ಸಾನಿಯಾ ಅಯ್ಯರ್ ಕೈಹಿಡಿಯಲಿರುವ ರೂಪೇಶ್ ಶೆಟ್ಟಿ, ಇದೇ ವರ್ಷ ಕನ್ನಡಿಗರಿಗೆ ಸಿಹಿಸುದ್ದಿ
Feb 7, 2025, 17:30 IST
|

ಬಿಗ್‌ಬಾಸ್ ಕನ್ನಡ ಮನೆಯೊಳಗೆ ಲವ್ ಸ್ಟೋರಿಗಳನ್ನು ವೀಕ್ಷಕರು ನೋಡಿದ್ದಾರೆ. ಕೆಲವರು ಹೊರಗೆ ಬಂದ್ಮೇಲೆ ಮುಂದುವರೆಸಿದ್ದಾರೆ. ಮತ್ತೆ ಕೆಲವರು ಅದು ಕೇವಲ ಫ್ರೆಂಡ್‌ಶಿಪ್ ಅಂತಷ್ಟೇ ಹೇಳಿಕೊಂಡಿದ್ದೂ ಇದೆ. ಬಿಗ್ ಬಾಸ್ ಮನೆಯೊಳಗೆ ಇಬ್ಬರೂ ಲವ್ ಮಾಡುತ್ತಿದ್ದಾರೆ ಅಂತ ಅನುಮಾನ ಹುಟ್ಟಾಕಿದಂತ ಜೋಡಿಗಳಲ್ಲಿ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ಕೂಡ ನಿಲ್ಲುತ್ತಾರೆ.
ಬಿಗ್ ಬಾಸ್ ಮನೆಯೊಳಗೆ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ಇಬ್ಬರ ಕೆಮಿಸ್ಟ್ರಿ ಇಂತಹದ್ದೊಂದು ಗುಮಾನಿಯನ್ನು ಹುಟ್ಟಾಕಿದ್ದು ನಿಜ. ಆದರೆ, ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೆ ಈ ಜೋಡಿ ತಮ್ಮ ಲವ್ ಸ್ಟೋರಿ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ಮದುವೆ ಬಗ್ಗೆ ಅಂತೂ ಎಲ್ಲೂ ಮಾತಾಡಿಲ್ಲ. ಇಬ್ಬರೂ ತಮ್ಮ ವೃತ್ತಿ ಬದುಕಿನ ಕಡೆಗೆ ಗಮನ ಹರಿಸಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೆ ರೂಪೇಶ್ ಶೆಟ್ಟಿ 'ಅಧಿಪತ್ರ' ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ಇದೇ ಫೆಬ್ರವರಿ 7ರಂದು ಬಿಡುಗಡೆಯಾಗುತ್ತಿದೆ. ಈ ಕಾರಣಕ್ಕೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಇದೇ ಸಿನಿಮಾ ಮೂಲಕ ನಿರೂಪಕಿ ಜಾಹ್ನವಿ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ವೇಳೆ ಅವರದ್ದೇ ಜಾಹ್ನವಿ ಚಾನೆಲ್ ಯೂಟ್ಯೂಬ್ ಚಾನೆಲ್‌ಗೆ ನೀಡದ ಸಂದರ್ಶನದಲ್ಲಿ ರೂಪೇಶ್ ಶೆಟ್ಟಿ ತಮ್ಮ ಲವ್ ಸ್ಟೋರಿ, ಸಾನ್ಯಾ ಐಯ್ಯರ್ ಹಾಗೂ ಮದುವೆ ಬಗ್ಗೆ ಓಪನ್ ಆಗಿ ಮಾಡಿದ್ದಾರೆ.
ರೂಪೇಶ್ ಶೆಟ್ಟಿಯನ್ನು ಸಂದರ್ಶನ ಮಾಡುತ್ತಿದ್ದ ಜಾಹ್ನವಿ ನೇರವಾಗಿ ನಿಮ್ಮ ಹಾಗೂ ಸಾನ್ಯಾ ಮದುವೆ ಯಾವಾಗ? ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ರೂಪೇಶ್ ಶೆಟ್ಟಿ ಕೊಟ್ಟ ಉತ್ತರ ಹೀಗಿತ್ತು. "ನೀವೇನು ಡೈರೆಕ್ಟ್ ಆಗಿ ಮದುವೆಗೆ ಬಂದುಬಿಟ್ರಿ. ಆ ತರಹದ ವಿಚಾರನೇ ಇಲ್ಲ. ನಾವು ತುಂಬಾನೇ ಒಳ್ಳೆಯ ಫ್ರೆಂಡ್ಸ್ ಆಗಿದ್ದೇವೆ. ಹೊರಗೆ ಬಂದ್ಮೇಲೂ ತುಂಬಾ ಒಳ್ಳೆ ಸ್ನೇಹಿತರಾಗಿದ್ದೇವೆ. ಕಾಲ್ ಮಾಡುತ್ತೇವೆ, ಮಾತಾಡುತ್ತೇವೆ. ಮೊನ್ನೆ ಅವರ ಸಿನಿಮಾ ರಿಲೀಸ್ ಇದ್ದಾಗ ಬರ್ತ್‌ಡೇ ದಿನಾನೂ ಊರಿಂದ ಬಂದಿದ್ದೇನೆ. ಆತರ ಎಫರ್ಟ್ಸ್ ಇದ್ದೇ ಇರುತ್ತೆ. ಯಾಕಂದ್ರೆ ಫ್ರೆಂಡ್ ಅಂದ್ಮೇಲೆ ಫ್ರೆಂಡ್. ಅದು ಮದುವೆವರೆಗೂ ಹೋಗುವಂತಹ ಫ್ರೆಂಡ್‌ಶಿಫ್ ಅಲ್ಲ ಅನ್ನೋ ಕ್ಲಾರಿಟಿ ನಮಗೆ ಇದೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.