ಸಲ್ಲು ಮತ್ತು ನಾನು ಪ್ರೀತಿಸುತ್ತಿದ್ದೇವೆ, 2ನೇ ಮದ್ವೆ ಬಗ್ಗೆ ಸಾನಿಯಾ ಮಿಜಾ೯ ಓಪನ್ ಟಾಕ್
Sep 13, 2024, 15:15 IST
|
ಮೂಗುತಿ ಸುಂದರಿ ಸದ್ಯ ಸಾನಿಯಾ ಮಿರ್ಜಾ ತನ್ನ ಮಗನೊಂದಿಗೆ ಜೀವನ ನಡೆಸುತ್ತಿದ್ದಾರೆ. ಶೋಯೆಬ್ ಮಲಿಕ್ʼನಿಂದ ವಿಚ್ಛೇದನ ಪಡೆದ ನಂತರ ಆಕೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಅದರಲ್ಲಿ ಒಂದು ಕ್ರಿಕೆಟಿಗ ಮೊಹಮ್ಮದ್ ಶಮಿ ಜೊತೆ ಎರಡನೇ ಮದುವೆಯಾಗುತ್ತಿದ್ದಾರೆ ಎಂಬ ಮಾತು ಎಲ್ಲೆಡೆ ವೈರಲ್ ಅಗಿತ್ತು .
ಆದರೆ ಇದೀಗ ಸಾನಿಯಾ ಮಿರ್ಜಾ ಮತ್ತು ಸಲ್ಮಾನ್ ಖಾನ್ ಬಗ್ಗೆ ಚರ್ಚೆ ನಡೆಯುತ್ತಿದೆ. ಸಲ್ಮಾನ್ ಖಾನ್ ಮತ್ತು ಸಾನಿಯಾ ಮಿರ್ಜಾ ಅದೆಷ್ಟೋ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ವಿಚಾರವನ್ನಿಟ್ಟುಕೊಂಡೇ, ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆಯೇ? ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ.
ಸಾನಿಯಾ ಮಿರ್ಜಾ ಮತ್ತು ಸಲ್ಮಾನ್ ಖಾನ್ ನಡುವಿನ ಸಂಬಂಧ ತುಂಬಾ ನಿಕಟವಾದ್ದು. ಇದೇ ಕಾರಣದಿಂದ ಇದು ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಅಷ್ಟೆ ಅಲ್ಲದೆ ಸಾನಿಯಾ ಮಿರ್ಜಾ ಮತ್ತು ಸಲ್ಮಾನ್ ಖಾನ್ ಮದುವೆಯಾಗುತ್ತಾರೆ ಎಂಬ ಸುದ್ದಿ ಕೇಳಿಬಂದಿತ್ತು ಆದರೆ ಅದು ವದಂತಿಯಲ್ಲದೆ ಬೇರೇನೂ ಅಲ್ಲ. ಇಬ್ಬರೂ ಒಬ್ಬರನ್ನೊಬ್ಬರು ಕುಟುಂಬದವರಂತೆ ನೋಡಿಕೊಳ್ಳುತ್ತಾರೆ.
ಈ ಹಿಂದೆ ಕೂಡ ಸಾನಿಯಾ ಮಿರ್ಜಾ ಅವರ ಪುಸ್ತಕ ಬಿಡುಗಡೆಗೆ ಸಲ್ಮಾನ್ ಖಾನ್ ಸಾಕಷ್ಟು ಬೆಂಬಲ ನೀಡಿದ್ದರು. ಇದಲ್ಲದೇ ಲಾಂಚ್ ಆದ ದಿನ ಸಲ್ಮಾನ್ ಖಾನ್ ಕೂಡ ಆಗಮಿಸಿದ್ದರು. ಆ ಸಂದರ್ಭದ ಫೋಟೋಗಳು ಭಾರೀ ವೈರಲ್ ಆಗಿತ್ತು.ಇವೆಲ್ಲದರ ಹೊರತಾಗಿ ಭಾರೀ ಸುದ್ದಿಯಾಗಿದ್ದು ಸಾನಿಯಾ ನೀಡಿದ್ದ ಹೇಳಿಕೆ. ಅದೇನೆಂದರೆ, ಕಾಫಿ ವಿತ್ ಕರಣ್ ಶೋನಲ್ಲಿ ತಾನು ಸಲ್ಮಾನ್ ಖಾನ್ ಅವರನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿರುವುದು. ಎಲ್ಲರ ಗಮನ ಸೆಳೆದಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.