ಸೀರೆ ಉಡೋದಕ್ಕು ಸೈ; ಬಿಕಿ ನಿ ಹಾಕುದಕ್ಕು ಸೈ ಎಂದ ಭೂಮಿ ಶೆಟ್ಟಿ

 | 
Js

ಕನ್ನಡ ಕಿರುತೆರೆಯಲ್ಲಿ ಕಿನ್ನರಿ ಧಾರಾವಾಹಿ ಮೂಲಕ ಅಭಿಮಾನಿಗಳ ಮನಸ್ಸನ್ನು ಗೆದ್ದ ಭೂಮಿ ಶೆಟ್ಟಿ ಬಿಗ್‌ಬಾಸ್ ಮನೆಗೆ ಹೋಗಿ ಬಂದ ನಂತರ ತಮ್ಮ ಚಾರ್ಮ್‌ ಬದಲಿಸಿಕೊಂಡಿದ್ದರು. ಎಷ್ಟರಮಟ್ಟಿಗೆ ಎಂದರೆ ಭೂಮಿಯನ್ನು ಕನ್ನಡದ ಊರ್ಫಿ ಎಂದೇ ಕರೆದಿದ್ದರು. ಆದರೆ, ಬಹುದಿನಗಳ ಬಳಿಕ ಭೂಮಿಶೆಟ್ಟಿ ಸಿಂಪಲ್ ಸೀರೆಯನ್ನುಟ್ಟು ಪೋಸ್ ಕೊಟ್ಟು ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿದ್ದಾರೆ. 

ಬಾಲನಟಿ ಕಿನ್ನರಿಯ ಮುಖ ಯಾರಿಗೆ ತಾನೇ ನೆನಪಿಲ್ಲ ಹೇಳಿ. ಲಂಗಾ ದಾವಣಿ, ಎರಡು ಪುಟ್ಟ ಜಡೆಗಳು, ಅದಕ್ಕೆ ಕಲರ್ ಕಲರ್ ರಿಬ್ಬನ್ ಕಟ್ಟಿ  ಹಳೆಯ ಕಿನ್ನರಿಯ ಪುಟಾಣಿಯನ್ನು ಮೀರಿಸುವ ರೀತಿಯಲ್ಲಿ ಪಕ್ಕಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದ ಭೂಮಿ ಶೆಟ್ಟಿ ನಿಜ ಜೀವನ ಅದಕ್ಕೆ ತದ್ವಿರುದ್ಧವೇ ಆಗಿತ್ತು. ಬೆನ್ನು ಕಾಣುವ ಡ್ರೆಸ್ ಧರಿಸಿ ಬೋಲ್ಡ್ ಆಗಿ ಮಿಂಚಿದ್ದರು.

ಕನ್ನಡದ ಕಿರುತೆರೆ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಮಿಂಚಬೇಕು ಎಂದು ಕಾಯುವ ಬಹುತೇಕರಿಗೆ ಬಿಗ್‌ಬಾಸ್ ಮನೆ ಒಂದು ಉತ್ತಮ ವೇದಿಕೆಯನ್ನೂ ಕಲ್ಪಿಸಿಕೊಟ್ಟಿತ್ತು. ಮೊದಲ ಐದಾರು ಬಿಗ್‌ಬಾಸ್‌ ಸೀಸನ್‌ಗಳಲ್ಲಿ ಕಾಣಿಸಿಕೊಂಡ ಬಹುತೇಕ ಕಂಟೆಸ್ಟೆಂಟ್‌ಗಳು ಒಂದು ಹಂತವನ್ನು ದಾಟಿ ಹೋಗಿದ್ದಾರೆ.ಬಿಗ್‌ಬಾಸ್ ಸೀಸನ್-7 ಸ್ಪರ್ಧಿಯಾಗಿದ್ದ ಭೂಮಿ ಶೆಟ್ಟಿ ಕೂಡ ತಮ್ಮ ಸೃಜನಾತ್ಮಕ ಕಲೆಗಳಿಂದಲೇ ಕಷ್ಟಪಟ್ಟು ಕಲಾ ಕ್ಷೇತ್ರದಲ್ಲಿ ಸಾಗುತ್ತಿದ್ದಾರೆ.

ಭೂಮಿ ಶೆಟ್ಟಿ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದು, ದೊಡ್ಡ ಮಟ್ಟದ ಯಶಸ್ಸಿಗಾಗಿ ಕಾಯುತ್ತಿದ್ದಾರೆ.ಹಳ್ಳಿ ಹುಡುಗಿ ಸಾಂಪ್ರದಾಯಿಕ ಉಡುಗೆಯಲ್ಲಿಯೇ ನೋಡಿದ್ದ ಕಿನ್ನರಿ ಖ್ಯಾತಿಯ ಭೂಮಿ ಶೆಟ್ಟಿ ಬಿಗ್‌ಬಾಸ್ ಮನೆಯಿಂದ ಹೊರಬಂದ ನಂತರ ತಮ್ಮ ಹಾಟ್ ಲುಕ್ ಪ್ರದರ್ಶನ ಮಾಡಿದ್ದರು. 

ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಇರುವ ಭೂಮಿ ಶೆಟ್ಟಿ ಲೈಫ್‌ಸ್ಟೈಲ್‌ನಲ್ಲಿ ಭಾರಿ ಬದಲಾವಣೆ ಮಾಡಿಕೊಂಡಿದ್ದಾರೆ ಎನ್ನುವುದು ಮಾತ್ರ ಎಲ್ಲರಿಗೂ ಕಾಣಿಸುತ್ತದೆ. ತಮ್ಮ ತರಹೇವಾರಿ ಡ್ರೆಸ್ಸಿಂಗ್ ಸ್ಟೈಲ್, ಹೇರ್ ಸ್ಟೈಲ್ ಹಾಗೂ ಬೈಕ್ ಸ್ಟಂಟ್ಸ್‌ನಿಂದಾಗಿ ಪಡ್ಡೆಗಳ ಹಾಟ್ ಫೇವರೀಟ್ ಆಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾ‌ಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.