಮಾತನಾಡಿಕೊಳ್ಳುತ್ತಾರೆ. ಕೆಲ ಜಾಹೀರಾತುಗಳು, ಪ್ರಮೋಷನ್​ ವಿಡಿಯೋ ಮಾಡಿ ಸಂಪಾದನೆ ಮಾಡುತ್ತಿದ್ದಾರೆ ಸೋನು ಶ್ರೀನಿವಾಸ್​ ಗೌಡ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.