ಬಿಗ್ ಬಾಸ್ ಮನೆಯಲ್ಲಿ ರುದ್ರ ನರ್ತನ, ಪ್ರತಾಪ್ ಸಂಗೀತ ಜೋರು ಜಗಳ
ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ಯಾವುದೂ ಶಾಶ್ವತ ಅಲ್ಲ. ಮುನಿಸು, ಪ್ರೀತಿ, ಕಿತ್ತಾಟ ಎಲ್ಲವೂ ಅತೀ ಸಹಜ. ಅದೇ ರೀತಿ ಇದೀಗ ಸಂಗೀತಾ ಶೃಂಗೇರಿ ಮತ್ತು ಡ್ರೋಣ್ ಪ್ರತಾಪ್ ನಡುವೆ ಇಷ್ಟು ದಿನ ಇದ್ದ ಅಕ್ಕ ತಮ್ಮನ ಬಾಂಧವ್ಯ ಕೊನೆಗೊಂಡಂತೆ ಕಾಣಿಸಿದೆ. ನೇರವಾಗಿ ನನ್ನ ನಿನ್ನ ಅಕ್ಕ ತಮ್ಮನ ಸಂಬಂಧ ಮುಗೀತು ಎಂದು ಪ್ರತಾಪ್‌ಗೆ ಮುಖದ ಮೇಲೆ ಹೊಡೆದಂತೆ ಹೇಳಿದ್ದಾರೆ ಸಂಗೀತಾ.
ಸದಾ ದೀದಿ ದೀದಿ ಎಂದು ಸಂಗೀತಾ ಜತೆ ಹೆಚ್ಚು ಸಮಯ ಕಳೆಯುತ್ತಿದ್ದ ಪ್ರತಾಪ್ ಇಬ್ಬರ ನಡುವೆಯೂ ಮೊದಲಿನ ಸಂಬಂಧ ಈಗ ಉಳಿದಿಲ್ಲ. ಅಕ್ಕ ತಮ್ಮನ ಈ ಸಂಬಂಧ ಮೊದಲಿನಂತಿಲ್ಲ. ಬಿಗ್ ಬಾಸ್ ಮನೆಯಲ್ಲಿ ಕಳೆದ ಕೆಲ ವಾರಗಳ ಹಿಂದೆ ನಡೆದ ಮುಖಕ್ಕೆ ನೀರೆರಚುವ ಟಾಸ್ಕ್‌ನಲ್ಲಿ ಸಂಗೀತಾ ಮತ್ತು ಪ್ರತಾಪ್ ಕಣ್ಣಿಗೆ ತೀವ್ರ ತೊಂದರೆಯಾಗಿತ್ತು. ಅದಕ್ಕೆಂದು ಚಿಕಿತ್ಸೆ ಪಡೆದು ಮರಳಿದ ಬಳಿಕ ಈ ಜೋಡಿ ಸ್ನೇಹ ಮತ್ತಷ್ಟು ಗಟ್ಟಿಯಾಗಿತ್ತು.
