ಎರಡು ಮಗು ಆದ ಬಳಿಕ ಕರೀನಾ ಜೊತೆ ಸೈಫ್ ಜಗಳ; 'ಅವನಿಗೆ ಇವಾಗ ಬೇಕಿಲ್ಲ ನಾನು'
ಬಾಲಿವುಡ್ ನಲ್ಲಿ ವಿಚ್ಛೇದನದ ಸುದ್ದಿಯೇ ಸದ್ದು ಮಾಡ್ತಿದೆ. ಇತ್ತೀಚೆಗೆ ನಟಿ ನತಾಶಾ ಸ್ಟಾಂಕೋವಿಕ್ ಮತ್ತು ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ತಮ್ಮ ವಿಚ್ಛೇದನ ಘೋಷಿಸಿದರು. ಮದುವೆಯಾದ 4 ವರ್ಷಗಳ ನಂತರ ಇಬ್ಬರೂ ಬೇರ್ಪಟ್ಟರು. ಇತ್ತ ಬಚ್ಚನ್ ಕುಟುಂಬ ಹಾಗೂ ಸೊಸೆ ಐಶ್ವರ್ಯಾ ರೈ ನಡುವೆ ಭಿನ್ನಾಭಿಪ್ರಾಯದ ಸುದ್ದಿಗಳು ಹರಿದಾಡುತ್ತಲೇ ಇದೆ.
ಈ ಸುದ್ದಿಗಳ ನಡುವೆ ಬಾಲಿವುಡ್ ಬೆಬೋ ಅಂದರೆ ಕರೀನಾ ಕಪೂರ್ ತಮ್ಮ ಮತ್ತು ಸೈಫ್ ಅಲಿ ಖಾನ್ ನಡುವಿನ ಜಗಳಗಳ ಬಗ್ಗೆ ಮಾತಾಡಿದ್ದಾರೆ.ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು 12 ವರ್ಷಗಳೇ ಕಳೆದಿದೆ. ಇಬ್ಬರು ಮಕ್ಕಳ ಪೋಷಕರಾಗಿರುವ ಕರೀನಾ ಮತ್ತು ಸೈಫ್ ನಡುವೆ ಸಾಕಷ್ಟು ಜಗಳಗಳು ನಡೆಯುತ್ತಿವೆ. ಇದರ ಬಗ್ಗೆ ಸ್ವತಃ ಬೆಬೋ ಹೇಳಿಕೊಂಡಿದ್ದಾರೆ.
ಬೆಬೋ ಇತ್ತೀಚೆಗಷ್ಟೇ ತನ್ನ ಸಿನಿ ಕೆರಿಯರ್ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ಇತ್ತೀಚೆಗಷ್ಟೇ ‘ದಿ ವೀಕ್’ ಜೊತೆ ಮಾತನಾಡುತ್ತಿದ್ದ ಕರೀನಾ ಕಪೂರ್ ಮದುವೆಯ ನಂತರ ತಮ್ಮ ಸಿನಿ ಕೆರಿಯರ್ ನಲ್ಲಿ ಹಲವು ಬದಲಾವಣೆ ಆಗಿದೆ ಎಂದು ಹೇಳಿದ್ರು. ಸೈಫ್ ಅವರೊಂದಿಗಿನ ವಿವಾಹವು ತನ್ನನ್ನು ಹೆಚ್ಚು ಜವಾಬ್ದಾರಿಯುತವಾಗಿ ಮಾಡಿದ್ರು. ಕೆಲವೊಮ್ಮೆ ಏಳು-ಬೀಳುಗಳನ್ನು ಕಂಡಿದೆ ಎಂದು ಕರೀನಾ ಹೇಳಿದ್ದಾರೆ.
ನಾನು ಮತ್ತು ಸೈಫ್ ಇಬ್ಬರೂ ಒಬ್ಬರನ್ನೊಬ್ಬರು ನೋಡಿಕೊಳ್ತೇವೆ. ಮದುವೆಯಾದ ಬಳಿಕ ನಾನು ಕೂಡ ಅವಲಂಬಿತಳಾಗಿ ಬಿಟ್ಟೆ ಎನ್ನುವಂತೆ ಕರೀನಾ ಮಾತಾಡಿದ್ದಾರೆ. ನಾನು ಮತ್ತು ಸೈಫ್ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೂ ಒಬ್ಬರನ್ನೊಬ್ಬರು ಭೇಟಿಯಾಗದೇ ಇರುವ ದಿನಗಳು ಕೂಡ ಇವೆ ಎಂದ್ರು.
ಇಬ್ಬರು ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿ ಇದ್ದ ವೇಳೆ ಭೇಟಿಗೂ ಸಿಕ್ಕಿಲ್ಲ. ನಾನು ಕೆಲಸಕ್ಕೆ ಹೋದಾಗ ಮಲಗಿರುವರು ನಾನು ಬಂದಾಗ ಅವರು ಶೂಟಿಂಗ್ ನಲ್ಲಿ ಇರುತ್ತಾರೆ ಈಗೇ ನಡೆಯುತ್ತಲೇ ಇರುತ್ತದೆ ಎಂದು ಕರೀನಾ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.