'ನನ್ನ ಮಗಳು ಎಂದು ಕರೆಯುತ್ತಿದ್ದ ಸೈಫ್' ಇವತ್ತು ನನಿಗೆ ಎರಡು ಮಗು ಹುಟ್ಟಿಸಿದ್ದಾನೆ ಎಂದ ಕರೀನಾ

 | 
Sd

ಇದು ಫಾಸ್ಟ್ ಜಮಾನ ಕಣ್ರೀ ಇವತ್ತು ಇದ್ದವನು ನಾಳೆ ಇಲ್ಲವಾಗಬಹುದು ಹಾಂಗಾಗಿ ಕುಡೀರಿ, ತಿನ್ನಿ, ಮಜಾ ಮಾಡಿ ಅನ್ನೊ ಹ್ಯಾಬಿಟ್ ಎಲ್ಲರಲ್ಲೂ ಬೆಳೆಯುತ್ತಿದೆ. ಅದಕ್ಕೆ ತಕ್ಕ ಹಾಗೆ ಸೆಲೆಬ್ರಿಟಿಗಳು ಕುಣಿಯುತ್ತಿದ್ದಾರೆ. ಕಲರ್ ಫುಲ್ ದುನಿಯಾದಲ್ಲಿ ಅಫೇರು, ಬ್ರೇಕಪ್ಪು, ಪ್ಯಾಚಪ್ಪು ಕಾಮನ್ ಎನ್ನುವಂತಾಗಿದೆ. ಇವತ್ತು ಕೈ ಕೈ ಹಿಡಿದು, ಜೊತೆಯಾಗಿ ಹಿತವಾಗಿ ಅಂತ ಹಾಡಿದವರು, ನಾಳೆ ನಾನೊಂದು ತೀರ, ನೀನೊಂದು ತೀರ ಅಂತ ಬ್ರೇಕಪ್ ಹಾಡು ಹಾಡೋದು ಹೊಸ ವಿಷಯವೇನಲ್ಲ. 

ಅದರಲ್ಲೂ ಬಾಲಿವುಡ್ ನಲ್ಲಿ ಇದು ಸರ್ವೇ ಸಾಮಾನ್ಯ ಎಂಬಂತಾಗಿ ಬಿಟ್ಟಿದೆ. ಅಲ್ಲಿ ಒಬ್ಬರ ಸಂಸಾರ ಸಹ ನೆಟ್ಟಗಿಲ್ವೆನೋ ಅನಿಸದೆ ಇರದು. ಸದ್ಯ ಯಾಕಪ್ಪ ಈ ವಿಚಾರ ಅಂತಂದ್ರೆ? ಕರೀನಾ ಕಪೂರ್ ಹಾಗೂ ಸೈಫ್ ಆಲಿಖಾನ್ ನಡುವೆ ಎಲ್ಲವೂ ಸರಿ ಇಲ್ಲ ಎಂಬ ಮ್ಯಾಟರ್ ಇದ್ದಕ್ಕಿದ್ದಂತೆ ಮುಂಬೈ ಟು ಬೆಂಗಳೂರು ಸುದ್ದಿ ಮಾಡ್ತಾ ಇದೆ. ಬಾಲಿವುಡ್​​ನ ಸದ್ಯದ ಯಶಸ್ವಿ ಜೋಡಿಗಳಲ್ಲಿ ಒಂದೆನಿಸಿದೆ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಜೋಡಿ.

ಎಲ್ಲರಿಗೂ ತಿಳಿದಿರುವಂತೆ ಸೈಫ್ ಅಲಿಖಾನ್ ಅವರಿಗೆ ಕರೀನಾ ಅವರ ಜೊತೆಗಿನದ್ದು ಎರಡನೇ ಮದುವೆ. ಕರೀನಾ ಜೊತೆ ಸಂಸಾರದ ಗೀತೆ ಹಾಡುವ ಮುನ್ನ ಸೈಫ್ ಆಲಿಖಾನ್ ನಟಿ ಅಮೃತಾ ಸಿಂಗ್ ಅವರ ಜೊತೆ ಮದುವೆಯಾಗಿದ್ದರು. ತಮ್ಮ ಮೊದಲ ಮದುವೆಗೆ ಬಂದಿದ್ದ ಕರೀನಾ ಕಪೂರ್ ಅವರನ್ನು ಮಗಳೇ ಎಂದು ಕರೆದಿದ್ದ ಸೈಫ್ ಅಲಿಖಾನ್ ನಂತರ ಆಕೆಯನ್ನೇ ಮದುವೆಯಾಗಿ ಟ್ರೋಲ್ಗೂ ಒಳಗಾಗಿದ್ದಿದೆ.

ಅದೇನೇ ಇದ್ದರೂ ಸದ್ಯ ಈ ದಂಪತಿಗೆ ಇಬ್ಬರು ಪುತ್ರರಿದ್ದಾರೆ.. ಸೈಫ್ ಅಲಿ ಖಾನ್ ಕರೀನಾರಿಗಿಂತಲೂ 10 ವರ್ಷ ದೊಡ್ಡವರು. 5 ವರ್ಷಗಳ ಕಾಲ ಲಿವ್-ಇನ್  ಸಂಬಂಧದಲ್ಲಿದ್ದ ಈ ಜೋಡಿ ಕೊನೆಗೆ ಮದುವೆಯಾಗಿತ್ತು. ಇದೀಗ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ನಡುವೆ ಭಾರಿ ಬಿರುಕು ಬಿಟ್ಟಿದೆ ಎಂಬ ಸಂಶಯ ಕಾಡುತ್ತಿದೆ. ಇದು ದೊಡ್ಡ ಮಟ್ಟದಲ್ಲಿ ಹಲ್ ಚಲ್ ಎಬ್ಬಿಸಿದೆ. ಅಂದ್ಹಾಗೆ ಇವರಿಬ್ರ ಸಂಸಾರದಲ್ಲಿ ಬಿರುಕು ಮೂಡಿದೆ ಎಂಬುದಕ್ಕೆ ಪುರಾವೆ ನೀಡಿರೋದು ಸೈಫ್ ಆಲಿಖಾನ್ ಕೈಯಲ್ಲಿರೋ ಟ್ಯಾಟು ಬದಲಾಗಿರೋದು ಎನ್ನುತ್ತಿದ್ದಾರೆ ಅಭಿಮಾನಿಗಳು.