ಇನ್ನು ಟಾಸ್ಕ್‌ಗಳಲ್ಲಿ ಯಾವ ಸ್ಪರ್ಧಿ ಹಿಂದೆ ಉಳಿದಿದ್ದಾರೆ ಎಂದು ಬಿಗ್ ಬಾಸ್ ಕೇಳಿದ್ದರು. ಆಗ ಬಹುತೇಕ ಎಲ್ಲರೂ ಡ್ರೋಣ್ ಪ್ರತಾಪ್ ಮತ್ತು ವರ್ತೂರು ಸಂತೋಷ್ ಹೆಸರನ್ನು ತೆಗೆದುಕೊಂಡಿದ್ದರು. ಮನೆಮಂದಿಯ ಈ ಹೇಳಿಕೆಗೆ ಆಕ್ಷೇಪ ಎತ್ತಿದ್ದರು ಡ್ರೋಣ್. ನಾನು ಮತ್ತು ವರ್ತೂರು ನಿಮ್ಮಂತೆ ಸಿನಿಮಾ ಕ್ಷೇತ್ರದಿಂದ ಬಂದಿಲ್ಲ, ನಾವಿಬ್ಬರು ಬೇರೆ ಕ್ಷೇತ್ರದಿಂದ ಬಂದಿದ್ದೀವೆ ಎಂದು ಹೇಳಿದ್ದರು. ಈ ಮಾತು ಸಂಗೀತಾ ಅವರನ್ನು ಕೆರಳಿಸಿತ್ತು. ಇಬ್ಬರೂ ಕೂತು ಈ ಬಗ್ಗೆ ಚರ್ಚೆ ನಡೆಸಿದ್ದರಾದರೂ, ಅಲ್ಲಿ ಯಾವುದೂ ಬಗೆ ಹರಿದಿಲ್ಲ.
ನಾನು ಮತ್ತು ವರ್ತೂರು ನಿಮ್ಮಂತೆ ಸಿನಿಮಾ ಕ್ಷೇತ್ರದಿಂದ ಬಂದಿಲ್ಲ, ನಾವಿಬ್ಬರು ಬೇರೆ ಕ್ಷೇತ್ರದಿಂದ ಬಂದಿದ್ದೀವೆ ಎಂಬ ಈ ನಿನ್ನ ಹೇಳಿಕೆ ಸರಿಯಿಲ್ಲ. ಸಿನಿಮಾ ಕ್ಷೇತ್ರಕ್ಕೂ ಆಟಕ್ಕೆ ಏನು ಸಂಬಂಧ ಎಂದು ಪ್ರಶ್ನೆ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಒಂದೇ. ಇಲ್ಲಿಗೆ ಬಂದ 16 ಸ್ಪರ್ಧಿಗಳಲ್ಲಿ ಬಹುತೇಕರು ಬೇರೆ ಬೇರೆ ಕ್ಷೇತ್ರಗಳಿಂದಲೇ ಬಂದವರು. ಈ ಹಿಂದಿನ ಸೀಸನ್‌ಗಳಲ್ಲೂ ಅಷ್ಟೇ.
ಈಗ ಉಳಿದಿರುವ ಸ್ಪರ್ಧಿಗಳು ಸಿನಿಮಾ, ಕಿರುತೆರೆ ಕ್ಷೇತ್ರಕ್ಕೆ ಸಂಬಂಧಪಟ್ಟಿದ್ದರೂ, ಆಟಕ್ಕೂ ಅದಕ್ಕೂ ಹೇಗೆ ಸಂಬಂಧ ಇದೆ? ಎಂದು ಪ್ರಶ್ನಿಸಿದ್ದಾರೆ ಸಂಗೀತಾ. ನಾನು ನಿನ್ನನ್ನು ನನ್ನ ತಮ್ಮನಂತೆ ನೋಡುತ್ತಿದ್ದೆ. ಆದರೆ, ನೀನು ಯಾವುದನ್ನೂ ಸರಿಯಾಗಿ ಅರ್ಥ ಮಾಡಿಕೊಳ್ಳದೇ, ಯಾರ ಬಗ್ಗೆಯೂ ಗೌರವ ಇಲ್ಲದೇ ಕೇವಲ ನನ್ನ ಸ್ವಾರ್ಥಕ್ಕೆ ಏನೋ ಹೇಳುತ್ತ ಇರುತ್ತೀಯಾ. ಇಲ್ಲಿಗೆ ನನ್ನ ನಿನ್ನ ಅಕ್ಕ-ತಮ್ಮನ ಸಂಬಂಧ ಮುಗಿಯಿತು ಎಂದು ಕಡ್ಡಿ ಮುರಿದಂತೆ ಹೇಳಿ ಹೊರಟಿದ್ದಾರೆ ಸಂಗೀತಾ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.