ಸೈಫ್ ಅಲಿ ಖಾನ್ ಪುತ್ರಿಯ ಕೈ ಹಿಡಿಯಲಿದ್ದಾರೆ ಖ್ಯಾತ ಬ್ಯುಸಿನೆಸ್ ಮ್ಯಾನ್;

 | 
U

ಸ್ಟಾರ್ ಕಿಡ್ ಆದರೂ ಅಭಿನಯದ ಮೂಲಕ ಮನೆಮಾತಾದ ನಟಿ ಸಾರಾ ಅಲಿ ಖಾನ್. ಸಿನಿಮಾಗಳ ಜೊತೆಗೆ ನಟಿ ಸಾರಾ ಅಲಿ ಖಾನ್ ಆಗಾಗ ಲವ್ ಲೈಫ್ ವಿಚಾರವಾಗಿಯೂ ಸುದ್ದಿ ಆಗ್ತಿದ್ದಾರೆ. ಕಾರ್ತಿಕ್ ಆರ್ಯನ್ ಅವರಿಂದ ಹಿಡಿದು ಕ್ರಿಕೆಟಿಗ ಶುಭ್ ಮನ್ ಗಿಲ್ ವರೆಗೆ ಅನೇಕರ ಜೊತೆ ಸಾರಾ ಅಲಿ ಖಾನ್ ಹೆಸರು ತಳುಕು ಹಾಕಿಕೊಂಡಿತ್ತು.

ಇದೀಗ ನಟಿ ಸಾರಾ ಅಲಿ ಖಾನ್ ಶೀಘ್ರದಲ್ಲೇ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡ್ತಿದೆ. ಅಷ್ಟೇ ಅಲ್ಲದೇ ನಟಿ ಸಾರಾ ತಮ್ಮ ಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಂಡಿದ್ದು, ಅತಿ ಶೀಘ್ರದಲ್ಲಿಯೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ.

ನಟಿ ಸಿನಿಮಾ ಜೀವನಕ್ಕೆ ಗುಡ್ ಬೈ ಹೇಳಿ ಸಂಸಾರಕ್ಕೆ ಕಾಲಿಡುತ್ತಾರೆ ಎಂದು ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ರೆಡ್ಡಿಟ್ ನಲ್ಲಿನ ಪೋಸ್ಟ್ ಕಾಡ್ಗಿಚ್ಚಿನಂತೆ ವೈರಲ್ ಆಗುತ್ತಿದೆ. ಇದರಲ್ಲಿ ಸಾರಾ ಅಲಿ ಖಾನ್ ಶ್ರೀಮಂತ ಉದ್ಯಮಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಮತ್ತು ಈಗ ಅವರು ಮದುವೆಯಾಗಲಿದ್ದಾರೆ ಎಂದು ಹೇಳಲಾಗಿದೆ.

ಸಾರಾ ಅಲಿ ಖಾನ್ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದೇ ವರ್ಷ ಮದುವೆಯಾಗಲಿದ್ದಾರೆ ಎಂದು ಪೋಸ್ಟ್​ನಲ್ಲಿ ಬರೆಯಲಾಗಿದೆ. ಸಾರಾ ಅಲಿ ಖಾನ್ ಇದೀಗ ಮೆಟ್ರೋ ಸಿನಿಮಾ ಚಿತ್ರೀಕರಣವನ್ನು ಶೀಘ್ರದಲ್ಲೇ ಮುಗಿಸಲಿದ್ದಾರೆ. ಅವರು ಯಾವುದೇ ಹೊಸ ಚಿತ್ರಕ್ಕೆ ಸಹಿ ಹಾಕಿಲ್ಲ. ಶೀಘ್ರದಲ್ಲೇ ಸಾರಾ ಮದುವೆ ಆಗಲಿದ್ದು, ಮದುವೆಯ ತಯಾರಿಯನ್ನು ಪ್ರಾರಂಭಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